RRR : ಜ್ಯೂ. NTR – ಕೋಮಾರಾಮ್ ಪಾತ್ರದಲ್ಲಿ ಮುಸ್ಲಿಂ ಧರಿಸಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಾರಣ ಏನು ಗೊತ್ತಾ..?
ರಾಜಮೌಳಿ ಸಾರಥ್ಯದ , ರಾಮ್ ಚರಣ್ – ಜ್ಯೂನಿಯರ್ NTR ನಾಯಕರಾಗಿ ಕಾಣಿಸಿಕೊಳ್ತಿರುವ ಬಹುನಿರೀಕ್ಷಿತ RRR ಸಿನಿಮಾದ ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳು ದಿನೇ ದಿನೇ ಬಹಿರಂಗವಾಗ್ತಿದೆ.. ಈ ಹಿಂದೆ ಜ್ಯೂ. NTR ಬರ್ತ್ ಡೇಗೆ ರಿಲೀಸ್ ಮಾಡಲಾಗಿದ್ದ NTR ( ಕೋಮಾರಾಮ್ ಭೀಮ್ ಪಾತ್ರ ) ಲುಕ್ ಟೀಸರ್ ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗಿತ್ತು.. NTR ಮುಸ್ಲಿಂ ಧರಿಸಿನಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು.. ಆದ್ರೆ ಈ ರೀತಿಯ ಧರಿಸಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾರಣ ಗೊತ್ತಿರಲಿಲ್ಲ.. ಇಷ್ಟೇ ಈ ಸಿನಿಮಾದ ಪೋಸ್ಟರ್ ಹಾಲಿವುಡ್ ಸಿನಿಮಾದ ಕಾಪಿ ಅಂತೆಲ್ಲಾ ಸೇರಿ ಸಾಕಷ್ಟು ಟ್ರೋಲ್ ಗಳನ್ನ ಮಾಡಲಾಗಿದೆ.. ಆದ್ರೂ ಸಿನಿಮಾತಂಡ ಇವ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.. ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಇದೀಗ ಸ್ವತಃ ಸಿನಿಮಾದ ಕಥೆಗಾರ ಕೆ ವಿ ವಿಜಯೇಂದ್ರೆ ಪ್ರಸಾದ್ ಕೋಮಾರಾಮ್ ಭೀಮ್ ಅವರ ಧರಿಸಿನ ಕುರಿತಾದ ಇಂಟರೆಸ್ಟಿಂಗ್ ವಿಚಾರವನ್ನ ತಿಳಿಸಿದ್ದಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು ಈ ಕಥೆಯಲ್ಲಿ ಕೋಮಾರಾಮ್ ತಮ್ಮನ್ನ ಹುಡುಕಾಡುತ್ತಿದ್ದ ನಿಜಾಮರನ್ನು ಹಾಗೂ ಪೊಲೀಸರನ್ನ ಎದುರಿಸಲಿದ್ದಾರೆ.. ಹೀಗಾಗಿ ಕೋಮಾರಾಮ್ ಅವರಲ್ಲಿ ಒಬ್ಬರಂತೆ ಬಿಂಬಿಸಿಕೊಳ್ಳಲು ಆ ರೀತಿ ವೇಷ ಧರಿಸಿದ್ದಾರೆ ಎಂದು ಸ್ಪಷ್ಟನೆ ನಿಡಿದ್ದಾರೆ.. ಇದೇ ವೇಳೆ ಅಭಿಮಾನಿಗಳು ಈ ಬಗ್ಗೆ ತಿಳಿಯದೇ ತಮ್ಮದೇ ಆ ಕಥೆಗಳನ್ನ ಥಿಯರಿಗಳನ್ನ ಸೃಷ್ಟಿಸಿಕೊಂಡು ಗೊಂದಲಕ್ಕೀಡಾಗಿದ್ದರು.. ಇದೀಗ ಎಲ್ಲವೂ ಕ್ಲಿಯರ್ ಆಗಿದೆ ಅಂದುಕೊಳ್ತೇನೆ ಎಂದಿದ್ದಾರೆ.
ಇನ್ನೂ ಇದೇ ವೇಳೆ ‘ಸಿನಿಮಾದಲ್ಲಿ ಜೂ.ಎನ್‌ಟಿಆರ್ ಪಾತ್ರದಾರಿಯು ನಿಜಾಮರಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತದೆ. ನಂತರ ಆ ಪಾತ್ರಕ್ಕೆ ಪೊಲೀಸರಿಂದಲೂ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆಗ ಆ ಪಾತ್ರ ತನ್ನ ಗುರುತು ಮರೆಮಾಚಲು ಮುಸ್ಲಿಂ ವ್ಯಕ್ತಿಯಾಗಿ ಬದಲಾಗುತ್ತದೆ ಎಂದಿದ್ದಾರೆ. ಇನ್ನೂ ‘ಯಾರಿಗೂ ನೋವಾಗದಂತೆ ಹಾಗೂ ಆ ಪಾತ್ರಗಳ, ವ್ಯಕ್ತಿಗಳ ಬಗೆಗಿನ ಗೌರವ ಹೆಚ್ಚಾಗುವ ರೀತಿಯಲ್ಲಿ ‘ಆರ್‌ಆರ್‌ಆರ್’ ಸಿನಿಮಾ ನಿರ್ಮಿಸಲಾಗಿದೆ. ಅಲ್ಲೂರಿ ಸೀತಾರಾಮ ರಾಜು ಪಾತ್ರ ಪೊಲೀಸ್ ವೇಷದಲ್ಲಿ ಕಾಣಿಸಿಕೊಂಡಿರುವುದಕ್ಕೆ ಕಾರಣವನ್ನೂ ಸಹ ಚಿತ್ರಮಂದಿರದಲ್ಲಿಯೇ ನೋಡಿ ಸಂತೋಷಪಡಬೇಕು’ ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.
RRR ಸಿನಿಮಾವು ತೆಲುಗು ರಾಜ್ಯಗಳ ಅಪ್ರಮಿತ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಜೀವನದ ಕುರಿತಾದ ಕತೆಯಾಗಿದೆ. ಸಿನಿಮಾದ ಕೆಲವು ಪೋಸ್ಟರ್‌ಗಳು ಹಾಗೂ ಮೇಕಿಂಗ್ ವಿಡಿಯೋ ಹಾಗೂ ಕ್ಯಾರೆಕ್ಟರ್ ಟೀಸರ್ ಈಗಾಗಲೇ ಬಿಡುಗಡೆ ಆಗಿವೆ. ಸಿನಿಮಾವು ಅಕ್ಟೋಬರ್ 13 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ, ಜೂ.ಎನ್‌ಟಿಆರ್, ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ನಟಿಸಿದ್ದಾರೆ.