ADVERTISEMENT
Sunday, July 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifaworldcup:2026- ದೈತ್ಯರನ್ನು ಬೆಚ್ಚಿ ಬೀಳಿಸಿದ ಬ್ಲೂ ಬ್ಲೂ ಶಾರ್ಕ್ಸ್..! ಫಿಫಾ ವಿಶ್ವಕಪ್‍ನಲ್ಲಿ ಇತಿಹಾಸ ಬರೆದ ಕೇಪ್‍ವರ್ಡ್..!

admin by admin
July 4, 2026
in Newsbeat, Sports, ಕ್ರೀಡೆ
argentina vs cabo verde

argentina vs cabo verde

Share on FacebookShare on TwitterShare on WhatsappShare on Telegram

ಕೆಲವೊಂದು ಸೋಲುಗಳು ಗೆಲುವಿಗಿಂತಲೂ ಹೆಚ್ಚು ಕಾಲ ನೆನಪಿನಲ್ಲಿರುತ್ತವೆ. ಅದು ಭಗ್ನಗೊಂಡ ಮೊದಲ ಪ್ರೀತಿಯ ಹಾಗೇ..! ಫಿಫಾ ವಿಶ್ವಕಪ್ 2026ರ ಟೂರ್ನಿಯ ನಾಕೌಟ್ ಪಂದ್ಯವೊಂದರಲ್ಲಿ ಆಗಿದ್ದು ಕೂಡ ಅದೇ..! ಒಂದು ಅವಿಸ್ಮರಣೀಯ ಸೋಲು…ಒಂದು ಪ್ರಯಾಸದ ಗೆಲುವು..!

ಸಹಜವಾಗಿಯೇ ಸೋತ ತಂಡದ ಆಟಗಾರರ ಕಣ್ಣಲ್ಲಿ ಕಣ್ಣೀರ ಧಾರೆ.. ಅಭಿಮಾನಿಗಳ ಮುಖದಲ್ಲಿ ನೋವಿನ ಸಂಕಟ.. ಈ ದೃಶ್ಯಗಳನ್ನು ನೋಡಿದಾಗ ಒಂದು ಕ್ಷಣ ಎಂಥ ಗಟ್ಟಿ ಮನಸ್ಸು ಕೂಡ ಕರಗಿ ಹೋಗುತ್ತದೆ. ಹಾಗಂತ ಇಲ್ಲಿ ಗೆದ್ದ ತಂಡದ ಆಟಗಾರರ ಮುಖದಲ್ಲಿ ನಿರಾಳತೆ ಇತ್ತೇ ಹೊರತು ಗೆಲುವಿನ ಗರ್ವ ಇರಲಿಲ್ಲ.

Related posts

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

July 11, 2026
fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

July 11, 2026

ಕಡೆಯ ತನಕವೂ ಹೋರಾಟ ಬಿಟ್ಟುಕೊಡದ ಕೇಪ್‍ವರ್ಡ್..!

ಹೌದು, ಕೇಪ್‍ವರ್ಡ್ ವಿರುದ್ಧದ ನಾಕೌಟ್ ಪಂದ್ಯ ಬಲಿಷ್ಠ ಅರ್ಜೆಂಟಿನಾ ತಂಡಕ್ಕೆ ಸುಲಭದ ತುತ್ತಾಗಿರಲಿಲ್ಲ. ವಿಶ್ವ ವಿಖ್ಯಾತ ಮೆಸ್ಸಿಗೂ ಈ ಪಂದ್ಯ ಅಗ್ನಿಪರೀಕ್ಷೆ ಮಾಡಿದಂತಿತ್ತು. ಮೈದಾನದಲ್ಲಿ ಮೆಸ್ಸಿ ಹುಡುಗರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದು ಕೇಪ್‍ವರ್ಡ್ ಎಂಬ ಪುಟ್ಟ ದೇಶದ ಆಟಗಾರರು. ಬ್ಲೂ ಶಾರ್ಕ್ಸ್ ನಂತೆ ಆಕ್ರಮಣಕಾರಿ ಪ್ರವೃತ್ತಿ, ಆತ್ಮವಿಶ್ವಾಸ, ಅಪ್ರತಿಮ ಹೋರಾಟದ ಮನೋಭಾವನೆಯಿಂದ ಆಡಿರುವ ಕೇಪ್‍ವರ್ಡ್ ತಂಡ ಕಟ್ಟಕಡೆಯ ತನಕ ಸೋಲನ್ನು ಒಪ್ಪಿಕೊಳ್ಳಲು ತಯಾರು ಇರಲಿಲ್ಲ.

ಅಂದ ಹಾಗೇ ಅರ್ಜೆಂಟಿನಾ ಈ ಪಂದ್ಯವನ್ನು 3-2ರಿಂದ ಗೆದ್ದಿರಬಹುದು. ಆದ್ರೆ ಅರ್ಜೆಂಟಿನಾದ ಬಲಿಷ್ಠ ರಕ್ಷಣಾ ಗೋಡೆಯನ್ನು ಮುರಿದು ಎರಡು ಗೋಲು ದಾಖಲಿಸಿದ್ದ ಕೇಪ್‍ವರ್ಡ್ ತಂಡದ ಆಟ ಪರಿಯಂತೂ ವಾಹ್ಹ್ ಅನ್ನುವ ಮಟ್ಟದಲ್ಲಿತ್ತು. 111ನೇ ನಿಮಿಷದಲ್ಲಿ ಕೇಪ್‍ವರ್ಡ್ ಆಟಗಾರನ ಸಣ್ಣ ತಪ್ಪಿನಿಂದ ಅರ್ಜೆಂಟಿನಾ ಈಗ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಸಣ್ಣ ದೇಶದ ದೊಡ್ಡ ಕನಸು..!

ಸುಮಾರು ಐದು- ಐದುವರೇ ಲಕ್ಷ ಜನಸಂಖ್ಯೆ ಹೊಂದಿರುವ ಕೇಪ್‍ವರ್ಡ್ ದೇಶ ವಿಶ್ವ ಭೂಪಟದಲ್ಲಿ ಸಣ್ಣ ಚುಕ್ಕಿಯಾಗಿ ಕಾಣುತ್ತದೆ. ಫಿಫಾ ವಿಶ್ವಕಪ್‍ಗೆ ಮುನ್ನ ಈ ದೇಶ ಇದೆ ಎಂಬುದೇ ಬಹುತೇಕರಿಗೆ ಗೊತ್ತಿರಲಿಲ್ಲ. ಆದ್ರೆ ಸಣ್ಣ ದೇಶದ ದೊಡ್ಡ ಕನಸುಗಳಿಂದ ಈ ರಾಷ್ಟ್ರದ ಹೆಸರು ಪ್ರತಿಯೊಬ್ಬ ಫುಟ್‍ಬಾಲ್ ಅಭಿಮಾನಿಯ ಮನ ಮುಟ್ಟಿದೆ. ಈ ರಾಷ್ಟ್ರದ ಬಗ್ಗೆ ಜಗತ್ತು ಏನು ಹೇಳುತ್ತದೆ ಎಂಬುದು ಮುಖ್ಯವಲ್ಲ. ಎಷ್ಟು ಜನ ಸಂಖ್ಯೆ ಇದೆ ಎಂಬುದೂ ಮುಖ್ಯವಲ್ಲ. ಆದ್ರೆ ಕೆಚ್ಚೆದೆಯ ಆಟಗಾರರು, ಅಚಲವಾದ ನಂಬಿಕೆ ಮತ್ತು ಸಾಮಥ್ರ್ಯದಿಂದ ಕೇಪ್ ವರ್ಡ್ ದೇಶವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ.

ಬಲಿಷ್ಠ ತಂಡಗಳನ್ನೇ ಬೆಚ್ಚಿಬೀಳಿಸಿದ ಬ್ಲೂ ಶಾರ್ಕ್ಸ್..!

ಅಂದ ಹಾಗೇ, ಕೇಪ್‍ವರ್ಡ್ ತಂಡ ಫಿಫಾ ವಿಶ್ವಕಪ್‍ನ ನಿಗದಿತ 90 ನಿಮಿಷಗಳ ಆಟದಲ್ಲಿ ಒಂದೂ ಪಂದ್ಯವನ್ನೂ ಸೋತಿಲ್ಲ. ಮೆಸ್ಸಿ ಟೀಂ ವಿರುದ್ದ ಹೆಚ್ಚುವರಿ ಅವಧಿಯಲ್ಲಿ ಸೋತಿದೆ ಅಷ್ಟೇ. ಅದನ್ನು ಬಿಟ್ಟು ಲೀಗ್‍ನಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ವಿರುದ್ದ ಗೋಲು ರಹಿತ ಡ್ರಾ ಮಾಡಿಕೊಂಡಿದೆ. ಇನ್ನೊಂದು ಮಾಜಿ ಚಾಂಪಿಯನ್ ಉರುಗ್ವೆ ವಿರುದ್ದ ಹಾಗೂ ಸೌದಿ ಅರೆಬಿಯಾ ವಿರುದ್ದವೂ ಡ್ರಾ ಮಾಡಿಕೊಂಡಿದೆ. ಅಂಕಿ ಅಂಶಗಳ ಪ್ರಕಾರ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇಪ್‍ವರ್ಡ್ ತಂಡ ನಾಲ್ಕು ಗೋಲುಗಳನ್ನು ದಾಖಲಿಸಿದೆ. ಐದು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಇದು ಚೊಚ್ಚಲ ಫಿಫಾ ವಿಶ್ವಕಪ್ ಆಡಿರುವ ಕೇಪ್‍ವರ್ಡ್ ತಂಡದ ಅಪ್ರತಿಮ ಸಾಧನೆ.

ಕೇಪ್‍ವರ್ಡ್ ತಂಡ ಮಹಾಗೋಡೆ 40ರ ಹಿರಿಯಣ್ಣ ವೊಜಿನ್ಹಾ..!

ಹೌದು, ಕೇಪ್‍ವರ್ಡ್ ತಂಡದ ರಕ್ಷಕನ ನಿಜವಾದ ಹೆಸರು ಜೊಸಿಮಾರ್ ಡಯಸ್. ಆದ್ರೆ ಫುಟ್‍ಬಾಲ್ ಜಗತ್ತಿನಲ್ಲಿ ವೊಜಿನ್ಹಾ ಅಂತಲೇ ಫೇಮಸ್. ಹತ್ತು ಮಂದಿ ಆಟಗಾರರು ಎಡವಿದ್ರೂ, ಗೋಲ್‍ಪೋಸ್ಟ್ ಬಳಿ ಕಾಯುತ್ತಿರುವ ಒಬ್ಬ ನಂಬಿಕಸ್ಥ ಮಹಾ ಗೋಡೆಯ ಮೇಲೆ ಕೇಪ್‍ವರ್ಡ್ ಆಟಗಾರರಿಗೆ ಅಪಾರವಾದ ವಿಶ್ವಾಸವಿದೆ. ಈ ಬಾರಿಯ ಫಿಫಾ ವಿಶ್ವಕಪ್‍ನಲ್ಲೂ ಆಗಿದ್ದು ಅದೇ. ಬಲಿಷ್ಠ ತಂಡಗಳ ಎದುರು ಅದರಲ್ಲೂ ಮೆಸ್ಸಿಯಂತಹ ದಿಗ್ಗಜ ಆಟಗಾರರನ ಕಿಕ್‍ಗಳನ್ನು ತಡೆದಿರುವುದು ವೊಜಿನ್ಹಾ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಫಿಫಾ ದಾಖಲೆಯ ಪುಟದಲ್ಲಿ ವೊಜಿನ್ಹಾ ಹೆಸರು..!

ಸ್ಪೇನ್ ವಿರುದ್ದ 7 ಗೋಲುಗಳನ್ನು ತಡೆದ್ರೆ, ಹಾಲಿ ಚಾಂಪಿಯನ್ ಅರ್ಜೆಂಟಿನಾ ವಿರುದ್ದ 8 ಗೋಲುಗಳನ್ನು ಸೇವ್ ಮಾಡಿದ್ದಾನೆ. ವೊಜಿನ್ಹಾ ಉತ್ಸಾಹ ಮತ್ತು ಚುರುಕುತನಕ್ಕೆ ಮೆಸ್ಸಿಯೇ ಅಚ್ಚರಿಗೊಂಡಿದ್ದಾನೆ. ಒಟ್ಟು ಆಡಿರುವ 4 ಪಂದ್ಯಗಳಲ್ಲಿ 18 ಗೋಲುಗಳನ್ನು ತಡೆದು ನಿಲ್ಲಿಸಿರುವ ವೊಜಿನ್ಹಾ, ಫಿಫಾ ವಿಶ್ವಕಪ್ ದಾಖಲೆಗಳ ಪುಟವನ್ನು ಸೇರಿಕೊಂಡಿದ್ದಾನೆ. ಈ ಹಿಂದೆ ಒಂದೇ ವಿಶ್ವಕಪ್‍ನಲ್ಲಿ ಪೀಟರ್ ಶಿಲ್ಟನ್ 28 ಗೋಲು ಹಾಗೂ ಡಿನೊ ಜೊಫ್ 27 ಗೋಲುಗಳನ್ನು ತಡೆದು ನಿಲ್ಲಿಸಿರುವ ದಾಖಲೆ ಇದೆ.

ನಿಜ, ವೊಜಿನ್ಹಾಗೆ ವಯಸ್ಸು ಜಸ್ಟ್ ನಂಬರ್ ಅಷ್ಟೇ.. 40ರ ಹರೆಯದಲ್ಲೂ ಅದ್ಭುತ ಡೈವಿಂಗ್ ವೇಗ ಮತ್ತು ಚುರುಕುತನದಿಂದ ಗಮನ ಸೆಳೆಯುತ್ತಾನೆ. ಸಂಯಮದಿಂದ ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ. ಕೇಪ್‍ವರ್ಡ್ ದೇಶದಂತಹ ಸಣ್ಣ ರಾಷ್ಟ್ರದ ಮಕ್ಕಳಿಗೂ ನಾವು ಜಾಗತಿಕ ಮಟ್ಟದಲ್ಲಿ ಮಿಂಚಬಹುದು ಎಂಬ ಕನಸನ್ನು ವೊಜಿನ್ಹಾ ಬಿತ್ತಿದ್ದಾನೆ.

ಫಿಫಾ ವಿಶ್ವಕಪ್ ವೇಳೆ 50 ಸಾವಿರ ಫಾಲೋವರ್ಸ್ ಹೊಂದಿದ್ದ ವೊಜಿನ್ಹಾ ಇನ್‍ಸ್ಟಾಗ್ರಾಮ್ ಪೇಜ್‍ನಲ್ಲಿ ಈಗ 2 ಕೋಟಿಗೂ ಹೆಚ್ಚು ಫಾಲೋವರ್ಸ್‍ಗಳಿದ್ದಾರೆ. ಇದರೊಂದಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಮೊದಲ ಗೋಲು ಕೀಪರ್ ಕೂಡ ಹೌದು.

ಬ್ಲೂ ಶಾರ್ಕ್‍ಗಳನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿರುವ ಕೇಪ್‍ವರ್ಡ್ ಜನತೆ..!

ಏನೇ ಆಗಲಿ, ಕೇಪ್‍ವರ್ಡ್ ತಂಡದ ಅದ್ಭುತ ಪ್ರದರ್ಶನ ಸದಾ ನೆನಪಿನಲ್ಲಿರುತ್ತದೆ. ನಾಕೌಟ್ ಹಂತದ ಸೋಲು ಕೇಪ್‍ವರ್ಡ್ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಬಹುದು. ಆದ್ರೆ ಈ ಸೋಲು ಕೂಡ ಕೇಪ್‍ವರ್ಡ್ ತಂಡಕ್ಕೆ ಪಾಠವಾಗಲಿದೆ. ಮೂಲ ಸೌಕರ್ಯಗಳು ಇಲ್ಲದಿದ್ರೂ ವಿದೇಶಿ ನೆಲದ ಸಣ್ಣ ಪುಟ್ಟ ಕ್ಲಬ್‍ಗಳಲ್ಲಿ ಆಡಿರುವ ಹುಡುಗರು ಇಂದು ಕೇಪ್‍ವರ್ಡ್ ದೇಶದ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ.

ಒಂದಂತೂ ಸತ್ಯ, ಕೇಪ್‍ವರ್ಡ್ ಆಟಗಾರರು ಕೇವಲ ಪಂದ್ಯಗಳನ್ನು ಆಡಲಿಲ್ಲ. ಸೋತು ಗೆಲ್ಲುವ ಕ್ರೀಡಾ ಮನೋಭಾವನೆಯನ್ನು ಜಗತ್ತಿಗೆ ಕಲಿಸಿದ್ದಾರೆ. ಅಲ್ಲದೆ ಕೋಟ್ಯಂತರ ಫುಟ್‍ಬಾಲ್ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಫುಟ್‍ಬಾಲ್ ಇತಿಹಾಸದ ಅತ್ಯಂತ ಸುಂದರ ಯಶೋಗಾಥೆಯನ್ನು ಬರೆದಿರುವ ಬ್ಲೂ ಶಾರ್ಕ್‍ಗಳನ್ನು ಸ್ವಾಗತಿಸಲು ಇದೀಗ ಕೇಪ್‍ವರ್ಡ್ ಎಂಬ ಸಣ್ಣ ದ್ವೀಪರಾಷ್ಟ್ರ ತುದಿಗಾಲಿನಲ್ಲಿ ನಿಂತಿದೆ. ಆ ಐತಿಹಾಸಿಕ ಕ್ಷಣ ಹೇಗಿರಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. ಯಾಕಂದ್ರೆ ಕೇಪ್‍ವರ್ಡ್ ಪಂದ್ಯ ಸೋತಿರಬಹುದು.. ಆದ್ರೆ ಫುಟ್‍ಬಾಲ್ ಆಟವನ್ನು ಗೆದ್ದಿದೆ. ಅಭಿಮಾನಿಗಳ ಮುಖದಲ್ಲಿ ಮಂದಹಾಸ ಬೀರುವಂತಹ ಪ್ರದರ್ಶನವನ್ನು ನೀಡಿದೆ.

ಸನತ್ ರೈ

 

 

Tags: #FIFAWorldCup2026 #ArgentinaVsCapeVerde #LionelMessi #VozinhaTheWall #BlueSharks #CapeVerdeFootball #FootballRomance #InspirationalSportsStory #WorldCupKnockout #saakshatv #sanathrai #TheBeautifulGame
ShareTweetSendShare
Join us on:

Related Posts

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

by Shwetha
July 11, 2026
0

ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಮತ್ತು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಗಾನಕೋಗಿಲೆಯಾಗಿ ನೆಲೆಸಿದ್ದ ಎಸ್ ಜಾನಕಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ಸಮಯದಿಂದ ವಯೋಸಹಜ...

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

by admin
July 11, 2026
0

🏔️ಶ್ವೇತವರ್ಣದಂತೆ ಹೊಳೆಯುವ ಹಿಮಪರ್ವತಗಳೇ ಈ ವೀರಭೂಮಿಯ ಮುಕಟುಮಣಿ. ಪ್ರಕೃತಿಯ ರಮಣೀಯ ಸೌಂದರ್ಯವೇ ಈ ನಾಡಿನ ಮುಖವಾಣಿ. ಸಣ್ಣ ಸಣ್ಣ ದ್ವೀಪಗಳು, ಬೆಟ್ಟಗುಡ್ಡಗಳೇ ಈ ದೇಶದ ಒಡಲು.🌊 ಅಟ್ಲಾಂಟಿಕ್...

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

by Shwetha
July 11, 2026
0

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡುವ ವೇಳೆ ಹಣ ನೀಡುವಂತೆ ಯಾರಾದರೂ ಬೇಡಿಕೆ ಇಟ್ಟರೆ ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...

ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

by Shwetha
July 11, 2026
0

ಬೆಂಗಳೂರು: ರಾಜಧಾನಿಯ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿ, ಸಿಲಿಕಾನ್ ಸಿಟಿಯನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿಸಲು ಪಣತೊಟ್ಟಿರುವ ಸಚಿವ ಕೃಷ್ಣ ಬೈರೇಗೌಡರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಧಾವಿಸಿದೆ....

ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ CCTV ಅಳವಡಿಕೆಗೆ ಸಿಎಂ ಸೂಚನೆ

ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ CCTV ಅಳವಡಿಕೆಗೆ ಸಿಎಂ ಸೂಚನೆ

by Shwetha
July 11, 2026
0

ಡಿ. ಕೆ. ಶಿವಕುಮಾರ್ ಅವರು, ರಾಜ್ಯದ ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ CCTV ಕ್ಯಾಮೆರಾಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಪ್ರಕಾರ, ಭಕ್ತರ ಧಾರ್ಮಿಕ ಭಾವನೆಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram