ADVERTISEMENT
Sunday, July 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”

admin by admin
July 4, 2026
in Sports, Newsbeat, ಕ್ರೀಡೆ
Luka Modric: Croatia

Luka Modric: Croatia

Share on FacebookShare on TwitterShare on WhatsappShare on Telegram

ಕ್ರೊವೇಶಿಯಾ..!
ಜಗತ್ತಿನ ಒಂದು ಪುಟ್ಟ ರಾಷ್ಟ್ರ. ಅಂದಾಜು 42 -43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದ್ರೆ ಈ ದೇಶಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವೂ ಇದೆ.
35 ವರ್ಷಗಳ ಹಿಂದೆಯಷ್ಟೇ ಸ್ವಾತಂತ್ರ್ಯವನ್ನು ಪಡೆದುಕೊಂಡ ಕ್ರೊವೇಶಿಯಾ ಇಂದು ಫುಟ್‍ಬಾಲ್ ಜಗತನ್ನೇ ಬೆಚ್ಚಿಬೀಳಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಅದ್ರಲ್ಲೂ 2018ರ ರಷ್ಯಾ ಫಿಫಾ ವಿಶ್ವಕಪ್ ಫೈನಲ್‍ನಲ್ಲಿ ರನ್ನರ್ ಅಪ್ ಆಗಿ ವಿಶ್ವದ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಒಂದು ಕಾಲದಲ್ಲಿ ಇಂಗ್ಲೀಷರಿಂದಲೇ ಫುಟ್‍ಬಾಲ್ ಆಟವನ್ನು ಕಲಿತ ಕ್ರೊವೇಶಿಯಾ, ಇಂದು ಇಂಗ್ಲೀಷರಿಗೆ ಫುಟ್‍ಬಾಲ್ ಪಾಠವನ್ನು ಹೇಳಿಕೊಡುವ ಮಟ್ಟಿಗೆ ಬೆಳೆದಿದೆ. 1873ರಲ್ಲಿ ಕ್ರೊವೇಶಿಯಾದ ಕಾರ್ಖಾನೆಗಳಲ್ಲಿ ಇಂಗ್ಲೀಷ್ ವಲಸಿಗರು ಕೆಲಸ ಮಾಡುತ್ತಿದ್ದರು. ಆಗ ಬಿಡುವಿನ ವೇಳೆಯಲ್ಲಿ ಇಂಗ್ಲೀಷ್ ವಲಸಿಗರು ಆಡುತ್ತಿದ್ದ ಕಾಲ್ಚೆಂಡಿನ ಆಟವನ್ನು ಕ್ರೊವೇಶಿಯಾ ಜನ ಅಚ್ಚರಿಯಿಂದ ನೋಡುತ್ತಿದ್ದರು.

Related posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

July 12, 2026
NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

July 12, 2026

ಆಂಗ್ಲರು ಆಡುತ್ತಿದ್ದ ರೀತಿಯನ್ನು ನೋಡ್ಕೊಂಡು ತಾವು ಕೂಡ ಫುಟ್‍ಬಾಲ್ ಆಟವನ್ನು ಕಲಿತುಕೊಂಡ್ರು. ಹಾಗೇ 1907ರಲ್ಲಿ ಸ್ಥಳಿಯ ಫುಟ್‍ಬಾಲ್ ಕ್ಲಬ್‍ಗಳು ಕೂಡ ಹುಟ್ಟಿಕೊಂಡವು. ಆದ್ರೆ ಕ್ರೊವೇಶಿಯಾಗೆ ರಾಷ್ಟ್ರೀಯ ತಂಡವಾಗಿ ಆಡಲು ಮಾತ್ರ ಅವಕಾಶಗಳು ಸಿಗಲಿಲ್ಲ.
ಯಾಕಂದ್ರೆ ಆಗ ಕ್ರೊವೇಶಿಯಾ ಯುಗೋಸ್ಲೋವಿಯಾ ಅಂಗ ದೇಶವಾಗಿತ್ತು.

1919ರಿಂದ 1939ರವರೆಗೆ ಕ್ರೊವೇಶಿಯಾ ಫುಟ್‍ಬಾಲ್ ಆಟಗಾರರು ಯುಗೋಸ್ಲೋವಿಯಾ ದೇಶವನ್ನು ಪ್ರತಿನಿಧಿಸುತ್ತಿದ್ದರು. ಬಳಿಕ ಎರಡನೇ ಮಹಾಯುದ್ಧದ ವೇಳೆ ರಾಜಕೀಯ ಬಿಕ್ಕಟ್ಟಿನಿಂದ ಪ್ರತ್ಯೇಕವಾಗಿ ತಂಡವಾಗಿ ಆಡಿದ್ರೂ ಫಿಫಾ ಮಾನ್ಯತೆ ಮಾತ್ರ ಪಡೆದುಕೊಂಡಿರಲಿಲ್ಲ. 1939ರಿಂದ 1945ರವರೆಗೆ ಕ್ರೊವೇಶಿಯಾ ತಂಡ ಸ್ವಿಜರ್‍ಲೆಂಡ್, ಹಂಗೇರಿ ತಂಡಗಳ ವಿರುದ್ಧ ಸೌರ್ಹಾರ್ದಯುತ ಪಂದ್ಯಗಳನ್ನು ಆಡುತ್ತಿತ್ತು. ಈ ನಡುವೆ 1941ರಲ್ಲಿ ಫಿಫಾ ಸದಸ್ಯತ್ವವನ್ನು ಕೂಡ ಪಡೆದುಕೊಂಡಿತ್ತು. ಅಲ್ಲದೆ ಫಿಫಾ ಸದಸ್ಯತ್ವ ಪಡೆದುಕೊಂಡಿದ್ದ ತಂಡಗಳ ವಿರುದ್ಧ ಪಂದ್ಯಗಳನ್ನು ಕೂಡ ಕ್ರೊವೇಶಿಯಾ ಆಡುತ್ತಿತ್ತು.

ಆದ್ರೆ ಎರಡನೇ ಮಹಾಯುದ್ಧದ ನಂತರ ಕ್ರೊವೇಶಿಯಾ ಸೋಷಿಯಲಿಸ್ಟ್ ಫೆಡರಲ್ ರಿಪಬ್ಲಿಕ್ ಆಫ್ ಯುಗೋಸ್ಲೋವಿಂiÀiವಾಗಿ ಮಾರ್ಪಟ್ಟಿತ್ತು. ಆದ್ರೂ ಕ್ರೊವೇಶಿಯಾ ಆಟಗಾರರು ಯುಗೋಸ್ಲೋವಿಯಾ ತಂಡವನ್ನು ಪ್ರತಿನಿಧಿಸಬೇಕಾಗುತ್ತಿತ್ತು. ಏತನ್ಮಧ್ಯೆ 1950ರಿಂದ 1956ರವರೆಗೆ ಕ್ರೊವೇಶಿಯಾ ತಂಡ ಇಂಡೋನೇಷ್ಯಾ ವಿರುದ್ಧ ಆಗಾಗ ಪಂದ್ಯಗಳನ್ನು ಆಡುತ್ತಿತ್ತು. ಆದ್ರೆ ಪ್ರತಿಷ್ಠಿತ ಟೂರ್ನಿಗಳಾದ ಒಲಿಂಪಿಕ್ಸ್, ಫಿಫಾ ವಿಶ್ವಕಪ್, ಯೂರೋಪಿಯನ್ ಚಾಂಪಿಯನ್‍ಷಿಪ್‍ಗಳಲ್ಲಿ ಕ್ರೊವೇಶಿಯಾ ಆಟಗಾರರು ಯುಗೋಸ್ಲೋವಿಯಾ ತಂಡದ ಪರ ಕಣಕ್ಕಿಳಿಯುತ್ತಿದ್ದರು.

ಬಳಿಕ 1991ರಲ್ಲಿ ಕ್ರೊವೇಶಿಯಾ ಸ್ವಾತಂತ್ರ್ಯವನ್ನು ಪಡೆದುಕೊಂಡಿತ್ತು. ಹಾಗಾಗಿ ಕ್ರೊವೇಶಿಯಾ ಫುಟ್‍ಬಾಲ್ ಸಂಸ್ಥೆಯು 1991ರಲ್ಲಿ ಅಧಿಕೃತವಾಗಿ ಆರಂಭವಾಯಿತ್ತು. ಅಷ್ಟೇ ಅಲ್ಲ, 1993ರಲ್ಲಿ ಫಿಫಾ ಮತ್ತು ಯುಇಎಫ್‍ಎ ಮಾನ್ಯತೆಯನ್ನು ಪಡೆದುಕೊಂಡಿತ್ತು. ಪ್ರತಿಭಾವಂತ ಆಟಗಾರರ ದಂಡೇ ಕ್ರೊವೇಶಿಯಾ ತಂಡದಲ್ಲಿದ್ದರು. ಇದ್ರಿಂದ 1996ರಲ್ಲಿ ಯೂರೋ ಕಪ್ ಟೂರ್ನಿಗೆ ಕ್ರೊವೇಶಿಯಾ ತಂಡ ಎಂಟ್ರಿಯಾಯ್ತು. ಹೀಗೆ ಕ್ರೊವೇಶಿಯಾ ತಂಡದ ಅದ್ಭುತ ಪ್ರದರ್ಶನದಿಂದ ಫಿಫಾ ವಿಶ್ವಕಪ್ ಟೂರ್ನಿಗೂ ಅರ್ಹತೆ ಪಡೆದುಕೊಳ್ಳಲು ಯಶಸ್ವಿಯಾಯ್ತು.

1998ರ ಫ್ರಾನ್ಸ್ ವಿಶ್ವಕಪ್‍ಗೆ ಕ್ರೊವೇಶಿಯಾ ತಂಡ ಅರ್ಹತೆ ಪಡೆದುಕೊಂಡಿತ್ತು. ಚೊಚ್ಚಲ ಟೂರ್ನಿಯಲ್ಲಿ ಮಿಂಚಿನ ಆಟವಾಡಿದ ಕ್ರೊವೇಶಿಯಾ ಸೆಮಿಫೈನಲ್ ಕೂಡ ಪ್ರವೇಶಿಸಿತ್ತು. ಆದ್ರೆ ಸೆಮಿಫೈನನಲ್ಲಿ ಫ್ರಾನ್ಸ್ ವಿರುದ್ಧ 2-1ರಿಂದ ಸೋಲು ಅನುಭವಿಸಿತ್ತು. ಆದ್ರೆ ನೆದಲೆರ್‍ಂಡ್ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ನಂತರ ವಿಶ್ವಫುಟ್‍ಬಾಲ್‍ನಲ್ಲಿ ಛಾಫು ಮೂಡಿಸಿದ್ರೂ ಕ್ರೊವೇಶಿಯಾ, 2002 ಮತ್ತು 2006, 2014ರ ಫಿಫಾ ವಿಶ್ವಕಪ್‍ಗಳಲ್ಲಿ ಲೀಗ್ ಹಂತಕ್ಕೆ ತನ್ನ ಹೋರಾಟವನ್ನು ಅಂತ್ಯಗೊಳಿಸಿತ್ತು. ಕಳೆದ 28 ವರ್ಷಗಳ ಆರು ವಿಶ್ವಕಪ್‍ಗಳಲ್ಲಿ ಐದು ವಿಶ್ವಕಪ್ ಟೂರ್ನಿಗಳಲ್ಲಿ ಕ್ರೊವೇಶಿಯಾ ಆಡಿದೆ. 2010ರ ದಕ್ಷಿಣ ಆಫ್ರಿಕಾ ಫಿಫಾ ವಿಶ್ವಕಪ್‍ಗೆ ಮಾತ್ರ ಅರ್ಹತೆ ಪಡೆದುಕೊಂಡಿರಲಿಲ್ಲ. ಒಟ್ಟು ಒಂದು ಬಾರಿ ರನ್ನರ್ ಅಪ್, ಎರಡು ಬಾರಿ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಇನ್ನೊಂದೆಡೆ, ಫಿಫಾ ವಿಶ್ವಕಪ್, ಯೂರೋ ಕಪ್ ಹೀಗೆ ಪ್ರತಿಷ್ಠಿತ ಟೂರ್ನಿಗಳಲ್ಲಿ ಬಲಿಷ್ಠ ತಂಡಗಳಿಗೆ ಆಘಾತ ನೀಡಿರುವ ಹೆಗ್ಗಳಿಕೆ ಕೂಡ ಕ್ರೊವೇಶಿಯಾ ತಂಡಕ್ಕಿದೆ. 2018ರ ರಷ್ಯಾ ಫಿಫಾ ವಿಶ್ವಕಪ್‍ನಲ್ಲಿ ಕ್ರೊವೇಶಿಯಾ ಬಲಿಷ್ಠ ಅಜೆರ್‍ಂಟಿನಾ ತಂಡಕ್ಕೂ ಸೋಲಿನ ರುಚಿ ತೋರಿಸಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.

ಆದ್ರೆ 2026ರ ಫಿಫಾ ವಿಶ್ವಕಪ್‍ನಲ್ಲಿ ಮತ್ತೆ ಲೂಕಾ ಮ್ಯಾಡ್ರಿಕ್‍ನಂತಹ ಸರ್ವಶ್ರೇಷ್ಠ ಆಟಗಾರನ ಸಾರಥ್ಯದಲ್ಲಿ ನಾಕೌಟ್ ಹಂತದಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ. ಪೋರ್ಚ್‍ಗಲ್ ವಿರುದ್ದ 2-1 ಅಂತರದಿಂದ ಸೋತು ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆ ಕೂಡ ಕಮರಿ ಹೋಯ್ತು. ಈ ಮೂಲಕ ಲೂಕಾ ಮ್ಯಾಡ್ರಿಕ್‍ನ ಕನಸು ಕೂಡ ಭಗ್ನಗೊಂಡಿತ್ತು. ಈ ಸೋಲಿನೊಂದಿಗೆ ಲೂಕಾ ಮ್ಯಾಡ್ರಿಕ್ ತನ್ನ ವರ್ಣರಂಜಿತ ವೃತ್ತಿಬದುಕಿನ ಫಿಫಾ ವಿಶ್ವಕಪ್‍ಗೆ ವಿದಾಯ ಹೇಳಿದ.

ಏನೇ ಆದ್ರೂ ಕ್ರೊವೇಶಿಯಾದ ಫುಟ್‍ಬಾಲ್ ಜರ್ನಿಯನ್ನು ನೋಡಿದಾಗ ಅಬ್ಬಾ ಅನ್ಸುತ್ತೆ. ಸುಮಾರು ನೂರು ವರ್ಷಗಳಿಂದ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡುವ ಅರ್ಹತೆ ಇದ್ರೂ ಅವಕಾಶಗಳು ಮಾತ್ರ ಇರಲಿಲ್ಲ. ಇದೀಗ 35 ವರ್ಷಗಳಿಂದ ತನ್ನದೇ ಆದ ಅಸ್ತಿತ್ವವನ್ನು ಪಡೆದುಕೊಂಡಿರುವ ಕ್ರೊವೇಶಿಯಾ ಜನರ ಫುಟ್‍ಬಾಲ್ ಪ್ರೀತಿಗೊಂದು ಸಲಾಂ..

ಸನತ್ ರೈ
saakshatv.com

ShareTweetSendShare
Join us on:

Related Posts

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

by Shwetha
July 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಹಳೇ ಗಾದೆ ಮಾತು ಮತ್ತೊಮ್ಮೆ ಅಕ್ಷರಶಃ ನಿಜವಾಗಿದೆ. ರಾಜ್ಯ ರಾಜಕಾರಣ ಹಾಗೂ ಪಕ್ಷದ...

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

by Shwetha
July 12, 2026
0

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಹಳೆ ಪಿಂಚಣಿ ಯೋಜನೆ ಅಂದರೆ ಓಪಿಎಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ....

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

by Shwetha
July 12, 2026
0

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಕಷ್ಟದ ಕಾರ್ಮೋಡ ಕವಿದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ...

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

by Shwetha
July 12, 2026
0

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಈಗ ದೊಡ್ಡ ಮಟ್ಟದ ಸಾಂಸ್ಕೃತಿಕ ಸಂಘರ್ಷಕ್ಕೆ ನಾಂದಿ...

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನನ್ನ ಹತ್ಯೆಗೆ ಸಂಚು ನಡೆಸಿದರೆ ಇರಾನ್ ಭೂಪಟದಿಂದಲೇ ನಾಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

by Shwetha
July 12, 2026
0

ವಾಷಿಂಗ್ಟನ್: ತನ್ನ ವಿರುದ್ಧ ಹತ್ಯೆ ಅಥವಾ ಹತ್ಯೆಗೆ ಸಣ್ಣ ಪ್ರಯತ್ನ ನಡೆದರೂ ಇರಾನ್ ದೇಶವನ್ನು ಸಂಪೂರ್ಣವಾಗಿ ನಾಶಮಾಡಿ ಧ್ವಂಸಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram