ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬರ್ತ್ ಡೇಗೆ ಭಜರಂಗಿ 2 ಟೀಸರ್
ಬೆಂಗಳೂರು: ಜುಲೈ 12ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ.. ಹೀಗಾಗಿ ಅಂದು ಅವರ ಬರ್ತ್ ಡೇ ಪ್ರಯುಕ್ತ , ಶಿವಣ್ಣನ ಅಭಿನಯದ ಬಹುನಿರೀಕ್ಷೆಯ ಭಜರಂಗಿ 2 ಟೀಸರ್ ಬಿಡುಗಡೆಯಾಗಲಿದೆ. ಇನ್ನೂ ಪ್ರತಿ ವರ್ಷ ಶಿವಣನ ಹುಟ್ಟುಹಬ್ಬವನ್ನ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಆಚರಣೆ ಮಾಡ್ತಾಯಿದ್ರು.. ಆದ್ರೆ ಈ ಬಾರಿ ಕೊರೋನಾ ಕಾರಣದಿಂದ ಶಿವಣ್ಣ ಈ ಬಾರಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದಿದ್ದರು. ಅಲ್ಲದೇ ದಯಮಾಡಿ ಜುಲೈ 12ರಂದು ಮನೆ ಬಳಿ ಬರಬೇಡಿ ಎಂದು ವಿಡಿಯೋ ಮೂಲಕ ಮನವಿ ಸಹ ಮಾಡಿಕೊಂಡಿದ್ದಾರೆ..
ಹರ್ಷ ನಿರ್ದೇಶನದ ಶಿವಣ್ಣ ವಿಶಿಷ್ಟ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಭಜರಂಗಿ 2 ಟೀಸರ್ ಜುಲೈ 12 ರಂದು ಲಾಂಚ್ ಆಗಿ ಅಭಿಮಾನಿಗಳಿಗೆ ಖುಷಿ ಕೊಡಲಿದೆ. ಎಲ್ಲಾ ಸರಿ ಹೋಗಿದ್ದರೆ ಈ ಸಿನಿಮಾ ಇಷ್ಟರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಮುಂದಕ್ಕೆ ಹೋಗಿದೆ. ಇನ್ನೂ ವಿಶೇಷ ಅಂದ್ರೆ ಶಿವಣ್ಣ ಬರ್ತ್ ಡೇ ಪ್ರಯುಕ್ತ ಒಂದು ದಿನದ ಮುಂಚೆಯೇ ಅವರ 123ನೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಜುಲೈ 12ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನ ಮುಂಚಿತವಾಗಿ ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣವಾಗಿದೆ.
ಖಡಕ್ ಲುಕ್ ನಲ್ಲಿ ಶಿವರಾಜ್ ಕುಮಾರ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗ್ತಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಸಹ ಪ್ರಮಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೋಸ್ಟರ್ ನಲ್ಲೂ ಧನಂಜಯ್ ದರ್ಶನ ನೀಡಿದ್ದಾರೆ. ಈ ಸಿನಿಮಾದ ಟೈಟಲ್ ಶಿವಣ್ಣನ ಬರ್ತ್ ಡೇ ದಿನ ಅಂದ್ರೆ ಜುಲೈ12ಕ್ಕೆ ರಿವೀಲ್ ಆಗಲಿದೆ. ಈ ಸಿನಿಮಾಗೆ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳ್ತಾಯಿದ್ದಾರೆ. ಸಿನಿಮಾಗೆ ಕೃಷ್ಣ ಸಮರ್ಥ್ ಬಂಡವಾಳ ಹೂಡಿದ್ದಾರೆ.