ADVERTISEMENT
Saturday, September 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇನ್ನುಮುಂದೆ ಬೆಳೆ ವಿಮೆಗೂ ನಾಮಿನಿ ಮಾಡಿಸಿಕೊಳ್ಳಬೇಕು : ಬಿ.ಸಿ.ಪಾಟೀಲ್

Mahesh M Dhandu by Mahesh M Dhandu
July 20, 2021
in Newsbeat, State, ರಾಜ್ಯ
BC Patil
Share on FacebookShare on TwitterShare on WhatsappShare on Telegram

ಇನ್ನುಮುಂದೆ ಬೆಳೆ ವಿಮೆಗೂ ನಾಮಿನಿ ಮಾಡಿಸಿಕೊಳ್ಳಬೇಕು : ಬಿ.ಸಿ.ಪಾಟೀಲ್

ಬೆಂಗಳೂರು : ರೈತರಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಬೆಳೆ‌ ವಿಮೆ ಮಾಡಿಸಿಕೊಳ್ಳುವ ವಿಮಾ‌ಕಂಪೆನಿಗಳು ಇನ್ನುಮುಂದೆ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮೆ ಮಾಡಿಸುವ ರೈತನ ಜೊತೆ ಸಂಬಂಧಿಸಿದ ಕುಟುಂಬದ ನಾಮಿನಿಯನ್ನು ಸಹ ಮಾಡಿಸಿಕೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಮಾಕಂಪೆನಿಗಳಿಗೆ ಸೂಚನೆ ನೀಡಿದ್ದಾರೆ.

Related posts

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

September 19, 2026
ಚಿತ್ರರಂಗಕ್ಕೆ ಹಿರಿಯ ನಟ ಅನಂತ್ ನಾಗ್ ಗುಡ್‌ಬೈ: ಇನ್ನು ನಟಿಸಲು ಆಸಕ್ತಿಯಿಲ್ಲ ಎಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ

ಚಿತ್ರರಂಗಕ್ಕೆ ಹಿರಿಯ ನಟ ಅನಂತ್ ನಾಗ್ ಗುಡ್‌ಬೈ: ಇನ್ನು ನಟಿಸಲು ಆಸಕ್ತಿಯಿಲ್ಲ ಎಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ

September 19, 2026

ಮಂಗಳವಾರ ವಿಕಾಸಸೌಧದ ಕಚೇರಿಯಲ್ಲಿ ಸಚಿವರು ಬೆಳೆ ವಿಮೆ ಸಂಬಂಧ ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಸಿದರು.
ಇಷ್ಟುದಿನಗಳ ಕಾಲ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮಾ ಕಂಪೆನಿಗಳು ರೈತರಿಂದ ಬೆಳೆ ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಪರಿಗಣಿಸುತ್ತಿರಲಿಲ್ಲ.ಇದರಿಂದ ವಿಮಾದಾರ ರೈತ ಮೃತಪಟ್ಟಲ್ಲಿ ವಿಮೆ ಕಂತು ಪಡೆಯಲು ತೊಂದರೆಯಾಗುತ್ತಿತ್ತು.ರೈತರ ಅನುಕೂಲಕ್ಕಾಗಿ ಇನ್ನುಮುಂದೆ ವಿಮಾಕಂಪೆನಿಗಳು ಕಡ್ಡಾಯವಾಗಿ ರೈತರಿಂದ ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.ಅಲ್ಲದೇ ಫಸಲ್ ಬೀಮಾ ಯೋಜನೆ ಮಾಡಿಕೊಳ್ಳುವ ವಿಮಾಕಂಪೆನಿಗಳು ಕೃಷಿ ಇಲಾಖೆಯಲ್ಲಿ ಕಚೇರಿ ಮಾಡಿಕೊಳ್ಳದೇ ಈ ಹಿಂದೆ ಸೂಚಿಸಿದಂತೆ ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಕಚೇರಿ ತೆರೆಯಬೇಕು.ಅಲ್ಲದೇ ಕಚೇರಿ ತೆರೆದ ಲೊಕೇಷನ್ ಜಿಪಿಎಸ್ ಲಿಂಕ್ ಅನ್ನು ಕೃಷಿ ಇಲಾಖೆಗೆ ನೀಡಬೇಕೆಂದರು.

ರೈತರು ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟನ್ನೇ ಆಧಾರ್ ಕಾರ್ಡ್‌ಗೆ ಜೋಡಿಸಿ ಆಧಾರ್‌ಕಾರ್ಡಿನಲ್ಲಿರುವ ಚಾಲಿತ ಬ್ಯಾಂಕ್ ಅಕೌಂಟ್ ಅನ್ನೇ ಬೆಳೆವಿಮೆಗೆ ದಾಖಲಿಸಬೇಕು.ಕೆಲವೆಡೆ ಬಹುತೇಕ ರೈತರ ಆಧಾರ್ ಕಾರ್ಡ್ ಬೆಳೆವಿಮೆಗೆ ಜೋಡಣೆಯಾದರೂ ಕೂಡ ಆಧಾರ್‌ಕಾರ್ಡ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿರದೇ ಇವೆ.ಹೀಗೆ ಚಾಲ್ತಿಯಲ್ಲಿರದ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ಗೆ ಜೋಡಿಸಿರುವುದು ಕಂಡುಬಂದಿದೆ.ಇದರಿಂದ ಬಹುತೇಕ ಕಡೆ ಬೆಳೆವಿಮೆ ಪಡೆಯಲು ರೈತರಿಗೆ ತೊಂದರೆಯುಂಟಾಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.ರೈತರು ಎಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ಕೂಡ ಆಧಾರ್ ಕಾರ್ಡಿಗೆ ಜೋಡಿಸಿ ಬೆಳೆವಿಮೆಗೆ ನಮೂದಿಸಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಬೇಕು.ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನೇ ರೈತರು ಬೆಳೆವಿಮೆಗೆ ನಮೂದಿಸಬೇಕು.ಕೆಲವೆಡೆ ಆಧಾರ್ ಕಾರ್ಡನ್ನು ಕುಟುಂಬದ ಸದಸ್ಯರು ಒಟ್ಟೊಟ್ಟಿಗೆ ಮಾಡಿಸುವಾಗ ಕೆಲವೆಡೆ ಬೆರಳಚ್ಚು ತಪ್ಪಾಗಿ ನಮೂದಾಗಿರುವ ತೊಂದರೆಯೂ ಸಹ ಆಧಾರ್‌ಕಾರ್ಡಿನಲ್ಲಿ ಕಂಡುಬಂದಿದೆ.ಹೀಗಾಗಿ
ಆಧಾರ್ ಕಾರ್ಡಿನಲ್ಲಿರುವ ತೊಂದರೆಗಳನ್ನು ರೈತರು ಕೂಡಲೇ ಸರಿಪಡಿಸಿಕೊಳ್ಳಬೇಕು.ಬೆಳೆವಿಮೆ ಬಗ್ಗೆ ಎಡಿಎ,ಜೆಡಿಎಗಳು ಸಹ ಸರಿಯಾಗಿ ಮಾಹಿತಿ ಪಡೆದು ತಮ್ಕನ್ನು ಸಂಪರ್ಕಿಸುವ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಬಿ.ಸಿ.ಪಾಟೀಲ್ ಸಭೆಯಲ್ಲಿ ತಿಳಿಸಿದರು.

BC Patil
ದೇಶದಲ್ಲಿ ಕರ್ನಾಟಕವೇ ಅತಿಹೆಚ್ಚು ಬೆಳೆವಿಮೆಯನ್ನು ನೀಡಿದ ರಾಜ್ಯವಾಗಿದ್ದು, 2018-19ನೇ ಸಾಲಿನಲ್ಲಿ 12.80 ಲಕ್ಷ ರೈತ ಫಲಾನುಭವಿಗಳಿಗೆ ರೂ. 2595.86 ಕೋಟಿಗಳು ವಿಮಾ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ 12.73 ಲಕ್ಷ ರೈತ ಫಲಾನುಭವಿಗಳಿಗೆ ರೂ.2586.27 ಕೋಟಿಗಳ ಬೆಳೆ ವಿಮೆ ಪರಿಹಾರ ಮೊತ್ತ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿರುತ್ತದೆ. ಉಳಿದ 6215 ರೈತರಿಗೆ ರೂ.9.58 ಕೋಟಿಗಳು ಬಾಕಿ ಇರುತ್ತದೆ.

2019-20ನೇ ಸಾಲಿನಲ್ಲಿ 6.81 ಲಕ್ಷ ರೈತ ಫಲಾನುಭವಿಗಳಿಗೆ ರೂ. 771.81 ಕೋಟಿಗಳು ವಿಮಾ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ 6.44 ಲಕ್ಷ ರೈತ ಫಲಾನುಭವಿಗಳಿಗೆ ರೂ.736.37 ಕೋಟಿಗಳ ಬೆಳೆ ವಿಮೆ ಪರಿಹಾರ ಮೊತ್ತ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿರುತ್ತದೆ. ಉಳಿದ 37202 ರೈತರಿಗೆ ರೂ.35.43 ಕೋಟಿಗಳು ಬಾಕಿ ಇರುತ್ತದೆ.

ಸದರಿ ವರ್ಷಗಳ ಎಲ್ಲಾ ಹಂಗಾಮುಗಳಲ್ಲಿ ಬಾಕಿ ಇರುವ ವಿಮಾ ಮೊತ್ತವು ರೈತರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವ ಕಾರಣ/ Account reached maximum Credit limit set on account/ A/c Blocked or Frozen/ Inactive Aadhaar, NPCI failed cases ಕಾರಣಗಳಿಂದ ಬಾಕಿ ಇರುತ್ತದೆ.

ಈ ಕುರಿತು ರೈತರು ತಮ್ಮ ತಮ್ಮ ಬ್ಯಾಂಕುಗಳಲ್ಲಿ ಈ ಮೇಲಿನ ಸಮಸ್ಯೆಗಳನ್ನು ಸರಿಪಡಿಸಿ, ಸಂಬಂಧಪಟ್ಟ ವಿಮಾ ಸಂಸ್ಥೆಯವರಿಗೆ ತಿಳಿಸಿದ್ದಲ್ಲಿ ವಿಮಾ ಮೊತ್ತ ಪರಿಹಾರ ವಿತರಿಸಲಾಗುವುದು ಎಂದು ಅಧಿಕಾರಿಗಳಿಂದ ಸಭೆಯಲ್ಲಿ ವಿವರಿಸಲಾಯಿತು.

ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು 2019 ರ ಹಂಗಾಮಿನಲ್ಲಿ14.20 ಲಕ್ಷ ರೈತರು 12.15 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಈ ಹಂಗಾಮಿನಲ್ಲಿ ಬೆಳೆ ನೋಂದಣಿಯಾದ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ತಾಳೆ ಮಾಡಿ ಕ್ಲೈಮ್ ಇನಿಷಿಯೇಟ್ ಮಾಡಲಾಗಿರುತ್ತದೆ. ಒಟ್ಟು 5.65 ಲಕ್ಷ ರೈತ ಫಲಾನುಭವಿಗಳಿಗೆ 658.34 ಕೋಟಿ ರೂ.ಗಳ
ಕ್ಲೈಮ್ ಇನಿಷಿಯೇಟ್ ಮಾಡಲಾಗಿರುತ್ತದೆ. ವಿಮಾ ಸಂಸ್ಥೆಯವರು 4.62 ಲಕ್ಷ ಫಲಾನುಭವಿಗಳಿಗೆ ರೂ.558.88 ಕೋಟಿ ರೂ.ಗಳು ಬೆಳೆ ವಿಮಾ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಿರುತ್ತಾರೆ. ಬಾಕಿ ಉಳಿದ ರೂ.99.46 ಕೋಟಿಗಳು ಇತ್ಯರ್ಥಪಡಿಸುವ ಕಾರ್ಯ ಪ್ರಕ್ರಿಯೆಯಲ್ಲಿರುತ್ತದೆ.

2019-20 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 6.81 ಲಕ್ಷ ರೈತರು ನೊಂದಣಿಯಾಗಿರುತ್ತಾರೆ. ಸದರಿ ಹಂಗಾಮಿನಲ್ಲಿಯೂ ಸಹ ಬೆಳೆ ನೋಂದಣಿಯಾದ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ತಾಳೆ ಮಾಡುವ ಕಾರ್ಯ NIC ವತಿಯಿಂದ ಪ್ರಗತಿಯಲ್ಲಿದೆ.
2020 ರ ಮುಂಗಾರು ಹಂಗಾಮಿಗೆ ಒಟ್ಟು 11.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿರುತ್ತಾರೆ. ಒಟ್ಟು 12.81 ಲಕ್ಷ ಹೆಕ್ಟೇರ್ ಪ್ರದೇಶ ವಿಸ್ತೀರ್ಣವು ಬೆಳೆ ವಿಮೆಗೆ ಒಳಪಡಿಸಲಾಗಿದೆ.
ಪ್ರಗತಿಪರಿಶೀಲನಾ ಸಭೆಯಲ್ಲಿ ಕೃಷಿ ಆಯುಕ್ತ ಬಿಜೇಷ್ ಕುಮಾರ್ ದೀಕ್ಷಿತ್,ಕೃಷಿ ನಿರ್ದೇಶಕ ಶ್ರೀನಿವಾಸ್,ಅಧಿಕಾರಿಗಳಾದ ಆ್ಯಂಥೋನಿ ಇಮ್ಯಾನುಯಲ್,ಲಲಿತಾರೆಡ್ಡಿ,ಶಕೀಲ್ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

Tags: #Saaksha TVB C PatilbangalorekarnatakaMeeting
ShareTweetSendShare
Join us on:

Related Posts

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

by Shwetha
September 19, 2026
0

ಬೆಂಗಳೂರು: ರಾಜ್ಯದಲ್ಲಿ 'ವಂದೇ ಮಾತರಂ' ಗೀತೆಯ ಗಾಯನ ಈಗ ಸರ್ಕಾರ ಮತ್ತು ಹಿಂದುತ್ವನಿಷ್ಠ ನಾಯಕರ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ವಂದೇ ಮಾತರಂ ಗೀತೆಯ ಕೇವಲ...

ಚಿತ್ರರಂಗಕ್ಕೆ ಹಿರಿಯ ನಟ ಅನಂತ್ ನಾಗ್ ಗುಡ್‌ಬೈ: ಇನ್ನು ನಟಿಸಲು ಆಸಕ್ತಿಯಿಲ್ಲ ಎಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ

ಚಿತ್ರರಂಗಕ್ಕೆ ಹಿರಿಯ ನಟ ಅನಂತ್ ನಾಗ್ ಗುಡ್‌ಬೈ: ಇನ್ನು ನಟಿಸಲು ಆಸಕ್ತಿಯಿಲ್ಲ ಎಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ

by Shwetha
September 19, 2026
0

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ಅನಂತ್ ನಾಗ್ ಅವರು ಇನ್ನು ಮುಂದೆ ನಟನೆಯಲ್ಲಿ ಮುಂದುವರಿಯುವ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ. ಐದು ದಶಕಗಳಿಗೂ ಹೆಚ್ಚು...

ಕರಾವಳಿ ಜನರೇ ಗಮನಿಸಿ ನಿಮ್ಮ ಜಿಲ್ಲೆಯ ಹೆಸರು ಬದಲಾಗಲಿದೆ:ಕರಾವಳಿಯ ಅಸ್ಮಿತೆಗೆ ಹೊಸ ಮೆರುಗು ನೀಡಲು ಮುಂದಾದ CM ಡಿ ಕೆ ಶಿವಕುಮಾರ್

ಕರಾವಳಿ ಜನರೇ ಗಮನಿಸಿ ನಿಮ್ಮ ಜಿಲ್ಲೆಯ ಹೆಸರು ಬದಲಾಗಲಿದೆ:ಕರಾವಳಿಯ ಅಸ್ಮಿತೆಗೆ ಹೊಸ ಮೆರುಗು ನೀಡಲು ಮುಂದಾದ CM ಡಿ ಕೆ ಶಿವಕುಮಾರ್

by Shwetha
September 19, 2026
0

ಮಂಗಳೂರು: ಕರಾವಳಿಯ ಹೆಬ್ಬಾಗಿಲು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಈಗ ಮಹತ್ವದ ಬದಲಾವಣೆಯೊಂದು ಗಾಳಿ ಬೀಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಇನ್ಮುಂದೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ...

ಕರ್ನಾಟಕದಲ್ಲಿ ಹಾಲಿನ ದರ ಏರಿಕೆ ಸಾಧ್ಯತೆ: ಪ್ರತಿ ಲೀಟರ್‌ಗೆ ₹8 ಹೆಚ್ಚಳಕ್ಕೆ ನಾಲ್ಕು ಹಾಲು ಒಕ್ಕೂಟಗಳ ಪ್ರಸ್ತಾವನೆ

ಕರ್ನಾಟಕದಲ್ಲಿ ಹಾಲಿನ ದರ ಏರಿಕೆ ಸಾಧ್ಯತೆ: ಪ್ರತಿ ಲೀಟರ್‌ಗೆ ₹8 ಹೆಚ್ಚಳಕ್ಕೆ ನಾಲ್ಕು ಹಾಲು ಒಕ್ಕೂಟಗಳ ಪ್ರಸ್ತಾವನೆ

by Shwetha
September 19, 2026
0

ರಾಜ್ಯದ ಜನತೆಗೆ ಶೀಘ್ರದಲ್ಲೇ ಹಾಲಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಬೆಂಗಳೂರು ಹಾಲಿನ ಒಕ್ಕೂಟ (BAMUL), ಚಾಮರಾಜನಗರ ಹಾಲು ಉತ್ಪಾದಕರ ಒಕ್ಕೂಟ (ಚಮೂಲ್), ಮಂಡ್ಯ...

ಒಕ್ಕಲಿಗರು ಮತ ಹಾಕೋದು ದೇವೇಗೌಡರಿಗೇ ಹೊರತು ಡಿಕೆಶಿಗಲ್ಲ: ಕೆಎನ್ ರಾಜಣ್ಣ ನೀಡಿದ ಕಹಿಸತ್ಯಕ್ಕೆ ಬೆಚ್ಚಿಬಿದ್ದ ಕಾಂಗ್ರೆಸ್!-ದೇವೇಗೌಡರೇ ಒಕ್ಕಲಿಗರ ಸುಪ್ರೀಂ ಎಂದು ಸಾರಿದ ರಾಜಣ್ಣ

ಒಕ್ಕಲಿಗರು ಮತ ಹಾಕೋದು ದೇವೇಗೌಡರಿಗೇ ಹೊರತು ಡಿಕೆಶಿಗಲ್ಲ: ಕೆಎನ್ ರಾಜಣ್ಣ ನೀಡಿದ ಕಹಿಸತ್ಯಕ್ಕೆ ಬೆಚ್ಚಿಬಿದ್ದ ಕಾಂಗ್ರೆಸ್!-ದೇವೇಗೌಡರೇ ಒಕ್ಕಲಿಗರ ಸುಪ್ರೀಂ ಎಂದು ಸಾರಿದ ರಾಜಣ್ಣ

by Shwetha
September 19, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಬಾಂಬ್ ಸಿಡಿದಿದೆ. ಅದು ಕೂಡ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗಿನಿಂದಲೇ! ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಅಪ್ರತಿಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram