ಹೀರೋ ಘೋಷಣೆ ಮಾಡಿದ ಹೊಂಬಾಳೆ ನಿರೀಕ್ಷೆಯಂತೆ ಬಂದ ‘ರಿಚರ್ಡ್ ಆಂಟನಿ’
ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರು ಹೊಂಬಾಳೆ ಫಿಲಮ್ಸ್ ಬ್ಯಾನರ್ ನಡಿ ಈಗಾಗಲೇ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಮೂಡಿಬಂದಿವೆ.. ಅದ್ರಲ್ಲೂ ಕೆಜಿಎಫ್ ಬಗ್ಗೆ ಮಾತನಾಡೋದೆ ಬೇಡ. ಕೆಜಿಎಫ್ ಚಾಪ್ಟರ್ ಗಾಗಿ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿದೆ.. ಇತ್ತ ಬಾಹುಬಲಿ ಪ್ರಭಾಸ್ , ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಲಾರ್ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ..
ಈ ನಡುವೆ ಇತ್ತೀಚೆಗೆ ಹೊಂಬಾಳೆ ಫಿಲಮ್ಸ್ ಹೊಸ ಸಿನಿಮಾವನ್ನ ಜುಲೈ 11ಕ್ಕೆ ಘೋಷಣೆ ಮಾಡೋದಾಗಿ ಹೇಳಿಕೊಂಡಿತ್ತು. ಆದ್ರೆ ಹೀರೋ ಯಾರು ಎಂಬ ಕ್ಯೂರಿಯಾಸಿಟಿ ಇತ್ತು. ಈಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ. ನಿರೀಕ್ಷೆಯಂತೆಯೇ , ಊಹೆಯಂತೆಯೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಹೊಂಬಾಳೆ ಫಿಲಮ್ಸ್ ನ ಹೊಸ ಸಿನಿಮಾದ ನಾಯಕ ಅನ್ನೋದು ಅಧಿಕೃತವಾಗಿದೆ. ಈ ಸಿನಿಮಾಗೆ ‘ರಿಚರ್ಡ್ ಆಂಟನಿ’ ಎಂದು ಟೈಟಲ್ ಇಡಲಾಗಿದೆ. ಇನ್ನೂ ವಿಶೇಷ ಅಂದ್ರೆ ಸಿನಿಮಾಗೆ ಖುದ್ದು, ರಕ್ಷಿತ್ ಶೆಟ್ಟಿ ಅವರ ನಿರ್ದೇಶನವಿರಲಿದೆ.
ಅಂದ್ಹಾಗೆ ರಕ್ಷಿತ್ ಶೆಟ್ಟಿ ಅವರೇ ನಾಯಕನಾಗಿರಬಹುದೆಂಬ ಊಹೆಗಳು ಇದ್ದವು., ಕಾರಣ ರಕ್ಷಿತ್ ಶೆಟ್ಟಿ ಅವರು ಖಾಸಗಿ ಮಾಧ್ಯಮದ ಆರೋಪಗಳಿಗೆ ಜುಲೈ 11ರಮದು ಉತ್ತರಿಸೋದಾಗಿ ಹೇಳಿಕೊಂಡಿದ್ರು.. ಹೊಂಬಾಳೆ ಸಹ ಜುಲೈ 11 ಕ್ಕೆ ಸಿನಿಮಾ ಘೋಷಣೆ ಮಾಡೋದಾಗಿ ಹೇಳಿಕೊಂಡಿತ್ತು. ಹೀಗಾಗಿ ಸಹಜವಾಗಿಯೇ ಇವೆರಡನ್ನೂ ಲಿಂಕ್ ಮಾಡಿ ರಕ್ಷಿತ್ ಅವರೇ ನಾಯಕನಾಗಬಹುದು ಎನ್ನಲಾಗಿತ್ತು., ಅಂತೆಯೇ ಹೊಂಬಾಳೆಯ 10ನೇ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಎನ್ನುವುದು ಬಹಿರಂಗವಾಗಿದೆ..
ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಲಿದ್ದಾರೆ ರಿಯಲ್ ಸ್ಟಾರ್ ಉಪ್ಪಿ
ಅಂದ್ಹಾಗೆ ಹೊಂಬಾಳೆ ಫಿಲಮ್ಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸ್ಟಾರ್ ಗಳ ಜೊತೆಗೆ ಪಸಿನಿಮಾ ಮಾಡ್ತಿದೆ.. ಇತ್ತೀಚೆಗಷ್ಟೇ ಅಪ್ಪು ಅಭಿನಯದ ದ್ವಿತ್ವ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಮಾಡಿತ್ತು.