ವಿಪಕ್ಷಗಳ ಗದ್ದಲ | ಶುಕ್ರವಾರಕ್ಕೆ ಕಲಾಪ ಮುಂದೂಡಿಕೆ lok-sabha
ನವದೆಹಲಿ : ಲೋಕಸಭಾ ಅಧಿವೇಶನದ ವೇಳೆ ಕೃಷಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ ಕಾರಣ ನಾಳೆಗೆ ಅಧಿವೇಶನ ಮುಂದೂಡಲಾಗಿದೆ.
ಇಂದು ಅಧಿವೇಶನ ಆರಂಭವಾಗುತ್ತಿದ್ದಂತೆ ಪೆಗಾಸಸ್ ಬೇಹುಗಾರಿಕೆ ವಿವಾದ ಮತ್ತು ಮೂರು ಕೃಷಿ ಕಾಯ್ದೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ವಿಪಕ್ಷಗಳು ಘೋಷಣೆಗಳನ್ನು ಕೂಗಿದರು.
ಇದರಿಂದ ಕಲಾಪವನ್ನು ಪದೇ ಪದೇ ಮುಂದೂಡಿಕೆ ಮಾಡಲಾಯಿತು. ನಂತರ ಸಂಜೆ 4 ಗಂಟೆಗೆ ಮತ್ತೆ ಅಧಿವೇಶನ ಆರಂಭವಾಯಿತು. ಆಗಲೂ ವಿಪಕ್ಷಗಳು ಗದ್ದಲ ಎಬ್ಬಿಸಿದವು.
ಈ ವೇಳೆ ಅಧ್ಯಕ್ಷರಾಗಿದ್ದ ಭರ್ತುಹಾರಿ ಮಹತಾಬ್ ಅವರು ಪ್ರತಿಭಟನಾ ನಿರತ ಸದಸ್ಯರನ್ನು ತಮ್ಮ ಆಸನಗಳಿಗೆ ಹಿಂತಿರುಗುವಂತೆ ಕೇಳಿಕೊಂಡಾಗಲೂ ಸದಸ್ಯರು ಮಾತುಗಳನ್ನು ಕೇಳದೆ ಪ್ರತಿಭಟನೆ ಮುಂದುವರೆಸಿದ್ದರು.
ಈ ಹಿನ್ನಲೆಯಲ್ಲಿ ಲೋಕಸಭೆ ಅಧಿವೇಶನವನ್ನು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ.