ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮತ್ತೆ ಟೀಮ್ ಇಂಡಿಯಾ ಮನೆಯೊಂದು ಮೂರು ಬಾಗಿಲು ಆಗುತ್ತಿದೆಯಾ..?

admin by admin
July 8, 2021
in Newsbeat, Sports, ಕ್ರೀಡೆ
team india saakshatv
Share on FacebookShare on TwitterShare on WhatsappShare on Telegram

ಮತ್ತೆ ಟೀಮ್ ಇಂಡಿಯಾ ಮನೆಯೊಂದು ಮೂರು ಬಾಗಿಲು ಆಗುತ್ತಿದೆಯಾ..?

chethan sharma team india selection comitee saakshatvಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಮನವಿಗೆ ಆಯ್ಕೆ ಸಮಿತಿ ಸ್ಪಂದಿಸಿಲ್ಲ. ಹೀಗಾಗಿ ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಇಂಗ್ಲೆಂಡ್ ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳುತ್ತಿಲ್ಲ.
ಮುಖ್ಯವಾಗಿ ಪೃಥ್ವಿ ಶಾ ಅವರನ್ನು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕಳುಹಿಸಿಕೊಡುವಂತೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರಿಗೆ ಇ-ಮೇಲ್ ಮೂಲಕ ಮನವಿ ಮಾಡಿಕೊಂಡಿತ್ತು. ಆದ್ರೆ ಚೇತನ್ ಶರ್ಮಾ ಅವರು ಇ-ಮೇಲ್‍ಗೆ ಯಾವುದೇ ರೀತಿಯ ಉತ್ತರ ನೀಡಿರಲಿಲ್ಲ.
ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಜೊತೆ ಇಬ್ಬರು ಆರಂಭಿಕ ಆಟಗಾರರು ಇದ್ದಾರೆ. ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ತಂಡದಲ್ಲಿದ್ದಾರೆ. ಜೊತೆಗೆ ಅಭಿಮನ್ಯು ಈಶ್ವರನ್ ಕೂಡ ಸೇರಿಕೊಂಡಿದ್ದಾರೆ. ಹೀಗಾಗಿ ಆರಂಭಿಕ ಆಟಗಾರರ ಅವಶ್ಯಕತೆ ಇಲ್ಲ ಅನ್ನೋದು ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಅಭಿಮತವಾಗಿದೆ.
prithvi shaw team india saakshatvಆದ್ರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರಿಗೆ ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ಮೇಲೆ ನಂಬಿಕೆ ಇಲ್ವಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಹಾಗೇ ಅಭಿಮನ್ಯು ಈಶ್ವರನ್ ಅವರ ಆಯ್ಕೆ ಕೂಡ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಗೆ ಸಮಾಧಾನ ತಂದಿಲ್ಲ.
ಈ ನಡುವೆ, ಕೆ.ಎಲ್. ರಾಹುಲ್ ಅಥವಾ ಮಯಾಂಕ್ ಅಗರ್ ವಾಲ್ ಪೈಕಿ ಒಬ್ಬರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಅದೇ ರೀತಿ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಫಾರ್ಮ್ ನಲ್ಲಿಲ್ಲ. ಹೀಗಾಗಿ ಅವರ ಜಾಗದಲ್ಲಿ ಮಯಾಂಕ್ ಅಥವಾ ರಾಹುಲ್ ಆಡುವ ಸಾಧ್ಯತೆಗಳು ಕೂಡ ಇವೆ. ಹಾಗಾಗಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಪೃಥ್ವಿ ಶಾಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಮಣೆ ಕೂಡ ಹಾಕಿರಬಹುದು.
ಇನ್ನೊಂದೆಡೆ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಬಿಸಿಸಿಐ ಕೂಡ ಮೌನ ವಹಿಸಿದೆ. ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅವರು ಶ್ರೀಲಂಕಾ ಸರಣಿಯನ್ನು ಆಡಲಿದ್ದಾರೆ. ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಕೂಡ ಮುಂದಾಗಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್, ಆಯ್ಕೆ ಸಮಿತಿ ಮತ್ತು ಬಿಸಿಸಿಐ ನಡುವೆ ಸಹಮತವಿಲ್ಲ ಎಂಬುದು ಗೊತ್ತಾಗುತ್ತಿದೆ. ತಂಡದ ಆಯ್ಕೆಯ ವಿಚಾರದಲ್ಲಿ ಭಿನ್ನಸ್ವರಗಳು ಕೇಳಿಬರುತ್ತಿವೆ. ಈ ಹಿಂದೆ ಸುನೀಲ್ ಜೋಶಿ, ಎಮ್.ಎಸ್.ಕೆ. ಪ್ರಸಾದ್ ಸೇರಿದಂತೆ ಕಳೆದ ಹತ್ತು ವರ್ಷಗಳಿಂದ ಟೀಮ್ ಇಂಡಿಯಾದ ಆಯ್ಕೆ ವಿಚಾರದಲ್ಲಿ ಅಷ್ಟೊಂದು ಗೊಂದಲಗಳು ಇರಲಿಲ್ಲ. ಕೆಲವೊಂದು ಬಾರಿ ಕಠಿಣ ನಿರ್ಧಾರವನ್ನು ಆಯ್ಕೆ ಸಮಿತಿಯು ತೆಗೆದುಕೊಂಡಿದ್ರೂ bcci team india saakshatvಅದರ ವಿರುದ್ಧ ಬಹಿರಂಗವಾಗಿ ಎಲ್ಲೂ ಕೂಡ ಭಿನ್ನ ಮಾತುಗಳು ಕೇಳಿಬಂದಿರಲಿಲ್ಲ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಸಾಕಷ್ಟು ಯುವ ಆಟಗಾರರು ತಂಡವನ್ನು ಸೇರಿಕೊಳ್ಳಲು ಸ್ಪರ್ಧೆ ನಡೆಸುತ್ತಿದ್ದಾರೆ. ಅಂತಹುದ್ದರಲ್ಲಿ ಆಯ್ಕೆ ಸಮಿತಿ, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ ಮೆಂಟ್ ಈ ರೀತಿ ಕಿತ್ತಾಟ ನಡೆಸುತ್ತಿರುವುದು ಸರಿಯಲ್ಲ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಅಭಿಮತವಾಗಿದೆ.

Related posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

March 22, 2026
ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

March 22, 2026
Tags: #Prithvi Shawbccichethan sharmadevdautt padikkalEnglandICCRavishastriSourav Gangulyteam indiateam india selectiontest cricketvirat kohli
ShareTweetSendShare
Join us on:

Related Posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

by Shwetha
March 22, 2026
0

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪವಿತ್ರ ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ನಡೆಸಿದ ಆರೋಪದ ಮೇಲೆ 14 ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಈಗ ಭಾರಿ...

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

by Shwetha
March 22, 2026
0

ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಮಹಾ ಘರ್ಷಣೆಯೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಜಿಎಫ್ 2 ಬಿಡುಗಡೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಯಶ್...

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

by Shwetha
March 22, 2026
0

ಹೈದರಾಬಾದ್ ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಪಾಕಿಸ್ತಾನದ ವಿರುದ್ಧ ಹಿಂದೆಂದೂ ಕಾಣದಂತಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ...

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

by Shwetha
March 22, 2026
0

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹಾಗೂ ನಾಯಕರ ನಡುವಿನ ವಾಗ್ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಡಮ್ಮಿ ಅಭ್ಯರ್ಥಿಯನ್ನು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 22, 2026
0

ದಿನ ಭವಿಷ್ಯ: 22-03-2026 ಮೇಷ ರಾಶಿ: ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಮನ್ನಣೆ ದೊರೆಯಲಿದ್ದು, ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram