ಬೆಂಗಳೂರು: ರಾಜ್ಯದಲ್ಲಿ ಕೊರೊನಾಸುರನ ಆರ್ಭಟ ಮುಂದುವರಿದಿದ್ದು, ಇಂದು 16 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕಿತರ ವಿವರ:
1. ರೋಗಿ 428 : 32 ವರ್ಷದ ಪುರುಷನಾಗಿದ್ದು, ವಿಜಯಪುರದ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕದಲ್ಲಿದ್ದರು.
2. ರೋಗಿ 429: 25 ವರ್ಷದ ಮಹಿಳೆಯಾಗಿದ್ದು, ವಿಜಯಪುರದ ನಿವಾಸಿ. ಸಂಪರ್ಕ ಇನ್ನು ಪತ್ತೆಯಾಗಿಲ್ಲ.
3. ರೋಗಿ 430: 30 ವರ್ಷದ ಮಹಿಳೆಯಾಗಿದ್ದು, ಹುಬ್ಬಳ್ಳಿಯ ನಿವಾಸಿ. ರೋಗಿ ನಂಬರ್ 236ರ ಸಂಪರ್ಕದಲ್ಲಿದ್ದರು.
4. ರೋಗಿ 431: 13 ವರ್ಷದ ಬಾಲಕಿಯಾಗಿದ್ದು, ಹುಬ್ಬಳ್ಳಿ ನಿವಾಸಿ. ರೋಗಿ ನಂಬರ್ 236ರ ಸಂಪರ್ಕದಲ್ಲಿದ್ದರು.
5. ರೋಗಿ 432: 78 ವರ್ಷದ ವೃದ್ಧೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿ. ರೋಗಿ ನಂಬರ್ 390ರ ಸಂಪರ್ಕದಲ್ಲಿದ್ದರು.
6. ರೋಗಿ 433: 30 ವರ್ಷದ ಪುರುಷನಾಗಿದ್ದು, ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
7. ರೋಗಿ 434: 60 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
8. ರೋಗಿ 435: 22 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
9. ರೋಗಿ 436 : 40 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
10. ರೋಗಿ 437: 30 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
11. ರೋಗಿ 438: 25 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
12. ರೋಗಿ 439: 37 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
13. ರೋಗಿ 440: 43 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
14. ರೋಗಿ 441: 41 ವರ್ಷದ ಪುರುಷನಾಗಿದ್ದು, ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು.
15. ರೋಗಿ 442: 47 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ರೋಗಿ ನಂಬರ್ 171 ಮತ್ತು 371ರ ಸಂಪರ್ಕದಲ್ಲಿದ್ದರು.
16. ರೋಗಿ 443: 28 ವರ್ಷದ ಮಹಿಳೆಯಾಗಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ. ರೋಗಿ ನಂಬರ್ 179ರ ಸಂಪರ್ಕದಲ್ಲಿದ್ದರು.
ಒಟ್ಟಾರೆ ಬೆಂಗಳೂರಿನಲ್ಲಿ 9, ವಿಜಯಪುರ, ಹುಬ್ಬಳ್ಳಿ ಮತ್ತು ಮಂಡ್ಯದಲ್ಲಿ ತಲಾ ಎರಡು ಪ್ರಕರಣಗಳ ಹಾಗೂ ದಕ್ಷಿಣ ಕನ್ನಡದ ಬಂಟ್ವಾಳ ವೃದ್ಧೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.








