ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ, ಮರ್ಯಾದೆ ಉಳಿಸೋದ್ರಲ್ಲಿ ಅರ್ಥವಿಲ್ಲ, ಸತ್ಯ ಗೊತ್ತಾಗಲೇ ಬೇಕಿದೆ – ಉಮಾಪತಿ

1 min read

ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ, ಮರ್ಯಾದೆ ಉಳಿಸೋದ್ರಲ್ಲಿ ಅರ್ಥವಿಲ್ಲ, ಸತ್ಯ ಗೊತ್ತಾಗಲೇ ಬೇಕಿದೆ – ಉಮಾಪತಿ

ಬೆಂಗಳೂರು: ಸ್ಯಾಂಡವುಡ್ ನಲ್ಲಿ ಸಂಚನಲ ಸೃಷ್ಟಿ ಮಾಡಿರುವ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್  ದರ್ಶನ್, ನಿರ್ಮಾಪಕ ಉಮಾಪತಿ , ಆರೋಪಿ ಅರುಣಕುಮಾರಿ ಸ್ಪೋಟಕ ಮಾಹಿತಿಗಳನ್ನ ಹೊರ ಹಾಕ್ತಲೇ ಇದ್ದು, ಕೆಲ ಆಡಿಯೋಗಳು ರಿಲೀಸ್ ಆಗಿವೆ.. ಪ್ರಕರಣಕ್ಕೆ ಟಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಬೆಂಗಳೂರಿನಲ್ಲಿಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಉಮಾಪತಿ ದರ್ಶನ್​ ಸ್ನೇಹಿತರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಂಚನೆ ಪ್ರಕರಣ : ದರ್ಶನ್ ಪರ ನಿಂತ ಸಂಸದೆ ಸುಮಲತಾ

ನಾನು ದಡ್ಡ ಒಪ್ಪಿಕೊಳ್ತೇನೆ. ಆದರೆ 25 ಕೋಟಿ ರೂಪಾಯಿ ವ್ಯವಹಾರದಲ್ಲಿ ನೀವು ಹೇಗೆ ಯಾಮಾರಿದ್ರಿ. ನಿಮಗೆ ಇದರ ಬಗ್ಗೆ ಅನುಮಾನ ಮೂಡಲೇ ಇಲ್ಲವಾ. ಇಷ್ಟು ದಿನ ಕಳೆದರೂ ಮಲ್ಲೇಶ್​ ರನ್ನ ನೀವೇಕೆ ಟ್ರೇಸ್​ ಮಾಡಲಿಲ್ಲ.  ಅರುಣಾ ಕುಮಾರಿಯನ್ನ ನೀವೇಕೆ ಬಿಟ್ಟು ಕಳಿಸಿದ್ದೀರಿ.  ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ನಮ್ಮ ಪೊಲೀಸ್​ ಮೇಲೆ ನಂಬಿಕೆ ಇದೆ. ದರ್ಶನ್​ ಹಾಗೂ ನನ್ನ ನಡುವೆ ತಂದಿಡುವ ಕೆಲಸ ಮಾಡಲಾಗ್ತಾ ಇದೆ. ಅರುಣಾ ಕುಮಾರಿ ಹರ್ಷ ಮೆಲಂಟಾ ಜೊತೆ ಮಾತನಾಡುತ್ತಾಳೆ. ನನ್ನ ಹಾಗೂ ದರ್ಶನ್​ ಜೊತೆ ಏಕೆ ಮಾತನಾಡೋದಿಲ್ಲ.

ಪ್ರಕರಣದಲ್ಲಿ ನನ್ನನ್ನ ಉಮಾಪತಿ ಬಳಸಿಕೊಂಡಿದ್ದಾರೆ : ಅರುಣಾ ಕುಮಾರಿ

ಬೆಂಗಳೂರು ಪೊಲೀಸರ ಮೇಲೆ ರಾಕೇಶ್​ ಪಾಪಣ್ಣಗೆ ನಂಬಿಕೆ ಇಲ್ಲವಂತೆ. ಹೀಗಾಗಿ ಮೈಸೂರಿನಲ್ಲಿ ದೂರು ನೀಡಿದ್ದಾರಂತೆ. ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ. ಇನ್ನು ಮರ್ಯಾದೆ ಉಳಿಯೋದು ಏನಿಲ್ಲ. ಈ ಪ್ರಕರಣ ಇಷ್ಟು ಬಹಿರಂಗವಾದ ಮೇಲೆ ಕಾನೂನಿನ ಅಡಿಯಲ್ಲೇ ಪರಿಹಾರ ಹುಡುಕೋಣ. ಈ ಪ್ರಕರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ನನಗೆ ಏಪ್ರಿಲ್​ ನಿಂದಲೇ ಅರುಣಾಕುಮಾರಿಯ ಪರಿಚಯವಾಗಿತ್ತು. ಪ್ರಾಪರ್ಟಿ ವಿಚಾರವಾಗಿ ಆಕೆಯ ಪರಿಚಯವಾಗಿತ್ತು. ದರ್ಶನ್​ ಸರ್​ ಹೆಸರು ಕೇಳಿದ್ದರಿಂದ ನಾನು ಆಧಾರ್​ ಕಾರ್ಡ್ ಫೋಟೋ ಕಳಿಸಿದ್ದೆ. ನನ್ನ ಮೇಲೆ ಆರೋಪ ಬಂದಿದೆ ನಾನು ಸಾಬೀತು ಮಾಡಲೇಬೇಕು ಎಂದು ಹೇಳಿದ್ರು.

ನನ್ನ ಹಣೆಬರಹ ಯಾರೂ ಕಿತ್ಕೊಳೋಕಾಗೊಲ್ಲ : ಉಮಾಪತಿ

ದಾಸನಿಗೆ ವಂಚನೆ ಕೇಸ್ ಗೆ ಮೇಜರ್ ಟ್ವಿಸ್ಟ್ : ಮತ್ತೊಂದು ಆಡಿಯೋ ಬ್ಲಾಸ್ಟ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd