ಮಂಗಳೂರು-ಬೆಂಗಳೂರಿನ ನಡುವಿನ ವಿಸ್ಡಾಡೋಮ್ ಕೋಚ್ ರೈಲಿಗೆ ಚಾಲನೆ – ವಿಸ್ಟಾಡೋಮ್ ಒಳಗೆ ಏನೇನಿದೆ ಗೊತ್ತಾ?
ರೈಲ್ವೇ ಇಲಾಖೆಯ ವಿನೂತನ ಮಂಗಳೂರು ಮತ್ತು ಬೆಂಗಳೂರಿನ ನಡುವೆ ಹಗಲಿನಲ್ಲಿ ಸಂಚರಿಸುವ ವಿಸ್ಡಾಡೋಮ್ ಕೋಚ್ ಗೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ಚಾಲನೆ ನೀಡಲಾಗಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಸಿರು ನಿಶಾನೆ ತೋರಿದ್ದಾರೆ.
ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಅನುಕೂಲವುಳ್ಳ ವಿಸ್ಟಾಡೋಮ್ ಬೋಗಿಗಳನ್ನು ಒಳಗೊಂಡಂತಹ ಈ ರೈಲು ದಕ್ಷಿಣ ಭಾರತದಲ್ಲಿ ರೈಲ್ವೆ ಇಲಾಖೆಯಿಂದ ಮೊದಲ ಬಾರಿಗೆ ಪರಿಚಯಿಸಲಾಗಿದೆ.
ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಚಲಿಸುವ ಈ ಎಕ್ಸ್ಪ್ರೆಸ್ ಐಶಾರಾಮಿ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಲಾಗಿದ್ದು, ಪಶ್ಚಿಮ ಘಟ್ಟಗಳ ಮೂಲಕ ಸಂಚರಿಸುವಾಗ ರಮಣೀಯ ಪ್ರಾಕೃತಿಕ ಸೊಬಗನ್ನು ನೋಡಬಹುದಾಗಿದೆ. ಎತ್ತರದ ಪರ್ವತಗಳ ಅದ್ಭುತ ನೋಟ, ಕಣಿವೆಗಳು ಮತ್ತು ಹಚ್ಚ ಹಸಿರಿನ ಈ ಪ್ರದೇಶವು ಮಾನ್ಸೂನ್ನಲ್ಲಿ ಇನ್ನಷ್ಟು ಸುಂದರ ದೃಶ್ಯಾವಳಿಗಳಿಂದ ನೋಡುಗರನ್ನು ಬೆರಗುಗೊಳಿಸುತ್ತದೆ
ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯೂ 44 ಆಸನ ಸಾಮರ್ಥ್ಯ ಹೊಂದಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದ್ದು, ಅಗಲವಾದ ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟ ನೋಟಗಳನ್ನು ನೀಡುತ್ತದೆ. ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್ ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಗಳಿದ್ದು, ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ.
ಆದಾಗ್ಯೂ, ಅನೇಕ ಪ್ರಯಾಣಿಕರು ತಮ್ಮ ಸೂಟ್ಕೇಸ್ಗಳನ್ನು ಕೋಚ್ನ ಕೊನೆಯಲ್ಲಿ ಪ್ರಯಾಣಿಕರ ಪ್ರದೇಶದ ಹೊರಗೆ ಇರುವ ಲಗೇಜ್ ಕಪಾಟುಗಳಲ್ಲಿ ಬಿಡಲು ಇಷ್ಟ ಪಡುತ್ತಿಲ್ಲ. ಸಣ್ಣ ಕೈಚೀಲಗಳನ್ನು ಇಡಲು ಆಸನಗಳ ಬಳಿ ಸಣ್ಣ ಚರಣಿಯನ್ನು ಒದಗಿಸಬೇಕಾಗಿತ್ತು ಎಂದು ಕೆಲವು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಏಕೆ ಮಾಡಲಾಗಿದೆ ಎಂದು ವಿವರಿಸಿರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ತ್ರಿಲೋಕ್ ಕೊಠಾರಿ, ಸಾಮಾನುಗಳು ವೀಕ್ಷಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಲಗೇಜ್ ಕಪಾಟುಗಳನ್ನು ಇಡಲಾಗಿದೆ ಎಂದು ಹೇಳಿದ್ದಾರೆ. ವಿಸ್ಟಾಡೋಮ್ ಬೋಗಿಗಳಲ್ಲಿ ಪ್ರಯಾಣಿಸಲು ನಾನು ಸಾರ್ವಜನಿಕರಿಗೆ ಮನವಿ ಮಾಡುತ್ತೇವೆ, ಏಕೆಂದರೆ ಅಂತಹ ಅನುಭವವು ಯಾವುದೇ ರೈಲುಗಳಲ್ಲಿ ಲಭ್ಯವಿಲ್ಲ ಎಂದು ತ್ರಿಲೋಕ್ ಕೊಠಾರಿ ಹೇಳಿದ್ದಾರೆ.
ಈ ರೈಲು ಸಂಜೆ 4.20 ಕ್ಕೆ ಹಾಸನ ಮತ್ತು ರಾತ್ರಿ 8.05 ಕ್ಕೆ ಯಶವಂತಪುರ ತಲುಪಲಿದೆ. ಸಂಸದರಾದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದಿದ್ದು, ಮಂಗಳೂರು ನಗರ ನಿಗಮ (ಎಂಸಿಸಿ) ಆಯುಕ್ತ ಪ್ರೇಮಾನಂದ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ, ಕಾರ್ಪೊರೇಟರ್ಗಳಾದ ಸುಧೀರ್ ಕಣ್ಣೂರು, ಶೋಭಾ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಪಾನ್ ಕಾರ್ಡ್ ಅಸಲಿಯೋ ನಕಲಿಯೋ ತಿಳಿಯುವುದು ಹೇಗೆ – ಇಲ್ಲಿದೆ ವಿವರ#pancard https://t.co/DelPMnL3Cm
— Saaksha TV (@SaakshaTv) July 10, 2021
ಬದನೆ ಪಲಾವ್#Saakshatv #cookingrecipe #brinjalpulav https://t.co/B64w6eBD5Z
— Saaksha TV (@SaakshaTv) July 10, 2021
ಬಾಳೆಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು#Saakshatv #healthtips #bananapeels https://t.co/Y6hr5AJHAG
— Saaksha TV (@SaakshaTv) July 10, 2021
ಪುದೀನಾ ರೊಟ್ಟಿ#Saakshatv #cookingrecipe #pudinarotti https://t.co/mcXVkPZeUD
— Saaksha TV (@SaakshaTv) July 9, 2021
#Vistadome #coachservices