ಗೊಂದಲ ಬಗೆಹರಿದಿದೆ : ‘ಜೊತೆ ಜೊತೆಯಲಿ’ ಮುಗಿಯುವ ತನಕ ಅನು ಪಾತ್ರವನ್ನು ನಾನೇ ಮಾಡುತ್ತೇನೆ – ಮೇಘಾ ಶೆಟ್ಟಿ
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಜೊತೆಜೊತೆಯಲಿ ಧಾರಾವಾಹಿಯ ಮೂಲಕ ಅನು ಸಿರಿಮನೆಯಾಗಿಯೇ ಖ್ಯಾತಿ ಗಳಿಸಿರುವ ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾರಂಗದಲ್ಲೂ ನೆಲೆಯೂರುವ ಪ್ರಯತ್ನದಲ್ಲಿದ್ದಾರೆ.. ಈಗಾಗಲೇ ಗೋಲ್ಡನ್ ಸ್ಟಾರ್ ಜೊತೆಗೆ ತ್ರಿಬಲ್ ರೈಡರ್ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.. ಅನಿರುದ್ಧ ಹಾಗೂ ಅನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಜೊತೆಜೊತೆ ಧಾರಾವಹಿ ಕನ್ನಡ ಕಿರುತೆರೆ ವೀಕ್ಷಕರ ಫೇವರೇಟ್ ದಾರಾವಾಹಿ ಫೇವರೇಟ್ ಜೋಡಿಯಾಗಿದೆ.. ಆದ್ರೆ ಇತ್ತೀಚೆಗೆ ನಟಿ ಮೇಘಾ ಅನು ಪಾತ್ರಕ್ಕೆ ಗುಡ್ ಬೈ ಹೇಳ್ತಿದ್ದು ದಾರಾವಾಹಿಯಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಚರ್ಚೆಯಾಗ್ತಿದೆ.. ಅಭಿಮಾನಿಗಳಿಗೂ ಇದ್ರುಇಂದ ಶಾಕ್ ಆಗಿತ್ತು.
ಆದ್ರೆ ಈಗ ಮೇಘಾ ಶೆಟ್ಟಿ ಈ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ನಾಲ್ಕೈದು ದಿನಗಳಿಂದ ಹರಿದಾಡಿತ್ತು. ಕುಟುಂಬ ಎಂದಾಗ ಗೊಂದಲ ಸಹಜವಾಗಿರುತ್ತದೆ. ಈಗ ಗೊಂದಲ ಬಗೆಹರಿದಿದೆ. ಜೊತೆ ಜೊತೆಯಲಿ ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ. ಈ ಗೊಂದಲದಿಂದ ವೀಕ್ಷಕರಲ್ಲಿ ಆತಂಕ ಉಂಟಾಗಿತ್ತು. ಈ ಬಗ್ಗೆ ಎಲ್ಲ ವೀಕ್ಷಕರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಈ ರೀತಿ ಆಗಲ್ಲ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
https://www.instagram.com/tv/CRVyGJQJ34X/?utm_source=ig_web_copy_link
ಮುಂದೆ ಈ ರೀತಿ ಸುದ್ದಿ ಕೇಳಿ ಬಂದರೆ ಅದಕ್ಕೆ ಗಮನಕೊಡಬೇಡಿ. ಮುಂದೆಯೂ ಇದೇ ರೀತಿ ಬೆಂಬಲಕೊಡಿ. ಜೊತೆ ಜೊತೆಯಲಿ ಧಾರಾವಾಹಿಯಿಂದ ನಾನು ಸಾಕಷ್ಟು ಪಡೆದುಕೊಂಡಿದ್ದೇನೆ. ಅದಕ್ಕೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ವಿಶ್ವಾಸ ಹೀಗೆ ಇರಲಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ. ಒಟ್ಟಾರೆ ಗೊಂದಲಗಳಿಗೆ ತೆರೆ ಎಳೆದ ಮೇಘಾ ಧಾರಾವಾಹಿಯಲ್ಲಿ ಮುಂದುವರಿಯುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ದರ್ಶನ್ ಒಮ್ಮೆ ನನ್ನ ಕೆಟ್ಟದಾಗಿ ಬೈದ್ರು : ಹಾರ್ಸ್ ರೈಡರ್ ಸಂತೋಷ್