ರಷ್ಯಾದಲ್ಲಿ ನಾಪತ್ತೆಯಾಗಿದ್ದ ವಿಮಾನ ಪತನ – ಮೃತದೇಹಗಳು ಪತ್ತೆ
ರಷ್ಯಾದಲ್ಲಿ ಕಾಣೆಯಾಗಿದ್ದ ಎಎನ್ -26 ಪತನವಾಗಿದ್ದು, ಮೃತದೇಹಗಳು ಪತ್ತೆಯಾಗಿವೆ.. ಪೂರ್ವ ಕರಾವಳಿ ತೀರ ಪ್ರದೇಶದಲ್ಲಿ ವಿಮಾನ ಪತ್ತೆಯಾಗಿದ್ದು, 19 ಪ್ರಯಾಣಿಕರು ಮತ್ತು ಸಿಬ್ಬಂದಿಯ ಮೃತದೇಹಗಳು ಪತ್ತೆಯಾಗಿವೆ.
ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಬರ್ಬರ ಹತ್ಯೆ
ಒಟ್ಟು 28 ಜನರಿದ್ದ ವಿಮಾನವು ಮಂಗಳವಾರ ಪಲಾನಾಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆದಲ್ಲೇ ಕೆಟ್ಟ ಹವಾಮಾನದ ಕಾರಣ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿನ ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ. ಸಾವಿಗೀಡಾದವರಲ್ಲಿ ಪಲಾನಾದ ಸ್ಥಳೀಯ ಸರ್ಕಾರದ ಮುಖ್ಯಸ್ಥ ಓಲ್ಗಾ ಮೊಖಿರೇವಾ ಅವರೂ ಇದ್ದಾರೆ ಎಂದು ಕಮ್ಚಟ್ಕಾ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ರಷ್ಯಾದ ಪೂರ್ವ ಕರಾವಳಿಯ ಬಂಡೆಗಳ ಪ್ರದೇಶದಲ್ಲಿ ವಿಮಾನವ ಅವಶೇಷಗಳು ಸಂಜೆ ಪತ್ತೆಯಾಗಿವೆ. ಅಪಘಾತಕ್ಕೀಡಾದ ಸ್ಥಳದಲ್ಲಿ ಕತ್ತಲೆ ಇದ್ದುದ್ದರಿಂದ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಿಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.