ಖ್ಯಾತ ಧಾರಾವಾಹಿ ‘ಜೊತೆ ಜೊತೆಯಲಿ’ ಇಂದ ನಟಿ ಮೇಘಾ ಶೆಟ್ಟಿ ಔಟ್..!
ಬೆಂಗಳೂರು: ಕಿರುತೆರೆಯಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದ , ಮನೆ ಮನೆ ಮಾತಾನಗಿದ್ದ ‘ಜೊತೆ ಜೊತೆಯಲಿ’ ಧಾರವಾಹಿಯಿಂದ ಅನು ಖ್ಯಾತಿಯ ನಟಿ ಮೇಘಾ ಶೆಟ್ಟಿ ಹೊರಬಂದಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದು, ಕಿರುತೆರೆಯಲ್ಲಿ ಮೇಘಾ ಶೆಟ್ಟಿ ಇಷ್ಟ ಪಡುತ್ತಿದ್ದ ಜನರಿಗೆ ನಿರಾಸೆಯುಂಟಾಗಿದೆ.
ಮೇಘಾ ಈಗಾಗಲೇ ತಮ್ಮ ಕೊನೆಯ ದಿನದ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಳ್ಳಲ್ಲ ಎನ್ನಲಾಗಿದೆ. ಹೀಗಾಗಿ ಅನು ಸಿರಿಮನೆ ಪಾತ್ರಕ್ಕೆ ಬೇರೊಬ್ಬ ನಟಿ ಬರುವುದು ಪಕ್ಕಾ ಎನ್ನಲಾಗ್ತಿದೆ.
ನೀನ್ಯಾರು ಕೇಳೋಕೆ…? ನೀನೇನು ಬಿಗ್ ಬಾಸಾ..? ಸಂಬರಗಿಗೆ ವಾರ್ನಿಂಗ್ ಕೊಟ್ಟ ಅರವಿಂದ್..!
ಮೇಘಾಶೆಟ್ಟಿ ಧಾರಾವಾಹಿಯಿಂದ ಹೊರಬರಲು ಕಾರಣ ಇನ್ನೂ ತಿಳಿದುಬಂದಿಲ್ಲ. ಅಲ್ಲದೇ ಅಧಿಕೃತವಾಗಿ ಈ ವಿಚಾರವನ್ನ ಮೇಘಾ ಆಗ್ಲಿ , ಮೇಕರ್ಸ್ ಆಗ್ಲಿ ರಿವೀಲ್ ಮಾಡಿಲ್ಲ. ಇನ್ನೂ ಕೆಲ ದಿನಗಳ ಕಾಲ ಮೇಘಾ ಶೆಟ್ಟಿ ನಟನೆಯ ಎಪಿಸೋಡ್ ಗಳು ಪ್ರಸಾರವಾಗಲಿದೆ. ತಿಂಗಳ ಅಂತ್ಯದಲ್ಲಿ ಅನು ಸಿರಿಮನೆ ಪಾತ್ರಕ್ಕೆ ಹೊಸ ನಾಯಕಿಯ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ. ಸದ್ಯ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾ ಮಾಡ್ತಾಯಿದ್ಧಾರೆ.