ಘಟನೆ ನಡೆದಿದ್ದು ನಿಜ, ದರ್ಶನ್ ಸಿಬ್ಬಂದಿಗೆ ಬೈದ ಅಷ್ಟೆ : ಸಂದೇಶ್ ನಾಗರಾಜ್ ಪುತ್ರ
ಮೈಸೂರು: ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತ, ನಿರ್ದೇಶಕ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಇದೀಗ ಹೋಟೆಲ್ ನ ಮಾಲೀಕ ಸಂದೇಶ್ ನಾಗರಾಜ್ ಪುತ್ರ ಪ್ರತಿಕ್ರಿಯೆ ನೀಡಿದ್ದು, ಘಟನೆಯಿಂದ ನಮಗೂ, ನಮ್ಮ ಹೋಟೆಲ್ ಗೂ ತೊಂದರೆಯಾಗಿದೆ. ಲಾಕ್ ಡೌನ್ ಗೂ ನಾಲ್ಕು ದಿನ ಮುಂಚೆ ಈ ಘಟನೆ ನಡೆದಿದೆ. ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆಯಾಗಿಲ್ಲ. ಸಿಬ್ಬಂದಿಯನ್ನ ಬೈದಿದ್ದು ನಿಜ. ಹೋಟೆಲ್ ಸಿಬ್ಬಂದಿ ಮಹಾರಾಷ್ಟ್ರ ಮೂಲದ ಟ್ರೈನಿ. ಆತ ಹಿಂದಿಯಲ್ಲಿ ಮಾತನಾಡುತ್ತಿದ್ದ. ಸರ್ವಿಸ್ ವಿಚಾರದಲ್ಲಿ ನಟ ದರ್ಶನ್ ಸಿಬ್ಬಂದಿಗೆ ಬೈದ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಅವತ್ತು ಘಟನೆ ನಡೆದ ದಿನ 20 ಕ್ಕೂ ಹೆಚ್ಚು ಜನ ಇದ್ರು. ಅವತ್ತು ರಾಕೇಶ್ ಪಾಪಣ್ಣ, ಹರ್ಷ, ಪವಿತ್ರ ಗೌಡ ಕೂಡ ಅವತ್ತು ಇರಬಹುದು.ಘಟನೆ ರಾತ್ರಿ 12 ಗಂಟೆಗೆ ನಡೆಯಿತ್ತು. ಆ ವೇಳೆ ದರ್ಶನ್ ಗೂ ನಾನು ಸಮಾಧಾನ ಮಾಡಿದ್ದೇನೆ. ನನ್ನ ಹೋಟೆಲ್ ಸಿಬ್ಬಂದಿ ಆತ ಆತನಿಗೆ ಬೈಯೋದು ಬೇಡ ಅಂತಾ ಸಮಾಧಾನ ಮಾಡಿದ್ದೇನೆ. ನನ್ನ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೆ ನಾನು ಸುಮ್ಮನೆ ಬಿಡ್ತೀನಾ. ಯಾವ ಹಲ್ಲೆಯೂ ನಡೆದಿಲ್ಲ, ಆದ್ರೆ ಬೈದದ್ದು ನಿಜ. ಹಲ್ಲೆಯಾಗಿದ್ರೆ ನಾನೇ ಪೆÇಲೀಸರಿಗೆ ಕಂಪ್ಲೈಟ್ ಕೊಡ್ತಿದ್ದೆ. ಸಿಸಿಟಿವಿ ಪುಟೇಜ್ ನಾಶ ಮಾಡುವ ಉದ್ದೇಶ ಇಲ್ಲ. ಹತ್ತು ದಿನಗಳ ವರೆಗೆ ಪುಟೇಜ್ ಇರುತ್ತೆ. ಬಳಿಕ ಅದೇ ರೀಶಫಲ್ ಆಗುತ್ತದೆ ಎಂದು ಹೇಳಿದ್ದಾರೆ.









