ಯಡಿಯೂರಪ್ಪ ನಮ್ಮ ಸಮಾಜದ ಮುತ್ತು, ರತ್ನ ಇದ್ದಾಂಗೆ : ರುದ್ರಮುನಿ ಸ್ವಾಮೀಜಿ
ಬೆಂಗಳೂರು : ಯಡಿಯೂರಪ್ಪನವರು ನಮ್ಮ ಸಮಾಜದ ಘನತೆ ಮತ್ತು ಅಮೂಲ್ಯವಾದ ಮುತ್ತು, ರತ್ನ ಇದ್ದಾಂಗೆ. ಅವರನ್ನು ಕೆಳಗಿಳಿಸುವಂತಹ ಷಡ್ಯಂತ್ರವವನ್ನು ಸ್ವ ಪಕ್ಷದವರೇ ಮಾಡುತ್ತಿರುವುದು ನಮ್ಮ ಮಠಾಧೀಶರಿಗೆ ಬಹಳ ನೋವು ತಂದಿದೆ ಎಂದು ತಿಪಟೂರು ಮಠದ ಷಡಕ್ಷರಿ ರುದ್ರಮುನಿ ಸ್ವಾಮೀಜಿ ಬೇಸರ ಹೊರಹಾಕಿದ್ದಾರೆ.
ತಿಪಟೂರು ಮಠದ ಷಡಕ್ಷರಿ ರುದ್ರಮುನಿ ಸ್ವಾಮೀಜಿ ಇವತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡಿಯೂರಪ್ಪ.
ಅವರನ್ನು ಬದಲಾವಣೆ ಮಾಡುತ್ತಿರುವುದು ನಮಗೆಲ್ಲ ನೋವು ತಂದಿದೆ. ಬಿಎಸ್ ವೈ ಸಂಪೂರ್ಣವಾಗಿ ಅಧಿಕಾರ ಪೂರೈಸಬೇಕು. ಯಡಿಯೂರಪ್ಪನವರು ನಮ್ಮ ಸಮಾಜದ ಘನತೆ ಮತ್ತು ಅಮೂಲ್ಯವಾದ ಮುತ್ತು, ರತ್ನ ಇದ್ದಾಂಗೆ.
ಅವರನ್ನು ಕೆಳಗಿಳಿಸುವಂತಹ ಷಡ್ಯಂತ್ರವವನ್ನು ಸ್ವ ಪಕ್ಷದವರೇ ಮಾಡುತ್ತಿರುವುದು ನಮ್ಮ ಮಠಾಧೀಶರಿಗೆ ಬಹಳ ನೋವು ತಂದಿದೆ ಎಂದರು.
ಇನ್ನು ಸಿಎಂ ಸ್ಥಾನದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಕರ್ನಾಟಕದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತ ವೀರಶೈವ ಸಮಾಜ ಕೈಕಟ್ಟಿ ಕುಳಿತುಕೊಳ್ಳಲ್ಲ ಎಂದು ಎಚ್ಚರಿಸಿದ ಶ್ರೀಗಳು, ಪ್ರಶ್ನಾತೀತ ನಾಯಕ ಯಡಿಯೂರಪ್ಪನವರನ್ನು ಕೆಳಗಿಸಿಸುವ ಪ್ರಯತ್ನ ಮಾಡಿದ್ರೆ ರಾಜ್ಯದಲ್ಲಿ ಬಿಜೆಪಿ ಉಳಿಯಲ್ಲ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಹೈಕಮಾಂಡ್ ಗೆ ವಾರ್ನಿಂಗ್ ನೀಡಿದ್ದಾರೆ.