ತೆರಿಗೆ ಪಾವತಿಸಲು ಹಣವಿಲ್ಲ ಎಂದ ವಿಜಯ್ ಗೆ ಛೀಮಾರಿ ಹಾಕಿ ದಂಡ ವಿಧಿಸಿದ ಕೋರ್ಟ್
ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಗೆ ತೆರಿಗೆ ಕಟ್ಟಲು ಹಣವಿಲ್ಲ ಎಂದ ಕಾರಕ್ಕೆ ಮದ್ರಾಸ್ ಹೈ ಕೋರ್ಟ್ ಛೀಮಾರಿ ಹಾಕಿ ಜೊತೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ..
ಕಾರಿಗೆ ಕೋಟಿ ಕೋಟಿ ಕೊಟ್ಟು, ತೆರಿಗೆ ಕಟ್ಟಲು ಹಣವಿಲ್ಲ ಎಂದ ವಿಜಯ್ ಅವರಿಗೆ ಮದ್ರಾಸ್ ಹೈ ಕೋರ್ಟ್ ಶಾಕ್ ಕೊಟ್ಟಿದೆ. ಒಂದು ಲಕ್ಷ ದಂಡ ವಿಧಿಸುವುದರೊಂದಿಗೆ ಕಠಿಣ ಪದಗಳ ಮೂಲಕ ಟೀಕಿಸಿದೆ.
ವಿಜಯ್ ಅವರ ಬಳಿ ದುಬಾರಿ ಬೆಲೆಯ ಹಲವು ಕಾರುಗಳಿವೆ. ಅದಕ್ಕೆ ಇತ್ತೀಚೆಗೆ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರು ಸೇರ್ಪಡೆಯಾಗಿತ್ತು. ಆ ಕಾರನ್ನು ಇಂಗ್ಲೆಂಡ್‍ನಿಂದ ಆಮದು ಮಾಡಿಕೊಂಡಿದ್ದ ವಿಜಯ್‍ಗೆ ಭಾರತದಲ್ಲಿ ತೆರಿಗೆ ಕಟ್ಟಲು ಮನಸ್ಸಾಗಲಿಲ್ಲ. ಹಾಗಾಗಿ ಮದ್ರಾಸ್ ಹೈಕೋರ್ಟ್‍ಗೆ ವಿಜಯ್ ತೆರಿಗೆ ವಿನಾಯಿತಿ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನಟನಿಗೆ ಛೀಮಾರಿ ಹಾಕಿದೆ.
“ತೆಲುಗು ಸಿನಿಮಾ ಹೀರೋಗಳಿಗೆ ಬುದ್ಧಿ ಇಲ್ಲ” : ಕೋಟಾ ಶ್ರೀನಿವಾಸ್ ರಾವ್
2012ರಲ್ಲಿ ನಟ ವಿಜಯ್ ಸಲ್ಲಿಸಿದ್ದ ತೆರಿಗೆ ವಿನಾಯಿತಿಯ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‍ನ ನ್ಯಾ.ಎಸ್.ಎಮ್.ಸುಬ್ರಮಣಿಯಮ್ ಅವರಿದ್ದ ಪೀಠವು, ನಿಜವಾದ ಹೀರೋಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುತ್ತಾರೆ. ನೀವು ನಿಜ ಜೀವನದ ಹೀರೋಗಳಾಗಿ, ಬರಿಯ ತೆರೆಯ ಮೇಲಿನ ಹೀರೋಗಳಾಗಿ ಉಳಿಯಬೇಡಿ ಎಂದು ವಿಜಯ್ ಅವರಿಗೆ ಛಾಟಿ ಬೀಸಿದೆ. ಜೊತೆಗೆ ನ್ಯಾಯಾಲಯವು 1ಲಕ್ಷ ರೂ.ಗಳ ದಂಡವನ್ನೂ ವಿಜಯ್‍ಗೆ ವಿಧಿಸಿದ್ದು, ಅದನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ತಿಳಿಸಿದೆ.
ದರ್ಶನ್ ಬಹಳ ಶಕ್ತಿಯುತರು : ನಿಖಿಲ್ ಕುಮಾರಸ್ವಾಮಿ
ಸುಮಾರು ಮೂರು ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದ ವಿಜಯ್ ಮೂಲ ಬೆಲೆಯ ಶೇಕಡಾ 20 ರಷ್ಟು ತೆರಿಗೆ ಪಾವತಿಸಬೇಕಿತ್ತು. ದೊಡ್ಡ ಮೊತ್ತದ ತೆರಿಗೆ ಪಾವತಿಸಲು ಸಾಧ್ಯವಿಲ್ಲ, ಅದರಿಂದ ವಿನಾಯಿತಿ ನೀಡಿ ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಬಹಳ ವರ್ಷಗಳಿಂದ ಪ್ರಗತಿಯಲ್ಲಿದ್ದ ಪ್ರಕರಣಕ್ಕೆ ಇಂದು ಕ್ಲೈಮ್ಯಾಕ್ಸ್ ಸಿಕ್ಕಿದ್ದು, ಕೋರ್ಟ್ ವಿಜಯ್ ಅರ್ಜಿ ತಿರಸ್ಕರಿಸಿ ಛೀಮಾರಿ ಹಾಕಿದೆ.