ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ PUC
ಬೆಂಗಳೂರು : ಇದೇ ತಿಂಗಳ 20 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ತಿಳಿಸಿದ್ದಾರೆ.
ಫಲಿತಾಂಶ ಪ್ರಕಟಿಸಲು ಪಿಯುಸಿ ಬೋರ್ಡ್ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿರುವ ಅವರು, ಜುಲೈ 20 ರಂದು ಇಲಾಖೆಯ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ವಿದ್ಯಾರ್ಥಿಗಳು ಫಲಿತಾಂಶ ನೋಡಲು ನೋಂದಣಿ ಸಂಖ್ಯೆ ಪಡೆದಯಕೊಳ್ಳಬೇಕು. ಅದು ಇಲಾಖೆ ವೆವ್ ಸೈಟ್ ನಲ್ಲಿ ಲಭ್ಯವಿರಲಿದೆ.
ಇಲಾಖೆ ವೆಬ್ ಸೈಟ್ ನಲ್ಲಿ “Know my registration number” ಲಿಂಕ್ ನೀಡಿ ಆ ಲಿಂಕ್ ಮೂಲಕ ಪ್ರತಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಪಡೆಯಬಹುದು.
ಇಂದಿನಿಂದ ಈ ಲಿಂಕ್ ಓಪನ್ ಆಗಲಿದೆ. ವಿದ್ಯಾರ್ಥಿಗಳ ಇಮೇಲ್ ಮತ್ತು ಮೊಬೈಲ್ ಗೆ ಪಿಯುಸಿ ಬೋರ್ಡ್ ಲಿಂಕ್ ಕಳಿಸಿ ಕೊಡಲಿದೆ.