ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ : ದರ್ಶನ್ Darshan
ಬೆಂಗಳೂರು : ಈ ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ. ಇದು ನಿಲ್ಲುವ ಕೇಸ್ ಅಲ್ಲ. ಯಾರನ್ನೂ ಅರೆಸ್ಟ್ ಮಾಡುವುದಿಲ್ಲ ಎಂದು 25 ಕೋಟಿ ವಂಚನೆ ಪ್ರಕರಣವನ್ನು ಕೊನೆಗೊಳಿಸಲು ದರ್ಶನ್ ಮುಂದಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿಲ್ಲುವ ಕೇಸ್ ಅಲ್ಲ. ಯಾರನ್ನೂ ಅರೆಸ್ಟ್ ಮಾಡುವುದಿಲ್ಲ. ಇದು ಮುಗಿದ ಕೇಸ್ ಆಗಿದ್ದು, ನಾನು ನಿರ್ಮಾಪಕರನ್ನು ಬಿಟ್ಟು ಕೊಡಲ್ಲ. ನಮ್ಮದೆಲ್ಲಾ ಮುಗಿದಿದೆ ಇನ್ನೇನು ಇಲ್ಲ. ಇದನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಾವು ಉಮಾಪತಿ ಜೊತೆಗೆ ಮಾತನಾಡುತ್ತೇವೆ. ಉಮಾಪತಿಯನ್ನು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅರುಣಾ ಅವರು ಹೇಳಿದ್ದಾರೆ. ನಾವು ನಾವೇ ಮಾತನಾಡಿ ಈ ವಿಚಾರವನ್ನು ಬಗೆ ಹರಿಸಿಕೊಳ್ಳುತ್ತೇವೆ. ನಾವು ಮಂಗಳ ಹಾಡಿದ್ದೇವೆ. ಉಮಾಪತಿಯವರು ಫುಲ್ ಸ್ಟಾಪ್ ಹಾಕಿದ್ದಾರೆ ಎಂದು ತಿಳಿಸಿದರು.
ನಿನ್ನೆ ಇದೇ ಪ್ರಕರಣದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ದರ್ಶನ್, ಇದರಲ್ಲಿ ಯಾರೇ ಇದ್ದರೂ ಬಿಡೋದಿಲ್ಲ ಎಂದಿದ್ದರು. ಇದೀಗ ಯೂಟರ್ನ್ ಹೊಡೆದಿದ್ದಾರೆ.