ಗಂಟೆಗೆ 16 ಲಕ್ಷ ಕಿ.ಮೀ ವೇಗದಲ್ಲಿ ಬರ್ತಿದೆ ಸೌರ ತೂಫಾನ್
ಬ್ರಹ್ಮಾಂಡದಲ್ಲಿ ಪ್ರಬಲ ಸೌರ ಚಂಡಮಾರುತವು 1.6 ದಶಲಕ್ಷ ಕಿ.ಮೀ ವೇಗದಲ್ಲಿ ಭೂಮಿಯನ್ನು ಸಮೀಪಿಸುತ್ತಿದೆ. ಈ ಚಂಡಮಾರುತವು ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. Spaceweather.com ವೆಬ್ ಸೈಟ್ ಪ್ರಕಾರ, ಸೂರ್ಯನತ್ತ ಇರುವ ಭೂಮಿ ಯ ಸಬ್ ಸೋಲಾರ್ ಪಾಯಿಂಟ್ ನಲ್ಲಿ ಕೇಂದ್ರೀಕೃತವಾಗಿದೆ ಎಂದು ಅಮೆರಿಕ ಮೂಲದ ಸ್ಪೇಸ್ ವೆದರ್ ಪ್ರೆಡಿಕ್ಷನ್ ಸೆಂಟರ್ ತಿಳಿಸಿದೆ. ಈ ಸೌರ ಚಂಡಮಾರುತದಿಂದಾಗಿ ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರು ಆಕಾಶದಲ್ಲಿ ಸುಂದರವಾದ ಖಗೋಳ ಕಾಂತಿ ದೃಶ್ಯವನ್ನ ನೋಡಲಿದ್ದಾರೆ. ಈ ಪ್ರದೇಶಗಳಿಗೆ ಹತ್ತಿರದಲ್ಲಿ ವಾಸಿಸುವ ಜನರು ರಾತ್ರಿಯಲ್ಲಿ ಸುಂದರವಾದ ಅರೋರಾವನ್ನು ನೋಡುವ ಸಾಧ್ಯತೆಯಿದೆ.
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಾರ, ಸೌರ ಚಂಡಮಾರುತವು ಗಂಟೆಗೆ 16 ಲಕ್ಷ ಕಿ.ಮೀ ವೇಗದಲ್ಲಿ ಭೂಮಿಯ ಕಡೆಗೆ ಬರುತ್ತಿದೆ. ಬರ್ತಾ ಬರ್ತಾ ಅದರ ವೇಗ ಮತ್ತಷ್ಟು ಹೆಚ್ಚಲಿದೆ. ಈ ಸೌರ ಚಂಡಮಾರುತದಿಂದ ಉಪಗ್ರಹ ಸಂಕೇತಗಳಿಗೆ ಅಡ್ಡಿಯಾಗಬಹುದೆಂದು ನಾಸಾ ಹೇಳಿದೆ. ಸ್ಪೇಸ್ ವೆದರ್ ಪ್ರಕಾರ, ಸೌರ ಚಂಡಮಾರುತದಿಂದ ಭೂಮಿಯ ಹೊರ ವಾತಾವರಣವು ಹೆಚ್ಚು ಬಿಸಿಯಾಗುವ ಸಾಧ್ಯತೆಯಿದೆ. ಇದು ಜಿಪಿಎಸ್ ನ್ಯಾವಿಗೇಶನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಉಪಗ್ರಹ ಟಿವಿ ಸೇವೆಗಳಿಗೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಅಲ್ಲದೆ, ವಿದ್ಯುತ್ ಪೂರೈಕೆಗೂ ಅಡ್ಡಿಯಾಗಲಿದೆ. ಈ ಸೌರ ಚಂಡಮಾರುತದಿಂದಾಗಿ ಟ್ರಾನ್ಸ್ ಫಾರ್ಮರ್ ಗಳು ಸಹ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ವಿಜ್ಞಾನಿಗಳು ಈ ತಿಂಗಳ 3 ರಂದು ಬೃಹತ್ ಸೌರ ಫ್ಲಾರ್ ಅನ್ನು ಗುರುತಿಸಿದ್ದು, ಅದು ಭೂಮಿಯ ವಾತಾವರಣದ ಮೇಲೆ ಬಹಳ ವೇಗವಾಗಿ ಬರುತ್ತಿದೆ ಎಂದು ಹೇಳಿದ್ದಾರೆ.