ದರ್ಶನ್ ಹಲ್ಲೆ ಪ್ರಕರಣ : ಹಲ್ಲೆಗೊಳಗಾದವನಿಗೆ ಸಹಾಯ ಮಾಡಿದ್ರೆ ದರ್ಶನ್ ದೊಡ್ಡವರಾಗ್ತಿದ್ದರು – ಇಂದ್ರಜಿತ್
ಬೆಂಗಳೂರು: ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..
ಈ ನಡುವೆ ನಿರ್ಮಾಪಕ ದೊಡ್ಮನೆ ಪ್ರಾಪರ್ಟಿ ವಿಚಾರವಾಗಿ ಮಾತನಾಡಿದ್ದು, ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದ್ರೆ ಈ ಪ್ರಾಪರ್ಟಿ ವಿಚಾರವಾಗಿ ನನಗೆ ಏನೂ ಗೊತ್ತಿಲ್ಲ. ಒಬ್ಬ ಏಟು ತಿಂದಿದ್ದಾನೆ ಅವನು ನೋವಿನಲ್ಲಿ ಇದ್ದಾನೆ. ಅವನ ಬಳಿ ಕ್ಷಮೆ ಕೇಳಿದರೆ ದರ್ಶನ್ ದೊಡ್ಡವರಾಗುತ್ತಿದ್ದರು. ಒಬ್ಬ ಸಾಮಾನ್ಯನಾದವನಿಗೆ ಹೊಡೆದು ನಾನು ಕ್ಷಮೆ ಕೇಳಲ್ಲ ಎನ್ನುತ್ತಿದ್ದಾರೆ. ಆ ವ್ಯಕ್ತಿ ಜೊತೆಗೆ ಕ್ಷಮೆ ಕೇಳಿ, ಆತನಿಗೆ ಸಹಾಯ ಮಾಡಬೇಕು ಎಂದು ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ಅಲ್ಲದೇ ದರ್ಶನ್ ಮಾತನಾಡಿರುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಈ ರೀತಿ ಭಾಷೆಗಳನ್ನು ಸಾಕಷ್ಟು ಬಾರಿ ನಾನು ಕೇಳಿದ್ದೇನೆ. ಒಂದು ಸಂಸ್ಕೃತಿ, ಸಂಸ್ಕಾರ ಇರುವವರು ಈ ರೀತಿ ಮಾತನಾಡುವುದಿಲ್ಲ. 25 ಕೋಟಿ ಹಗರಣದಲ್ಲಿ ಬಂದಂತಹ ಅರುಣಾ ಕುಮಾರಿಯನ್ನು ಯಾಕೆ ದರ್ಶನ್ ಅವರು ಮನೆಗೆ ಕರೆಸಿಕೊಂಡರು, ನಿಮಗೆ ಗೊತ್ತೆ ಇಲ್ಲ ಅಂದ್ರಲ್ಲ. ಯಾಕೆ ಕರೆಸಿಕೊಂಡಿದ್ದು, ಯಾವುದೇ ಒಬ್ಬ ನಟನ ಬಾಯಲ್ಲಿ ತಲೆ ಕತ್ತರಿಸುತ್ತೇನೆ. ತಲೆ ತೆಗಿತೀನಿ ಎನ್ನುವ ಮಾತು ಬರಬಾರದು ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಹೋಟೆಲಿನಲ್ಲಿ ನೀವು ಬಡವ ಸಪ್ಲೇಯರ್ ಗೆ ಹೊಡೆದ್ರೋ ಇಲ್ಲವೋ, ಅಂದು ನೀವು ಯಾರ ಜೊತೆಗಿದ್ರಿ, 25 ಕೋಟಿ ಡೀಲ್ ವಿಚಾರ ಸಂಬಂಧ ನೀವು ಅರುಣಾ ಕುಮಾರಿಯನ್ನು ಯಾಕೆ ತೋಟಕ್ಕೆ ಕರೆದ್ರಿ, ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದಿದ್ದಾರೆ.