ಜುಲೈ 16ಕ್ಕೆ ರಿಲೀಸ್ ಆಗಲ್ಲ ‘KGF 2’ : ಪ್ರಶಾಂತ್ ನೀಲ್ ಹೇಳಿದ್ದೇನು..?
ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕೆಜಿಎಫ್ ಸಿನಿಮಾ ಬಹುನಿರೀಕ್ಷೆಯ ಸಿನಿಮಾಗಳ ಲಿಸ್ಟ್ ನಲ್ಲಿ ನಂಬರ್ ಸ್ಥಾನ ಪಡೆದಿದೆ.. ಅಲ್ಲದೇ ಇತ್ತೀಚೆಗೆ ಸಿನಿಮಾದ ಆಡಿಯೋ ರೈಟ್ಸ್ ಅನ್ನ ಲಹರಿ ಸಂಸ್ಥೆ ಅತಿ ಹೆಚ್ಚು ರೇಟ್ ಗೆ ಖರೀದಿಸಿದ್ದು, ಕೆಜಿಎಫ್ ಹೆಸರಿಗೆ ಹೊಸ ದಾಖಲೆ ಸೇರಿಕೊಂಡಿದೆ..
ಈ ನಡುವೆ ಕೊರೊನಾ ಹಾವಳಿಯಿಂದಾಗಿ ನಿರೀಕ್ಷೆಯಂತೆಯೇ ಕೆಜಿಎಫ್ 2 ಸಿನಿಮಾ ದಿನಾಂಕ ಮುಂದೂಡಿಕೆಯಾಗಿದೆ. ಹೌದು ಎಲ್ಲಾ ಅಂದುಕೊಂತೆಯೇ ಆಗಿದ್ರೆ ಜುಲೈ 16ಕ್ಕೆ ಸಿನಿಮಾ ಥಿಯೇಟರ್ ಗಳಿಗೆ ಅಪ್ಪಳಿಸಬೇಕಾಗಿತ್ತು.. ಆದ್ರೆ ಆದರೆ ಇದೀಗ ಚಿತ್ರತಂಡ ಹೇಳಿರುವ ಪ್ರಕಾರ, ಕೆಜಿಎಫ್ 2 ಸಿನಿಮಾ ಜುಲೈ 16ಕ್ಕೆ ಬಿಡುಗಡೆ ಆಗುವುದಿಲ್ಲ.
ಸಿನಿಮಾ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿರುವ ಹೊಂಬಾಳೆ ಫಿಲಮ್ಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್, ”ಗ್ಯಾಂಗ್‌ಸ್ಟರ್‌ಗಳಿಂದ ಹಾಲ್ ತುಂಬಿದ್ದಾಗ ಮಾತ್ರವೇ ಮಾನ್ಸ್ಟರ್ (ರಾಕ್ಷಸ) ಬರುತ್ತಾನೆ. ಮಾನ್ಸ್ಟರ್ ಬರಲಿರುವ ಹೊಸ ದಿನಾಂಕವನ್ನು ಶೀಘ್ರವಾಗಿಯೇ ಘೋಷಿಸುತ್ತೇವೆ” ಎಂದಿದ್ದಾರೆ.
ಕೊರೊನಾ 2ನೇ ಅಲೆ ಕಾರಣದಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಬಂದ್ ಆಗಿವೆ. ತೆಲಂಗಾಣ, ಆಂಧ್ರ, ಗುಜರಾತ್ ಹೊರತುಪಡಿಸಿ ಇನ್ನಾವ ರಾಜ್ಯಗಳಲ್ಲಿಯೂ ಚಿತ್ರಮಂದಿರಗಳು ತೆರೆದಿಲ್ಲ. ಕರ್ನಾಟಕದಲ್ಲೂ ಇನ್ನೂ ಸಿನಿಮಾ ಮಂದಿರಗಳಿಗೆ ಅವಕಾಶ ನೀಡಲಾಗಿಲ್ಲ.
ಒಂದು ಪಕ್ಷ ಕರ್ನಾಟಕದಲ್ಲಿ ಮಾತ್ರವೇ ಚಿತ್ರಮಂದಿರಗಳು ಓಪನ್ ಆದ್ರೂ ಸಿನಿಮಾ ರಿಲೀಸ್ ಆಗಲ್ಲ. ಕಾರಣ ಈ ಸಿನಿಮಾ ಇಡೀ ಬಾರತೀಯ ಸಿನಿಮಾ ರಂಗವೇ ನಿರೀಕ್ಷಿಸುತ್ತಿರುವ ಸಿನಿಮಾ ಆಗಿದೆ.. ಅಲ್ಲದೇ ರಾಖಿ ಭಾಯ್ ಹವಾ ಕೇವಲ ಭಾರತದಲ್ಲಿ ಅಷ್ಟೇ ಅಲ್ದೇ ವಿದೇಶದಲ್ಲಿಯೇ ಕ್ರೇಜ್ ಹುಟ್ಟುಹಾಕಿದೆ..
ಹೀಗಾಗಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಚಿತ್ರಮಂದಿರಗಳಲ್ಲಿ 100 % ಸೀಟಿಂಗ್ ಗೆ ಅನುಮತಿ ಸಿಕ್ಕಾಗ ಸಿನಿಮಾ ರಿಲೀಸ್ ಮಾಡಲಾಗುತ್ತೆ.. ಹೀಗಾಗಿ ಸಿನಿಮಾದ ನಿರೀಕ್ಷೆಯಲ್ಲಿರೋ ಅಭಿಮಾನಿಗಳಿಗೆ ಮತ್ತಷ್ಟು ದಿನ ಕಾಯಲೇಬೇಕಾದ ಅನಿವಾರ್ಯತೆ ಇದೆ..
ಇನ್ನೂ ಪ್ರಶಾಂತ್ ನೀಲ್ ಸಾರಥ್ಯದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ , ಸಾಂಗ್ , ಬಿಜಿಎಂ , ಮ್ಯೂಸಿಕ್ , ಆಕ್ಷನ್ ಸೀನ್ಸ್ , ಡೈಲಾಗ್ಸ್ ಕಥೆ , ಸೆಟ್ ಇಂದ ಹಿಡಿದು ಪ್ರತಿ ವಿಚಾರದಲ್ಲೂ ಅಭಿಮಾನಿಗಳ ಮನಗೆದ್ದಿದೆ.. ಇನ್ನೂ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ.. ಸಂಜಯ್ ದತ್ , ರವೀನಾ ತಂಡನ್ , ಪ್ರಕಾಶ್ ರಾಜ್ ಹೀಗೆ ಸ್ಟಾರ್ ನಟರ ದಂಡೇ ಚಿತ್ರದಲ್ಲಿದೆ.







