ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ : ಇಂದ್ರಜಿತ್ ಲಂಕೇಶ್
ಬೆಂಗಳೂರು : ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ನಟ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕಿಡಿಕಾರಿದ್ದಾರೆ.
ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಆದ್ರೆ ತಪ್ಪನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕು. ಎಷ್ಟು ಅಂತ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೀರಾ..? ಓರ್ವ ಸೆಲೆಬ್ರಿಟಿಯಾಗಿದ್ದುಕೊಂಡು ನಿರ್ದೇಶಕ, ನಿರ್ಮಾಪಕ, ವಾಚ್ ಮ್ಯಾನ್ ಗೆ ಅಥವಾ ಸಾಮಾನ್ಯ ನಾಗರಿಕನಿಗೆ ಹೊಡೆಯುವುದು ಸರಿಯಲ್ಲ. ಜುಲೈ 3ರಂದು ಸೋಶಿಯಲ್ ನಲ್ಲಿ ಗೋಪಾಲ್ ರಾಜ್ ಅರಸು(ಪಪ್ಪು) ಅವರಿಗೆ ಹೊಡೆದಿದ್ದೀರಿ. ನಿಮ್ಮ ತೋಟದಲ್ಲಿದ್ದ ವಾಚ್ ಮ್ಯಾನ್ ಗೂ ಒದೆ ಬಿದ್ದಿದೆ. ಅವನು ಕೆಲಸನೇ ಬಿಟ್ಟು ಹೋಗಿದ್ದಾನೆ. ಏನಿದು ಇಷ್ಟೊಂದು ಹೊಡೆಯುವುದು, ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ನಾನು ಒಂಟಿ ಸಲಗ, ನಾನು ಮಾತಾಡ್ತೀನಿ. ನಂಗೆ ಕೆಲ ಮಾಹಿತಿಗಳು ಬರುತ್ತವೆ. ಇನ್ನೂ ಕೆಲವು ವಿಚಾರ ತಿಳಿದ್ರೆ ನೀವು ಶಾಕ್ ಆಗ್ತೀರಿ. ಘಟನೆ ನಡೆದ ಸಮಯ, ಸ್ಥಳ ಎಲ್ಲವನ್ನೂ ಹೇಳಿದ್ದೀನಿ. ಪೆÇಲೀಸರು ಏನ್ ಮಾಡ್ತಾರೋ ನೋಡೋಣ. ನಾನೊಬ್ಬ ಪತ್ರಕರ್ತ, ನಾನು ಇನ್ವೆಷ್ಟಿಗೇಷನ್ ಮಾಡ್ತೀನಿ. ಹರ್ಷ, ಪಾಪಣ್ಣ ಮೆಲಂಟಾ, ದರ್ಶನ್, ಇಬ್ಬರು ಹುಡುಗಿಯರು, ರಾಕೇಶ್, ಪವಿತ್ರ ಗೌಡ ಕೂಡ ಇದ್ದರು ಎಂದು ಇಂದ್ರಜಿತ್ ಮತ್ತೆ ಹೇಳಿದ್ದಾರೆ.
ಜೂನ್ 24 ಮತ್ತು 25 ರಂದು ಲಾಕ್ ಡೌನ್ ಇತ್ತು. ಈ ಸಮಯದಲ್ಲಿ ಘಟನೆ ನಡೆದಿದೆ. ಬಡವರಿಗೆ ಒಂದು ನ್ಯಾಯ, ಸೆಲೆಬ್ರಿಟಿಗೆ ಒಂದು ನ್ಯಾಯನಾ..? ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ ಆದರೆ ಸೆಲೆಬ್ರಿಟಿಗಳೆಂದು ಇಂತಹ ವರ್ತನೆಗಳನ್ನು ಮಾಡುವುದು ತಪ್ಪು. ಸಾಮಾಜಿಕ ಕಳಕಳಿಯಿಂದ ಹಾಗೂ ಬಡವರ ಮೇಲಿನ ದೌರ್ಜನ್ಯವನ್ನು ನಾನು ಪ್ರಶ್ನಿಸುತ್ತಿದ್ದೇನೆ. ಇಷ್ಟೆಲ್ಲ ಅನ್ಯಾಯಗಳು ನಡೆಯುತ್ತಿದ್ದರೂ ನೋಡುತ್ತಾ ಸುಮ್ಮನಿರಲಾಗದು ಎಂದು ಇಂದ್ರಜಿತ್ ಲಂಕೇಶ್ ಕಿಡಿಕಾರಿದ್ದಾರೆ.