Corona Report : ಕಳೆದ 24 ಗಂಟೆಗಳಲ್ಲಿ 42,766 ಕೇಸ್ ದೃಢ
ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 42,766 ಜನರಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ.
ಇದೇ ಅವಧಿಯಲ್ಲಿ 45,254 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ನಿನ್ನೆ 42,766 ಕೇಸ್ ಗಳು ಪತ್ತೆಯಾಗಿದ್ದು,1,206 ಮಂದಿ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,07,95,716ಕ್ಕೆ ಸೋಂಕಿಗೆ ಬಲಿಯಾದವರ ಸಂಖ್ಯೆ 4,07,145ಕ್ಕೆ ತಲುಪಿದೆ.
ಇನ್ನು ದೇಶದಲ್ಲಿ ಈವರೆಗೆ 2,99,33,538 ಮಂದಿ ಹೆಮ್ಮಾರಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿನ್ನೂ 4,55,033 ಸಕ್ರಿಯ ಪ್ರಕರಣಗಳಿವೆ. ಈವರೆಗೆ 42,90,41,970 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.










