ರಷ್ಯಾದಲ್ಲಿ ಆಂಟೊನೊವ್ ಎಎನ್-26 ವಿಮಾನ ಪತನ : ಎಲ್ಲ 28 ಮಂದಿ ಸಾವು
ರಷ್ಯಾ : ಇತ್ತೀಚೆಗೆ ನಾಪತ್ತೆಯಾಗಿದ್ದ ರಷ್ಯಾದ AN 26 ವಿಮಾನದ ಭಗ್ನಾವಶೇಷಗಳು ರಷ್ಯಾದ ಪೂರ್ವ ಕರಾವಳಿ ಭಾಗದಲ್ಲಿ ಪತ್ತೆಯಾಗಿದ್ದು, ಸಿಬ್ಬಂದಿ ಸೇರಿ 28 ಮಂದಿ ಸಾವನಪ್ಪಿರೋದಾಗಿ ತಿಳಿದುಬಂದಿದೆ..
28 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ಮಂಗಳವಾರ ಪತನಗೊಂಡಿತ್ತು. ಇದೀಗ ಮೃತದೇಹಗಳು ಪತ್ತೆಯಾಗಿದ್ದ ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ. ಅವಳಿ ಇಂಜಿನ್ನ ಆಂಟೊನೊವ್ ಎಎನ್-26 ವಿಮಾನವು ಪೆಟ್ರೊಪವ್ಲೊವ್ಸ್ಕ್-ಕಮ್ಚಾಸ್ಕಿ ಎಂಬ ನಗರದಿಂದ ಕಮ್ಕಾಚ ಪರ್ಯಾಯ ದ್ವೀಪದ ಉತ್ತರದಲ್ಲಿರುವ ಪಾಲನ ಎಂಬ ಗ್ರಾಮಕ್ಕೆ ಹಾರುತ್ತಿದ್ದಾಗ ಸಂಚಾರ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ತುರ್ತುಪರಿಸ್ಥಿತಿ ಸಚಿವಾಲಯ ತಿಳಿಸಿದೆ.
ವಿಮಾನವು ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಭೂಸ್ಪರ್ಶಕ್ಕೆ ತಯಾರಾಗುತ್ತಿದ್ದಾಗ ಪರ್ವತವೊಂದಕ್ಕೆ ಢಿಕ್ಕಿ ಹೊಡೆದಿರಬೇಕೆಂದು ಭಾವಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿ 22 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎನ್ನಲಾಗಿದೆ.
ವಿಶ್ವದ ಪ್ರಸಿದ್ಧ ಆಹಾರಗಳ ದೇಶ… ಸುಂದರ ಪ್ರವಾಸಿತಾಣಗಳ ಆಗರ ಇಟಲಿ…! Intersting facts