ಅಮೆರಿಕಾದ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ 6 ಗಂಟೆ ಕಾಲ ಕಾದು ಮತದಾನ ಮಾಡಿದ್ದವ ಅರೆಸ್ಟ್
2020ರ ಅಧ್ಯಕ್ಷೀಯ ಚುನಾವಣೆ ನಡೆಯುವ ಸಂದರ್ಭದಲ್ಲಿ ಪೆರೋಲ್ ಮೇಲೆ ಹೊರಬಂದು ಮತದಾನ ಮಾಡಲು ಮತಗಟ್ಟೆ ಬಳಿ 6 ಗಂಟೆಗೂ ಹೆಚ್ಚು ಅವಧಿ ಕಾದಿದ್ದ ಅಮೆರಿಕದ ಹೂಸ್ಟನ್ ನ ಮತದಾರನೊಬ್ಬ ಇದೀಗ ಅರೆಸ್ಟ್ ಮಾಡಲಾಗಿದೆ.
ಮತದಾರ ಹರ್ವಿಸ್ ರೋಜರ್ಸ್ನನ್ನ ಪೊಲೀಸರು ಬಂಧಿಸಿದ್ದಾರೆ. ಪೆರೋಲ್ ಮೇಲೆ ಇದ್ದ ಆತ ಮತದಾನ ಮಾಡುವುದು ಅಕ್ರಮವಾಗಿದ್ದ ಕಾರಣ ಹರ್ವಿಸ್ ರೋಜರ್ಸ್ ಇದೀಗ ಜೈಲುಪಾಲಾಗಿದ್ದಾನೆ. ಅಕ್ರಮ ಮತದಾನದ ಆಪಾದನೆ ಮೇಲೆ ಬಂಧಿತನಾಗಿರುವ ಈತನಿಗೆ 20 ವರ್ಷ ಜೈಲುವಾಸದ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. 62 ವರ್ಷದ ರೋಜರ್ಸ್‌ನ ಜಾಮೀನಿಗೆ $100,000 ವಿಧಿಸಲಾಗಿದೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೆಗಳಲ್ಲಿ 41,506 ಕೇಸ್ ಪತ್ತೆ
ಡಕಾಯಿತಿಯ ಆರೋಪದ ಮೇಲೆ ಜೈಲು ಶಿಕ್ಷೆಯಲ್ಲಿದ್ದ ರೋಜರ್ಸ್ ಮತದಾನ ಮಾಡುವ ವೇಳೆ ಪೆರೋಲ್ ಮೇಲೆ ಇದ್ದ. ಟೆಕ್ಸಾಸ್ ಕಾನೂನಿನ ಪ್ರಕಾರ ಪೆರೋಲ್‌ನಲ್ಲಿರುವ ಮಂದಿಗೆ ಮತದಾನ ಹಕ್ಕನ್ನು ತಾತ್ಕಾಲಿಕವಾಗಿ ರದ್ದಿನಲ್ಲಿಡಲಾಗಿರುತ್ತದೆ. ಈ ಹಿನ್ನೆಲೆ ಈತನನ್ನ ಬಂಧಿಸಲಾಗಿದೆ.