ನಾಲ್ಕನೇ ಹಂತದ ಜೆಇಇ (Main) ಪರೀಕ್ಷೆ ಮುಂದೂಡಿಕೆ – ಧರ್ಮೇಂದ್ರ ಪ್ರಧಾನ್
ನವದೆಹಲಿ : ನಾಲ್ಕನೇ ಹಂತದ ಜೆಇಇ (Main) ಪರೀಕ್ಷೆ ಮುಂದೂಡಲಾಗಿದೆ.. ಹೌದು ಇಂಜಿನಿಯರಿಂಗ್ ಪ್ರವೇಶಕ್ಕೆ ನಡೆಸಲಾಗುವ ಜೆಇಇ (Main) ನಾಲ್ಕನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಆಗಸ್ಟ್ 26ರಿಂದ ಸೆಪ್ಟೆಂಬರ್ 02ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಜೆಇಇ ಪರೀಕ್ಷೆಯ ಮೊದಲ ಎರಡು ಹಂತ ಕಳೆದ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಮುಗಿದಿದೆ.
ಈ ಹಿಂದೆ ಜುಲೈ 27ರಿಂದ ಆಗಸ್ಟ್ 2ರವರೆಗೆ ಪರೀಕ್ಷೆ ನಡೆಸಲು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಕೊರೋನಾ ಕಾರಣಗಳಿಗಾಗಿ ಮತ್ತೆ ಪರೀಕ್ಷೆಯನ್ನು ಮುಂದೂಡಲಾಗಿದೆ. ನಾಲ್ಕನೆ ಆವೃತ್ತಿಯ ಜೆಇಇ ಮೇನ್ ಪರೀಕ್ಷೆ ಬರೆಯಲು ಇದಾಗಲೇ 7.32 ಲಕ್ಷ ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ವಿದ್ಯಾರ್ಥಿಗಳ ಮನವಿಯನ್ನು ಮುಂದಿಟ್ಟುಕೊಂಡು ಜೆಇಇ ಮೂರನೇ ಹಾಗೂ 4ನೇ ಎಡಿಷನ್ ನಡುವೆ ಒಂದು ತಿಂಗಳ ಅಂತರ ಕಾಪಾಡಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಲಾಗಿದ್ದು, ಪರೀಕ್ಷೆ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಪರೀಕ್ಷೆ ಸಮಯ ಕೊರೊನಾ ನಿಯಮಗಳ ಪಾಲನೆಗೆ ಪರೀಕ್ಷೆ ನಡೆಯುವ ನಗರಗಳ ಸಂಖ್ಯೆಯನ್ನು 232ರಿಂದ 334ಕ್ಕೆ ಏರಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು 660ರಿಂದ 828ಕ್ಕೆ ಏರಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.