ಜುಲೈ 19 ರಿಂದ 22ರವರೆಗೂ SSLC ಪರೀಕ್ಷೆ – ಸೆಕ್ಷನ್ 144 ಜಾರಿ
ಬೆಂಗಳೂರು : ಜುಲೈ 19 ರಿಂದ 22 ನೇ ತಾರೀಖಿನವರೆಗೆ SSLC ಪರೀಕ್ಷೆ ಹಿನ್ನೆಲೆ, ಪರೀಕ್ಷಾ ಕೇಂದ್ರದ ಬಳಿ 144 ಸೆಕ್ಷನ್ ಜಾರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರದ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.. ಕೇಂದ್ರದ ಬಳಿಯಿರುವ ಜೆರಾಕ್ಸ್ ಅಂಗಡಿ ಮುಚ್ಚುವಂತೆಯೂ ಆದೇಶಿಸಲಾಗಿದೆ.
ವಂಚನೆ ಪ್ರಕರಣ – ಆರೋಪಿ ಮಹಿಳೆ ಜೊತೆ ಉಮಾಪತಿ ನಿರಂತರ ಚಾಟ್..?
ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ ನಡೆಯುವ ಪರೀಕ್ಷೆ ಸಂದರ್ಭದಲ್ಲಿ ಮಧ್ಯಾಹ್ನ 1 ರಿಂದ ಸಂಜೆ 6 ವರೆಗೆ ಮುಚ್ಚಲು ಸೂಚನೆ ನೀಡಲಾಗಿದೆ. ಕೋವಿಡ್ ಹಾವಳಿಯ ನಡುವೆಯೂ ಪರೀಕ್ಷೆಗಳನ್ನ ನಿಗದಿ ಮಾಡಲಾಗಿದ್ದು, ಯಾವುದೇ ಅಡಚಣೆ ಇಲ್ಲದೇ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನ ನಡೆಸಿಕೊಳ್ಲಲಾಗಿದೆ.. ಅದೇ ಭಾಗವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಸ್ವದೇಶಿ ‘ಕೂ’ ಆಪ್ ಗೆ ಎಂಟ್ರಿಯಾದ RSS ಸಂಘಟನೆ – ಹೊಸ ಖಾತೆ ಆರಂಭ