ದರ್ಶನ್ ಒಮ್ಮೆ ನನ್ನ ಕೆಟ್ಟದಾಗಿ ಬೈದ್ರು : ಹಾರ್ಸ್ ರೈಡರ್ ಸಂತೋಷ್
ಬೆಂಗಳೂರು : ದರ್ಶನ್ ಅವರು ನನ್ನ ಮೇಲೆ ಹಲ್ಲೆ ಮಾಡಿಲ್ಲ. ಆದ್ರೆ ಒಂದು ದಇನ ಕೆಟ್ಟದಾಗಿ ಬೈದ್ರು, ಅದಕ್ಕೆ ಕೆಲಸ ಬಿಟ್ಟೆ ಎಂದು ನಟ ದರ್ಶನ್ ಅವರೊಂದಿಗಿದ್ದ ಹಾರ್ಸ್ ರೈಡರ್ ಸಂತೋಷ್ ಸ್ಪಷ್ಟಪಡಿಸಿದ್ದಾರೆ.
ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ವಿಚಾರವಾಗಿ ಇಂದ್ರಜಿತ್ ಲಂಕೇಶ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುವ ವೇಳೆ, ದರ್ಶನ್ ಅವರೊಂದಿಗಿದ್ದ ಹಾರ್ಸ್ ರೈಡರ್ ಗೆ ಹಲ್ಲೆ ಮಾಡಿದ್ದರು ಎಂಬ ಆರೋಪವನ್ನು ಮಾಡಿದ್ದರು. ಆದ್ರೆ ಹಾರ್ಸ್ ರೈಡರ್ ಸಂತೋಷ್ ಆರೋಪವನ್ನು ಅಲ್ಲಗಳೆದಿದ್ದಾರೆ.
ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಂತೋಷ್, ನಾನು ದರ್ಶನ್ ಅವರ ಜೊತೆ 7 ವರ್ಷಗಳ ಕಾಲ ಹಾರ್ಸ್ ರೈಡರ್ ಆಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಕೂಡ ಅವರು ನನ್ನೊಂದಿಗೆ ಏಕವಚನದಲ್ಲೂ ಮಾತನಾಡಿರಲಿಲ್ಲ ತುಂಬಾ ಚೆನ್ನಾಗಿ ಇದ್ವಿ. ಆದ್ರೆ ಒಂದು ದಿನ ಕುದುರೆ ವಿಚಾರವಾಗಿ ನನಗೆ ಬೈದ್ರು ಅದಕ್ಕೆ ಕೆಲಸ ಬಿಟ್ಟೆ ಅಷ್ಟೆ. ಅದನ್ನು ಹೊರತುಪಡಿಸಿ ಅವರು ನನಗೆ ಯಾವುದೇ ರೀತಿ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನಾನು ಕೆಲಸ ಬಿಟ್ಟು ಬಂದು 3 ವರ್ಷ ಆಯ್ತು. ನಾನು ಅವರು ಸೆಲೆಬ್ರಿಟಿ ಅಂತ ಜಂಬದಿಂದ ಹೇಳುತ್ತಿಲ್ಲ. ಅವರಿಂದ ಬಿಟ್ಟು ಬಂದೆ ಎನ್ನುವ ಕೋಪಕ್ಕೂ ಹೇಳುತ್ತಿಲ್ಲ. ನಾನು ಅವರೊಂದಿಗೆ 7 ವರ್ಷ ಉತ್ತಮ ಬಾಂಧವ್ಯ ಹೊಂದಿದ್ದೆ. ಅದನ್ನು ಹೊರತು ಪಡಿಸಿ ಬೇರೆನಿಲ್ಲ ಎಂದು ಇಂದ್ರಜಿತ್ ಆರೋಪವನ್ನು ಸಂತೋಷ್ ತಳ್ಳಿ ಹಾಕಿದ್ದಾರೆ.