ಮತ್ತೆ ಮದಗಜ ಚಿತ್ರೀಕರಣ ಶುರು – ಶೂಟಿಂಗ್ ಸೆಟ್ ಗೆ ಮರಳಿದ ರೋರಿಂಗ್ ಸ್ಟಾರ್..!
ಕೊರೊನಾ 2ನೇ ಅಲೆ ತಗ್ಗುತ್ತಿದ್ದಂತೆ ಲಾಕ್ ಡೌನ್ ತೆರವುಗೊಳಿಸಲಾಗಿದೆ.. ಸಿನಿಮಾಗಳಿಗೂ 50 % ಸೀಟಿಂಗ್ ಗೆ ಅವಕಾಶ ಕೊಡಲಾಗಿದೆ.. ಈ ನಡುವೆ ಅರ್ಧಕ್ಕೆ ಶೂಟಿಂಗ್ ನಿಲ್ಲಿಸಿದ್ದ ಸಿನಿಮಾಗಳು ಮತ್ತೆ ಚಿತ್ರೀಕರಣಕ್ಕೆ ಮರಳುತ್ತಿವೆ.. ಇನ್ನೂ ಕೆಲ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ.. ಈ ನಡುವೆ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಬಹುನಿರೀಕ್ಷೆಯ ಮದಗಜ ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗಿದೆ.. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದ ಚಿತ್ರತಂಡ ಕೊನೆಯ ಹಂತದ ಕೆಲವು ದೃಶ್ಯಗಳು ಮಾತ್ರ ಬಾಕಿ ಉಳಿಸಿಕೊಂಡಿದ್ದರು. 
ಇದೀಗ, ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಅಂತಿಮ ಶೆಡ್ಯೂಲ್‌ಗೆ ಚಾಲನೆ ಕೊಟ್ಟಿದ್ದಾರೆ. ಜುಲೈ 22ರಿಂದ ‘ಮದಗಜ’ ಚಿತ್ರೀಕರಣ ಆರಂಭವಾಗಿದೆ. ಈ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ”ಮದಗಜ ನ ಕೊನೆ ಹಂತದ ಚಿತ್ರೀಕರಣ ಇಂದಿನಿಂದ ಪ್ರಾರಂಭ. ಪ್ರಯತ್ನ ನಂದು ಫಲ ನಿಂದು ದೇವರೇ” ಎಂದು ಫೋಟೋ ಹಂಚಿಕೊಂಡಿದ್ದಾರೆ. ರಾಬರ್ಟ್ ಸಿನಿಮಾ ಖ್ಯಾತಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರೇ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ತಾಯಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆಯಿಂದ 25 ಕೋಟಿ ಲೋನ್ ವಿಚಾರದಲ್ಲಿ ಉಮಾಪತಿ ಹೆಸರು ತಳುಕುಹಾಕಿಕೊಂಡಿತ್ತು. ಈ ವಿವಾದ ತಣ್ಣಗಾಗುತ್ತಿದ್ದಂತೆ ಮದಗಜ ಕೆಲಸ ಆರಂಭಿಸಿದ್ದಾರೆ.
ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ಕನ್ನಡ ಚಿತ್ರರಂಗಕ್ಕೆ 2 ದಶಕಗಳ ಬಳಿಕ ಮತ್ತೆ ಮದಗಜ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮದಗಜ ಸಿನಿಮಾ ರಿಲೀಸ್ ಆಗುತ್ತಿದೆ.







