ಟಿ-ಟ್ವೆಂಟಿ ವಿಶ್ವಕಪ್ – ಸೂಪರ್ -12ರ ಲೀಗ್ ಹಂತದಲ್ಲೇ ಭಾರತ -ಪಾಕಿಸ್ತಾನ ಹೋರಾಟ..!
2021ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಹಂತದಲ್ಲೇ ಮುಖಾಮುಖಿಯಾಗಲಿವೆ.
ವಿಶ್ವ ಕ್ರಿಕೆಟ್ ನ ಬದ್ಧ ವೈರಿಗಳ ನಡುವಿನ ರೋಚಕ ಹೋರಾಟಕ್ಕೆ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಮತ್ತೊಂದು ವೇದಿಕೆಯಾಗಲಿದೆ.
ಐಸಿಸಿ ಆಯೋಜನೆ ಮಾಡುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಯಾವತ್ತೂ ಸೋತಿಲ್ಲ. ಹೀಗಾಗಿ ಈ ಬಾರಿಯ ವಿಶ್ವಕಪ್ ನಲ್ಲಿ ಇಂಡೋ ಪಾಕ್ ನಡುವಿನ ಕದನ ಟೂರ್ನಿಗೆ ಹೆಚ್ಚು ರಂಗುತರಲಿದೆ.
ಕೋವಿಡ್ ಆತಂಕದಿಂದ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಯುಎಇ ನಲ್ಲಿ ನಡೆಯಲಿದೆ. ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿದೆ.
ಬಿ ಬಣದಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫಘಾನಿಸ್ತಾನ ಪೈಪೋಟಿ ನಡೆಸಲಿವೆ. ಹಾಗೇ ಇನ್ನೇರಡು ತಂಡಗಳು ಅರ್ಹತಾ ಸುತ್ತಿನಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿವೆ. ಅರ್ಹತಾ ಸುತ್ತಿನ ಎ ಬಣದ ರನ್ನರ್ ಅಪ್ ಮತ್ತು ಬಿ ಬಣದ ವಿನ್ನರ್ ತಂಡಗಳು ಪ್ರಧಾನ ಸುತ್ತಿಗೆ ಎಂಟ್ರಿಯಾಗಲಿವೆ.
ಇನ್ನು ಬಿ ಬಣದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡಿಸ್ ತಂಡಗಳಿವೆ. ಇನ್ನೇರಡು ತಂಡಗಳು ಅರ್ಹತಾ ಸುತ್ತಿನಿಂದ ಎಂಟ್ರಿಯಾಗಲಿವೆ. ಇಲ್ಲೂ ಕೂಡ ಅರ್ಹತಾ ಸುತ್ತಿನ ಎ ಬಣದ ಅಗ್ರ ತಂಡ ಮತ್ತು ಬಿ ಬಣದ ಎರಡನೇ ತಂಡ ಸೂಪರ್ -12ರಲ್ಲಿ ಸ್ಥಾನ ಪಡೆದುಕೊಳ್ಳಲಿವೆ.
ಒಟ್ಟಿನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೋರಾಟ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ.