“ತೆಲುಗು ಸಿನಿಮಾ ಹೀರೋಗಳಿಗೆ ಬುದ್ಧಿ ಇಲ್ಲ”  :  ಕೋಟಾ ಶ್ರೀನಿವಾಸ್  ರಾವ್

1 min read

“ತೆಲುಗು ಸಿನಿಮಾ ಹೀರೋಗಳಿಗೆ ಬುದ್ಧಿ ಇಲ್ಲ”  :  ಕೋಟಾ ಶ್ರೀನಿವಾಸ್  ರಾವ್

ಸಿನಿಮಾತಾರೆಯರು ಕಿತ್ತಾಡಿಕೊಳ್ಳುವುದು ಎಲ್ಲಾ ಸಿನಿಮಾರಂಗದಲ್ಲೂ ಕಾಮನ್. ಆದ್ರೆ ತಮ್ಮ ಭಾಷೆಯ ಸಿನಿಮಾರಂಗ ಅಂತ ಬಂದಾಗ ಸ್ಯಾಂಡಲ್ ವುಡ್ ಆಗ್ಲೀ ಬಾಲಿವುಡ್ , ಟಾಲಿವುಡ್ ಆಗ್ಲಿ ಬೇರೆ ಸಿನಿಮಾರಂಗದವವರ ಎದುರು ತಮ್ಮವರನ್ನ ಬಿಟ್ಟುಕೊಡಲ್ಲಾ..

ಆದ್ರೆ ಟಾಲಿವುಡ್ ಖ್ಯಾತ ಹಿರಿಯ ನಟರಾದ ಕೋಟಾ ಶ್ರೀನಿವಾಸ್  ರಾವ್ ಅವರು ಇದೀಗ ತೆಲುಗು ಹೀರೋಗಳಿಗೆ ಬುದ್ದಿಯಿಲ್ಲ ಎಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.  ಅಂದ್ಹಾಗೆ ಅವರು ವಾಗ್ದಾಳಿ ನಡೆಸಿರೋದು ಹೊಸ ಹೀರೋಗಳ ವಿರುದ್ಧ.. ತೆಲುಗಿನ ಹೊಸ ಹೀರೋಗಳನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದಾರೆ. ಹೊಸ ನಾಯಕ ನಟರಿಗೆ ಶಿಸ್ತು ಇಲ್ಲ, ಕೆಲಸದ ಮೇಲೆ ಗೌರವ ಇಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.  ಸಂದರ್ಶನವೊಂದರಲ್ಲಿ ಮಾತನಾಡಿರುವ ಕೋಟ ಶ್ರೀನಿವಾಸ್ ರಾವ್  ಅವರು ”ತೆಲುಗು ಹೊಸ ಹೀರೋಗಳಿಗೆ ಬುದ್ಧಿ ಕಡಿಮೆ. ತೆಲುಗು ಸಿನಿಮಾ ಪ್ರೇಮಿಗಳ ಬುದ್ಧಿ ಬೆಳೆಯುತ್ತಿದೆ ಆದರೆ ನಮ್ಮ ಹೀರೋಗಳ ಬುದ್ಧಿ ಬೆಳೆಯುತ್ತಿಲ್ಲ” ಎಂದಿದ್ದಾರೆ.

ಹಿಂದಿನ ಹೀರೋಗಳಿಗೆ ಹೋಲಿಸಿದರೆ ಈಗಿನ ಹೀರೋಗಳ ಸಾಧನೆ ಕಡಿಮೆ ಆದರೆ ಶಬ್ದ ಹೆಚ್ಚು ಎಂದು ಟೀಕಿಸಿದ್ದಾರೆ. ನಟರು ಹಾಕಿರುವ ಬಟ್ಟೆಗಳು ಬಹಳ ಬೇಗ ಬದಲಾಗುತ್ತವೆ ಆದರೆ ಅಷ್ಟೆ ವೇಗದಲ್ಲಿ ಅವರ ಬುದ್ಧಿ ಮಾತ್ರ ಬೆಳೆಯುತ್ತಿಲ್ಲ. ನಟನೆಯ ಮೇಲೆ ಹಿಡಿತವೂ ಇಲ್ಲ ಪ್ರೀತಿಯೂ ಇಲ್ಲ. ಹಣ ಇದ್ದರೆ ಸಾಕು ಎಂತೆಂತವರೋ ಹೀರೋಗಳಾಗಿ ಬಿಡುತ್ತಿದ್ದಾರೆ. ಇದು ಭವಿಷ್ಯದಲ್ಲಿ ತೆಲುಗು ಚಿತ್ರರಂಗದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದಿದ್ದಾರೆ. ಅಲ್ಲದೇ ಕೆಲವು ಹೀರೋಗಳನ್ನೂ ಕೂಡ ಹೊಗಳಿದ್ದಾರೆ.  ನಟ ನಾನಿ ಅಂಥಹವರು ಯಾವುದೇ ಹಿನ್ನೆಲೆಯಿಲ್ಲದೆ ಚಿತ್ರರಂಗಕ್ಕೆ ಬಂದು ಸ್ವಂತ ಪ್ರತಿಭೆಯಿಂದ ಬೆಳೆದಿದ್ದಾರೆ ಎಂದು ನಾನಿಯನ್ನ ಜೊಗಳಿದ್ದಾರೆ.

ಅಂದ್ಹಾಗೆ ಕೋಟ ಶ್ರೀನಿವಾಸ್ ರಾವ್ ಅವರು ಎಂಥಹದ್ದೇ ಪಾತ್ರ ಇದ್ರೂ ಅದಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುತ್ತಾರೆ.. ಪೋಷಕ ಪಾತ್ರಗಳಲ್ಲಿ , ವಿಲ್ಲನ್ ರೂಪದಲ್ಲೂ ಕಾಣಿಸಿಕೊಂಡಿದ್ದಾರೆ..  ಕನ್ನಡ ಸೇರಿ ತೆಲುಗು, ತಮಿಳು, ಹಿಂದಿ, ಮಲಯಾಳಂ, ದಖನಿ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿರುವ ಇವರು ಈ ವರೆಗೆ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ರಕ್ತ ಕಣ್ಣೀರು’, ‘ಲವ್’, ‘ನಮ್ಮ ಬಸವ’ ಸಿನಿಮಾಗಳಲ್ಲಿ ಕೋಟ ಶ್ರೀನಿವಾಸ ರಾವ್ ನಟಿಸಿದ್ದಾರೆ.

ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ : ದರ್ಶನ್

ದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಷಡ್ಯಂತ್ರ ಹೂಡಿದ್ದಾರೆ – ಉಮಾಪತಿ  

ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ, ಮರ್ಯಾದೆ ಉಳಿಸೋದ್ರಲ್ಲಿ ಅರ್ಥವಿಲ್ಲ, ಸತ್ಯ ಗೊತ್ತಾಗಲೇ ಬೇಕಿದೆ – ಉಮಾಪತಿ

ವಂಚನೆ ಪ್ರಕರಣ : ದರ್ಶನ್ ಪರ ನಿಂತ ಸಂಸದೆ ಸುಮಲತಾ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd