ಯಾವ ರಾಜ್ಯದಲ್ಲೂ ನಮ್ಮಂತಹ ಸಿಎಂ ಇಲ್ಲ : ಸೋಮಶೇಖರ್ ರೆಡ್ಡಿ
ಬಳ್ಳಾರಿ : ಯಾವ ರಾಜ್ಯದಲ್ಲೂ ನಮ್ಮಂತಹ ಸಿಎಂ ಇಲ್ಲ, ಅವರನ್ನ ಭೇಟಿ ಮಾಡೋದು ತುಂಬ ಸುಲಭ. ಭೇಟಿ ಮಾಡಿದಾಗ ಅಭಿವೃದ್ಧಿ ವಿಚಾರ ಮಾತ್ರ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ.
ಸಿಎಂ ದೆಹಲಿ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆ ಮತ್ತೆ ಸಿಎಂ ಬದಲಾವಣೆ ಚರ್ಚೆ ಶುರುವಾಗಿದ್ದು, ಶಾಸಕ ಸೋಮಶೇಖರ್ ರೆಡ್ಡಿ ಬಿಎಸ್ ವೈ ಪರ ಬ್ಯಾಟ್ ಬೀಸಿದ್ದಾರೆ. ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕಷ್ಟಪಟ್ಟು ದುಡಿದು, ಪಕ್ಷವನ್ನು ಕಟ್ಟಿದ್ದಾರೆ. ಅವರನ್ನು ಮುಂದುವರಿಸಿದರೆ ತೊಂದರೆ ಏನು? ಇನ್ನೂ 2 ವರ್ಷ ಅವರೇ ಇದ್ರೆ ಉತ್ತಮ ಆಡಳಿತ ಕೊಡೋಕೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಯಾವ ರಾಜ್ಯದಲ್ಲೂ ನಮ್ಮಂತಹ ಸಿಎಂ ಇಲ್ಲ, ಅವರನ್ನ ಭೇಟಿ ಮಾಡೋದು ತುಂಬ ಸುಲಭ. ಭೇಟಿ ಮಾಡಿದಾಗ ಅಭಿವೃದ್ಧಿ ವಿಚಾರ ಮಾತ್ರ ಮಾತನಾಡುತ್ತಾರೆ. ಅವರ ಮನೆಗೆ ಹೋದ ಶಾಸಕರಿಗೆ ಊಟ, ತಿಂಡಿ ಕೊಟ್ಟು ಜೊತೆಯಲ್ಲೇ ಕುಳಿತು ಮಾತಾಡ್ತಾರೆ. ಈ ರೀತಿಯ ಸಿಎಂ ನನಗೆ ಬೇರೆಲ್ಲೂ ಸಿಗಲ್ಲ ಎಂದಿದ್ದಾರೆ.









