ಟೀಮ್ ಇಂಡಿಯಾದ ಪಂದ್ಯ ವೀಕ್ಷಣೆ ಮಾಡಿದ ಟೀಮ್ ಇಂಡಿಯಾ..!
ಇದು ಒಂಥರಾ ವಿಚಿತ್ರ ಅನ್ನಿಸುತ್ತೆ.. ಬಹುಶಃ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಇಂತಹುದ್ದೊಂದು ಘಟನೆ ನಡೆದಿರುವುದು ಇದೇ ಮೊದಲ ಬಾರಿ ಆಗಿರಲಿಕ್ಕೂ ಸಾಕು.
ಹೌದು, ಟೀಮ್ ಇಂಡಿಯಾದ ಪಂದ್ಯವನ್ನು ಟೀಮ್ ಇಂಡಿಯಾವೇ ವೀಕ್ಷಣೆ ಮಾಡಿದ್ದು. ಆದ್ರೆ ತಂಡದ ಹೆಸರು ಒಂದೇ.. ಆಟಗಾರರು ಬೇರೆ ಬೇರೆಯಾಗಿದ್ರೂ ಹಲವಾರು ಬಾರಿ ಜೊತೆಯಾಗಿಯೇ ಆಡಿದ್ದವರು.
ಒಂದು ಕಡೆ ಶಿಖರ್ ಧವನ್ ಸಾರಥ್ಯದ ಟೀಮ್ ಇಂಡಿಯಾ ಲಂಕಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಆಡುತ್ತಿತ್ತು. ಇನ್ನೊಂದು ಕಡೆ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಕೌಂಟಿ ಸೆಲೆಕ್ಟ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿತ್ತು.
ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನ ಕೆ.ಎಲ್. ರಾಹುಲ್ ಶತಕ ಸಿಡಿಸಿದ್ರು. ಇನ್ನೊಂದೆಡೆ ರವೀಂದ್ ಜಡೇಡಾ ಮತ್ತು ರೋಹಿತ್ ಶರ್ಮಾ ಅಮೋಘ ಆಟವನ್ನು ಆಡಿದ್ದರು.
ಇನ್ನೊಂದೆಡೆ ಶಿಖರ್ ಧವನ್ ಸಾರಥ್ಯದ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿತ್ತು. ಆಗ ತಂಡಕ್ಕೆ ಆಧಾರವಾಗಿ ನಿಂತಿದ್ದು ದೀಪಕ್ ಚಾಹರ್. ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಎಂಟನೇ ವಿಕೆಟ್ ಗೆ ಅಜೇಯ 84 ರನ್ ದಾಖಲಿಸಿ ತಂಡಕ್ಕೆ ರೋಚಕ ಜಯವನ್ನು ಒದಗಿಸಿದ್ರು.
ಈ ಪಂದ್ಯದ ರೋಚಕತೆಯನ್ನು ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಪಂದ್ಯದ ವೇಳೆ ವೀಕ್ಷಣೆ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಅಭ್ಯಾಸ ಪಂದ್ಯದ ವೇಳೆಯಲ್ಲಿ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾಆಟಗಾರರು ದೀಪಕ್ ಚಾಹರ್ ಅವರ ಬ್ಯಾಟಿಂಗ್ ಅನ್ನು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದರು. ಅಲ್ಲದೆ ಧವನ್ ಸಾರಥ್ಯದ ಟೀಮ್ ಇಂಡಿಯಾಗೆ ಚಿಯರ್ ಅಪ್ ಕೂಡ ಮಾಡುತ್ತಿದ್ದರು.
ಶಿಖರ್ ಧವನ್ ಸಾರಥ್ಯದ ಟೀಮ್ ಇಂಡಿಯಾದ ಆಟವನ್ನು ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಆಟಗಾರರು ವೀಕ್ಷಣೆ ಮಾಡಿರುವ ದೃಶ್ಯಗಳನ್ನು ಬಿಸಿಸಿಐ ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿಕೊಂಡಿದೆ.