ಜಮ್ಮು – ಕಾಶ್ಮೀರ : ಸತತ ಎರಡನೇ ವರ್ಷವೂ ಹುತಾತ್ಮರ ದಿನ ಆಚರಣೆ ಇಲ್ಲ
ಜಮ್ಮು – ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಸತತ ಎರಡನೇ ವರ್ಷವೂ ಹುತಾತ್ಮರ ದಿನಾಚರಣೆಯ ಸ್ಮರಣಾರ್ಥ ಅಧಿಕೃತ ರಜೆ ನೀಡಿಲ್ಲ. ಹಾಗೆಯೇ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿಲ್ಲ. 1931ರ ಜುಲೈ 13 ರಂದು ತಮ್ಮ ಹಕ್ಕುಗಳಿಗಾಗಿ ಹೋರಾಡಿದ 22 ಕಾಶ್ಮೀರಿಗಳನ್ನು ಡೋಗ್ರಾ ಆಡಳಿತಗಾರರು ಗುಂಡು ಹಾರಿಸಿ, ಹತ್ಯೆ ಮಾಡಿದ್ದರು. ಈ ಘಟನೆ ಸ್ಮರಣಾರ್ಥವಾಗಿ ಜುಲೈ13 ಅನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
1947ರಿಂದ 2019ರ ತನಕ ಹುತಾತ್ಮರ ದಿನದ ಸ್ಮರಣಾರ್ಥವಾಗಿ ಅಧಿಕೃತ ರಜೆ ಮತ್ತು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಸ್ಥಳೀಯ ನಾಯಕರು ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸುತ್ತಿದ್ದರು. ಆದರೆ 2019, ಆಗಸ್ಟ್ 5ರಂದು 370ನೇ ವಿಧಿ ರದ್ಧತಿ ಬಳಿಕ ಜುಲೈ 13ರ ಅಧಿಕೃತ ರಜೆಯನ್ನು ತೆಗೆದು ಹಾಕಲಾಗಿದೆ.
ಜನ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಆತಂಕಕ್ಕೆ ಕಾರಣ – ಮೋದಿ
2019ರ ನಂತರದಿಂದ ಜಮ್ಮು–ಕಾಶ್ಮೀರದಲ್ಲಿ ಹುತಾತ್ಮರ ದಿನದಂದು ಅಧಿಕೃತ ರಜೆಯಾಗಲಿ, ಕಾರ್ಯಕ್ರಮವನ್ನಾಗಲಿ ಆಯೋಜಿಸಲಾಗುತ್ತಿಲ್ಲ. ಈ ವರ್ಷವೂ ಹುತಾತ್ಮರ ದಿನದಂದು ಪ್ರತ್ಯೇಕವಾದಿಗಳು ಯಾವುದೇ ಮುಷ್ಕರಕ್ಕೆ ಕರೆ ನೀಡಿಲ್ಲ. ಹುತಾತ್ಮರ ಸ್ಮಾರಕದ ಬಳಿ ತೆರಳಿ, ಪುಪ್ಪನಮನ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಜಮ್ಮು–ಕಾಶ್ಮೀರದ ಆಡಳಿತಕ್ಕೆ ಮನವಿ ಮಾಡಿದ್ದರೂ ಅದನ್ನ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ..