ಬೆಂಗಳೂರು : ಅಮೇಜಾನ್, ನೆಟ್ ಫ್ಲಿಕ್ಸ್ ನಲ್ಲಿ ಸಿನಿಮಾ ನೋಡುವ ಕನ್ನಡಿಗರಿಗೊಂದು ಸಿಹಿ ಸುದ್ದಿ. ಕೇವಲ ಕನ್ನಡ ಸಿನಿಮಾಗಳಿಷ್ಟೇ ಸೀಮಿತವಾಗಿರೋ ಕರ್ನಾಟಕದ ಮೊಟ್ಟ ಮೊದಲ ಡಿಜಿಟಲ್ ಒ.ಟಿ.ಟಿ ಫ್ಲಾಟ್ ಫಾರ್ಮ್ ‘ನಮ್ಮ FLIX’ ಆಪ್ ಬಿಡುಗಡೆಯಾಗಿದೆ. ನಟ ಉಪೇಂದ್ರ ‘ನಮ್ಮ FLIX’ ಆಪನ್ನು ಬಿಡುಗಡೆ ಮಾಡಿದ್ದಾರೆ.
ಕನ್ನಡದ ಯುವಕರ ತಂಡವೊಂದು ಅವಿಟಾನ್ ಎಂಟರ್ ಟೈನ್ ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ ಹೊಸ ಆಪ್ ಅನ್ವೇಷಣೆ ಮಾಡಿದೆ. ಇದರಲ್ಲಿ ಬರೀ ಸಿನಿಮಾ ಮಾತ್ರವಲ್ಲದೆ ಶೀಘ್ರದಲ್ಲೇ ವೆಬ್ ಸೀರಿಸ್, ಸಂಗೀತ, ಸ್ಟಾರ್ ಗಳ ಮಾತುಕತೆ, ಫ್ಯಾನ್ ಕ್ಲಬ್ ಕೂಡ ಬರುತ್ತದೆಯಂತೆ. ಇಷ್ಟೆಲ್ಲಾ ಸಿಗುವ ‘ನಮ್ಮ FLIX’ ಆಪ್ ಗೆ ದಿನಕ್ಕೆ ಒಂದು ರೂಪಾಯಿ ಮಾತ್ರ. ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಬರುತ್ತವೆ.
ಗೂಗಲ್ ಫ್ಲೇ ಸ್ಟೋರ್ ನಲ್ಲಿ ನಮ್ಮ FLIX ಲಭ್ಯವಾಗಲಿದೆ. ಸದ್ಯಕ್ಕೆ ಎಲ್ಲಾ ಆಂಡ್ರಡ್ ಮೊಬೈಲ್ ಗಳಲ್ಲೂ ಆಪ್ ಲಭ್ಯವಾಗಲಿದೆ. ಶೀಘ್ರದಲ್ಲಿ AMAZON FIRE TV, JIO TV ಮತ್ತು iPhone ಗಳಲ್ಲೂ ಆಪ್ ಸಿಗಲಿದೆ..








