ಇಂದ್ರಜಿತ್ ಅವ್ರು ಪ್ರೂವ್ ಮಾಡಿಕೊಳ್ಳಲಿ : ದರ್ಶನ್ darshan
ಬೆಂಗಳೂರು : ನೀವೆಲ್ಲಾ ಇಲ್ಲಿ ಸೇರಿದ್ದೀರಿ. ನಿಮ್ಮ ಜಾತಿ ಯಾವುದು ಅಂತ ಕೇಳ್ತೀವಾ?. ಹೋಟೆಲ್ ನಲ್ಲಿ ಸಪ್ಲೈಯರ್ ಊಟ ತಡವಾಗಿ ತಂದಿದ್ದಕ್ಕೆ ಬೈದಿರಬಹುದು. ಯಾಕಪ್ಪ ತಡ ಮಾಡಲಾಗಿದೆ ಎಂದು ಕೇಳಿರಬಹುದು. ಆದರೆ ಈಗ ಈ ಪ್ರಕರಣದಲ್ಲಿ ಜಾತಿ ತೆಗೆದಿದ್ದಾರೆ ಎಂದು ನಟ ದರ್ಶನ್ ಅಸಮಧಾನ ಹೊರಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ಏನ್ ಆದ್ರೂ ಹೇಳಲಿ. ಊಹಾಪೋಹಗಳನ್ನು ಬಿಟ್ಟು ಬಿಡಿ. ಈ ಪ್ರಕರಣವನ್ನು ಇಲ್ಲಿಗೆ ಮುಚ್ಚಿ ಹಾಕ್ತಿಲ್ಲ, ಮುಚ್ಚಿ ಹಾಕುವುದಿಲ್ಲ. ಎಫ್ ಐಆರ್ ಆಗಿದೆ, ಪೊಲೀಸರಿಗೆ ತನಿಖೆ ಮಾಡಲು ಟೈಮ್ ಕೊಡಿ. ಇದ್ರಲ್ಲಿ ಜಾತಿ ಬೇರೆ ತರುತ್ತಾ ಇದ್ದಾರೆ, ಹಾಗೇನಿಲ್ಲ. ನನ್ನದು ಸಂದೇಶ್ದ್ದು ಸಾವಿರ ಗಲಾಟೆ ಇದೆ. ನಮ್ನದನ್ನು ನಾವು ನೋಡ್ಕೊತ್ತೇವೆ, ಅದು ಬಿಟ್ಟು ಬಿಡಿ ಎಂದು ಕೋರಿಕೊಂಡರು.
ಇನ್ನು ಇಂದ್ರಜಿತ್ ಅವ್ರು ದೊಡ್ಡ ತನಿಖಾದಾರರು, ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ. ಇಂದ್ರಜಿತ್ ಅವ್ರು ಪ್ರೂವ್ ಮಾಡಿಕೊಳ್ಳಲಿ. ಇಂದ್ರಜಿತ್ ಲಂಕೇಶ್ ಅವ್ರು ಇಂಟರ್ ಯ್ಯೂ ಗೆ ಕೇಳಿದ್ರು. ಎರಡು ಬಾರಿ ಇಂಟರ್ ವ್ಯೂ ಕೇಳಿ ಕರೆ ಮಾಡಿದ್ರು. ನಾನು ಈಗ ಆಗಲ್ಲ ಅಂದೆ, ಅವರು ನನ್ನ ಒಂದು ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈಗ ಈ ಇಶ್ಯೂ ಮಾಡಿ ಹೊಸದಾಗಿ ಏನೋ ಡೈರೆಕ್ಟ್ ಮಾಡ್ತಿದ್ದಾರೆ.
ಈಗ ಮೈಸೂರಿಗೆ ಹೋಗ್ತಾ ಇದ್ದೇನೆ. ಆಷಾಢ ಶುಕ್ರವಾರ, ಚಾಮುಂಡಿ ಭೇಟಿ ಮಾಡುತ್ತೇನೆ. ಉಮಾಪತಿ, ಹರ್ಷಗೆ ಹೇಳಿದ್ದೇನೆ ಇಲ್ಲಿಗೆ ನಿಲ್ಲಿಸಿ ಅಂತ. ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ನಿಲ್ಲಿಸಿ ಎಂದಿದ್ದೇನೆ. ಪೆÇಲೀಸ್ ತನಿಖೆ ನಡೆದ ಮೇಲೆ ಮಾತನಾಡ್ತೇನೆ ಎಂದು ಹೇಳಿದ್ದಾರೆ









