ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ ಶುಲ್ಕ 184 ರೂ. ನಿಂದ 839ರೂ. ಗೆ ಹೆಚ್ಚಿಸಲು ಪ್ರಸ್ತಾಪ..!
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಬಳಕೆದಾರ ಅಭಿವೃದ್ಧಿ ಶುಲ್ಕವನ್ನ 184 ರೂ. ನಿಂದ 839ರೂ. ಗೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಹೌದು ಮೂಲಗಳ ಪ್ರಕಾರ ಈ ವರ್ಷದ ಅಕ್ಟೋಬರ್ ನಿಂದಲೇ ಶುಲ್ಕ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಈ ಪ್ರಸ್ತಾಪವನ್ನು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದ್ದು, ಅನುಮೋದನೆ ಬಾಕಿ ಇದೆ.
ಕೇರಳ – ಡೆಲ್ಟಾ ಬೆನ್ನಲ್ಲೇ ಜಿಕಾ ವೈರಸ್ ಆತಂಕ – ಏನಿದು ಜಿಕಾ ವೈರಸ್? ಏನಿದರ ಲಕ್ಷಣ?
ಈಗ ದೇಶೀಯ ಪ್ರಯಾಣಿಕರಿಗೆ ಬಳಕೆದಾರ ಅಭಿವೃದ್ಧಿ ಶುಲ್ಕ 184 ರೂ. ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇದು 839 ರೂ. ವಿಧಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಬಿಐಎಲ್ ವಿಧಿಸಿರುವ ಶುಲ್ಕ ಹೆಚ್ಚಳವನ್ನು ಎಇಆರ್ ಎ ಪರಿಗಣಿಸಿದ ನಂತರ, ಮೊದಲ ಹಂತದಲ್ಲಿ ದೇಶೀಯ ಪ್ರಯಾಣಿಕರಿಗೆ 450 ರೂ. ಮತ್ತು ನಂತರದ ಹಂತದಲ್ಲಿ 555 ರೂ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 1,350 ರೂ. ಮತ್ತು ನಂತರದ ಹಂತದಲ್ಲಿ 2,220 ರೂ. ಶುಲ್ಕ ಹೆಚ್ಚಳಕ್ಕೆ ಪ್ರಸ್ತಾಪಿಸಲಾಗಿದ್ದು, ಈ ಸಂಬಂಧ ಸಾರ್ವಜನಿಕರ ಪ್ರತಿಕ್ರಿಯೆ ಕೇಳಲಾಗಿದೆ.
ಹೈಟಿ ಅಧ್ಯಕ್ಷರ ಹತ್ಯೆ ಪ್ರಕರಣ – 17 ಶಂಕಿತರ ಬಂಧನ
ಸಾಂಕ್ರಾಮಿಕದ ಪರಿಣಾಮದಿಂದಾಗಿ ಮತ್ತೆ ವಿಮಾನ ಸಂಚಾರವು ಅತ್ಯಂತ ಕೆಳಮಟ್ಟದಲ್ಲಿದೆ ಎಂಬ ಅಂಶದಿಂದಾಗಿ ಸುಂಕ ಪರಿಷ್ಕರಣೆ ಅನಿವಾರ್ಯವಾಗಿದೆ. ಹೀಗಾಗಿ ಶುಲ್ಕ ಹೆಚ್ಚಿಸುವ ಚಿಂತನೆ ನಡೆಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 13,000 ಕೋಟಿ ರೂ.ಗಳ ವಿಸ್ತರಣಾ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಮತ್ತು ಕಾರ್ಯಗತಗೊಳಿಸಲು ಹೊರಟಿದ್ದು, ಈ ಸಮಯದಲ್ಲಿ ಸುಂಕ ಪರಿಷ್ಕರಣೆ ಬಂದಿದೆ.