ದಾಸನಿಗೆ ಇಂದ್ರಜಾಲ | ಇಂದ್ರಜಿತ್ ಆರೋಪದ ಕಂಪ್ಲಿಟ್ ಡಿಟೈಲ್ಸ್
ಬೆಂಗಳೂರು : ಕಳೆದ ಒಂದು ವಾರದಿಂದ ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ದರ್ಶನ್ ಅವರೇ ಸುದ್ದಿಗೋಷ್ಠಿ ನಡೆಸಿ ಪ್ರಕರಣಕ್ಕೆ ಭಾರಿ ಹೈಪ್ ಕೊಟ್ಟಿದ್ದರು. ಯಾವುದೇ ಕಾರಣಕ್ಕೂ ಯಾರನ್ನೂ ಬಿಡಲ್ಲ. ಅದು ಇದು ಅಂತಾ ಸಿನಿಮಾ ಡೈಲಾಗ್ ಗಳನ್ನ ಹೇಳಿದ್ದರು. ಆದ್ರೆ ಇನ್ನೇನು ಪ್ರಕರಣ ರೋಚಕತೆ ಪಡೆದುಕೊಳ್ಳುತ್ತಿದೆ ಅನ್ನೋವಷ್ಟರಲ್ಲಿ ರಾಜಿ ಸಂಧಾನ ಅಂತಾ ಪ್ರಕರಣಕ್ಕೆ ಫುಲ್ ಸ್ಟಾಪ್ ಇಟ್ಟರು. ಈ ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ, ನೀವು ಕೂಡ ಇದನ್ನ ಬಿಟ್ಟುಬಿಡಿ ಅಂತಾ ಚಾಲೆಂಜಿಂಗ್ ಸ್ಟಾರ್ ಮನವಿ ಮಾಡಿಕೊಂಡರು. ಇದು ಸಾಮಾನ್ಯವಾಗಿಯೇ ಇಂದಿಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಆರಂಭದಲ್ಲಿ ಅಷ್ಟೆಲ್ಲಾ ಅಬ್ಬರಿಸಿದ “ರಾಬರ್ಟ್” ಕೊನೆಯಲ್ಲಿ ಪ್ರೀತಿಯ ರಾಮು’ ಆಗಿದ್ದು ಯಾಕೆ ಅಂತಾ ಎಲ್ಲರಲ್ಲೂ ಒಂದು ಅನುಮಾನ ಹುಟ್ಟಿಕೊಂಡಿದೆ. ಈ ಅನುಮಾನ ಇನ್ನೂ ಜೀವಂತ ಇರುವಾಗಲೇ ಇದೀಗ ದಾಸನ ಮೇಲೆ ಇಂದ್ರಜಾಲ ಪ್ರಯೋಗವಾಗಿದೆ.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದಲಿತ ನಕ್ಸಯರ್ ಗೆ ನಟ ದರ್ಶನ್ ಮತ್ತು ಸ್ನೇಹಿತರ ಗ್ಯಾಂಗ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಇಂದ್ರಜಿತ್, ಹೋಟೆಲ್ ನಲ್ಲಿ ದಲಿತ ಸಪ್ಪೆಯರ್ ಗೆ ಹಲ್ಲೆ ನಡೆಸಿ ಸಿಸಿಟಿವಿ ದೃಶ್ಯಾವಳಿ ನಾಶ ಮಾಡಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ರಾಜೀ ಸಂಧಾನ ಮಾಡಿ ಕಳುಹಿಸಿದ್ದಾರೆ. ಅಂದರೆ ಪೊಲೀಸ್ ಠಾಣೆಗಳು ಸಮಂಟ್ ಕೇಂದ್ರಗಳು ಆಗುತ್ತಿದೆ. ಮೈಸೂರು ಪೊಲೀಸರು ಬಳೆ ತೊಟ್ಟು ಕೊಂಡಿದ್ದೀರಾ? ಎಂದು ಪ್ರಶ್ನಿಸಿದರು.
ಮೈಸೂರಿನ ಸಂದೇಶ್ ನಾಗರಾಜ್ ಮಾಲೀಕತ್ವದ ಹೋಟೇಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಪೂರ್ಣ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಹಲ್ಲೆಯಿಂದ ವಜತ್ ಗೆ ಕಣ್ಣುಗಳಿಗೆ ಹಾನಿಯಾಗಿದೆ. ಸಿಸಿಟಿವಿ ದೃಶ್ಯ ಇದೆ.
ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ. ನಾನು ಸಾಮಾನ್ಯರ ಪರ, ಪ್ರತಿಯೊಂದು ಕೇಸ್ ನಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಾದರೂ ನ್ಯಾಯ ಸಿಗಲಿ ಎಂದು ಇಂದ್ರಜಿತ್ ಒತ್ತಾಯಿಸಿದ್ದಾರೆ.
ಇದೇ ವೇಳೆ ವಂಚನೆ ಪ್ರಕರಣದ ಸಂಬಂಧ ಮಾತನಾಡಿದ ಅವರು, 25 ಕೋಟಿ ರೂ. ಸಾಲದ ಪ್ರಕರಣದಲ್ಲಿ ಸಿಲುಕಿರುವ ಅರುಣಾ ಕುಮಾರಿಗೆ ಬೆದರಿಕೆ ಒಡ್ಡಿದ್ದಾರೆ. ಆಕೆಯನ್ನು ಮೈಸೂರು ರಸ್ತೆ ರಾಜರಾಜೇಶ್ವರಿ ಗೇಟ್ ಬಳಿ ಇನೋವಾ ಕಾರಿನಲ್ಲಿ ಕೂರಿಸಿಕೊಂಡು ಬೆದರಿಕೆ ಹಾಕಿದ್ದಾರೆ. ಇದಲ್ಲದೆ ಮನೆಗೆ ಮತ್ತು ತೋಟದ ಮನೆಗೆ ಯಾಕೆ ಕರೆಸಿಕೊಂಡರು ಎಂದು ಇಂದ್ರಜಿತ್ ಪ್ರಶ್ನಿಸಿದರು.
ಅರುಣಾಕುಮಾರಿ ಎಂಬುದು ಒಂದು ಪಾತ್ರವಷ್ಟೇ ಆಕೆಯ ಹಿಂದೆ ದೊಡ್ಡ ದಂದೆ ಇದೆ: ಅರುಣಾಕುಮಾರಿ ನನಗೆ ಪರಿಚಯ ಇಲ್ಲ. ನ್ಯಾಯ ದೊರಕಬೇಕು. ಸೆಟಲ್ ಮೆಂಟ್ ಮಾಡಲಾಗುತ್ತಿದೆ. ದರ್ಶನ್ ಮತ್ತು ಮಾದರಿ ಒಂದಾದರೆ ಸಾಕಾ..? ಇನ್ನೂ ತನಿಖೆ ಹಂತದಲ್ಲಿದೆ. ಸಾಮಾನ್ಯರು ಜೈಲಿಗೆ ಹೋಗುತ್ತಿದ್ದಾರೆ. ಸೆಲೆಬ್ರಿಟಿಗಳು ಸೆಟಲ್ ಮೆಂಟ್ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.










