ದೊಡ್ಮನೆ ಮುಂದೆ ನಾವು ಹುಲ್ಲಿಗೆ ಸಮ : ಪ್ರಾಪರ್ಟಿ ಬಗ್ಗೆ ದಾಸ ಸ್ಪಷ್ಟನೆ
ಬೆಂಗಳೂರು : ನಮ್ಮಿಬ್ಬರ ಮಧ್ಯೆ ದೊಡ್ಮನೆ ಆಸ್ತಿ ವಿಚಾರ ಬಂದಿದ್ದು ನಿಜ. ಆ ಆಸ್ತಿ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರದ್ದು. ಅದನ್ನ ದರ್ಶನ್ ಕೇಳಿದ್ದರು. ಅದು ದೊಡ್ಡ ಮನೆಯವರ ಆಸ್ತಿ, ಹಾಗಾಗಿ ನಾನು ಅದನ್ನು ಕೊಡೊದಿಲ್ಲ ಎಂದು ಹೇಳಿದ್ದೆ. ಅಲ್ಲಿಗೆ ದರ್ಶನ್ ಸುಮ್ಮನಾಗಿದ್ದರು ಎಂಬ ನಿರ್ಮಾಪಕ ಉಮಾಪತಿ ಹೇಳಿಕೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬೆಳೆದಿದ್ದೇ, ನನ್ನ ವೃತ್ತಿ ಜೀವನವನ್ನು ಆರಂಭಿಸಿದ್ದೇ ದೊಡ್ಮನೆಯಿಂದ. 175 ರೂಪಾಯಿಯಿಂದ ವೃತ್ತಿ ಜೀವನವನ್ನು ಆರಂಭಿಸಿದ್ದು. ನಮ್ಮ ತಂದೆ ಕೂಡ ದೊಡ್ಮನೆ ಕುಟುಂಬದಿಂದಲೇ ಬೆಳೆದಿರೋದು. ಇಂತಹ ಫ್ಯಾಮಿಲಿಯ ಪ್ರಾಪರ್ಟಿ ಬಗ್ಗೆ ನಾವು ಕಣ್ಣು ಹಾಕೋದಾ..? ದೊಡ್ಮನೆ ಮುಂದೆ ನಾವು ಹುಲ್ಲಷ್ಟೆ.. ನೂರು ವರ್ಷ ಆದ್ರೂ ದೊಡ್ಮನೆ ದೊಡ್ಮನೆಯೇ. ನಮಗೆ ಜೀವನ ಕೊಟ್ಟಿದ್ದೇ ದೊಡ್ಮನೆ ಕುಟುಂಬವಾಗಿದೆ ಎಂದು ದೊಡ್ಮನೆ ಮೇಲೆ ಅಭಿಮಾನ ಮೆರೆದರು.

ಮುಂದುವರೆದು ಉಮಾಪತಿ ವಿರುದ್ಧ ಕಿಡಿಕಾರಿದ ಅವರು, 2016ರಿಂದಲೇ ನಿರ್ಮಾಪಕ ಉಮಾಪತಿ ಪರಿಚಯ. ಇಂದು ಅಷ್ಟೇ ಅವರಿಗೆ ಕಾಲ್ ಮಾಡಿಲ್ಲ. ನನಗೆ ಇದೇ ನಿರ್ಮಾಪಕ ಉಮಾಪತಿ ಹೇಳಿರುವ ಪ್ರಾಪರ್ಟಿಯಿಂದಲೇ ನನಗೆ ಬಾಡಿಗೆ ಕೊಡ್ತಾ ಇದ್ದರು. ಆದ್ರೇ ಇದೀಗ ನಟ ದರ್ಶನ್ ದೊಡ್ಮನೆ ಪ್ರಾಪರ್ಟಿ ಮೇಲೆ ಕಣ್ಣು ಹಾಕಿದ್ದಾರೆ ಅಂತಿದ್ದಾರೆ. ನಾನು ಬೀಡ್ತೀನಾ ಅಂತ ಹೇಳಿದ್ದಾರೆ. ಆದ್ರೇ ಆ ಪ್ರಾಪರ್ಟಿಯಿಂದಲೇ ನನಗೆ ಬಾಡಿಗೆ ಕೊಡ್ತಾ ಇದ್ದರು ಅವರನ್ನೇ ಕೇಳಿ. ಉಮಾಪತಿಯೇ 25 ಕೋಟಿ ರೂಪಾಯಿ ವಂಚನೆ ಪ್ರಕರಣವನ್ನು ಡೈವರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.








