ಕೊರೊನಾ ಸಾವಿನ ಲೆಕ್ಕವನ್ನ ನಿಖರವಾಗಿ ನೀಡಲಾಗಿದೆ – ಕೇಂದ್ರ ಸರ್ಕಾರ
ನವದೆಹಲಿ: ಕೊರೊನಾ ಸಾವಿನ ಲೆಕ್ಕವನ್ನು ಕೇಂದ್ರ ನಿಖರವಾಗಿ ನೀಡಿದ್ದೇವೆ.. ಯಾವುದೇ ಅಂಕಿ ಅಂಶಗಳನ್ನ ಮುಚ್ಚಿಟ್ಟಿಲ್ಲ ಎಂದು ಕೇಂದ್ರ ಸರ್ಕಾರವು ಆರೋಪಗಳನ್ನ ತಳ್ಳಿಹಾಕಿದೆ.. ಈ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದೆ. ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರು ಈ ಕುರಿತು ಉತ್ತರಿಸಿದ್ದು, ಕೋವಿಡ್-19 ಸಾವುಗಳನ್ನು ಮುಚ್ಚಿಡುವ ಆರೋಪಗಳನ್ನು ತಳ್ಳಿಹಾಕಿದರು. ಕೇಂದ್ರ ಸರ್ಕಾರ ರಾಜ್ಯಗಳು ಕಳುಹಿಸುವ ದತ್ತಾಂಶವನ್ನು ಸಂಗ್ರಹಿಸುತ್ತದೆ ಮತ್ತು ಪ್ರಕಟ ಮಾಡುತ್ತದೆ ಎಂದಿದ್ದಾರೆ.
ಭಾರತದಲ್ಲಿ ಕಾನೂನಾತ್ಮಕ ಮರಣ ನೋಂದಣಿ ವ್ಯವಸ್ಥೆಯನ್ನು ಹೊಂದಿದ್ದು, ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಕೆಲವು ಪ್ರಕರಣಗಳ ಪತ್ತೆಯಾಗಿಲ್ಲ.. ಆದ್ರೂ ಸಾವುಗಳನ್ನು ತಪ್ಪಿಸಿಕೊಳ್ಳುವುದು ಅಸಂಭವವಾಗಿದೆ. ಇದರಲ್ಲಿ ಮರಣ ದರವನ್ನು ಸಹ ನಾವು ನೋಡಬಹುದಾಗಿದ್ದು, 2020ರ ಡಿಸೆಂಬರ್ 31 ರ ವರೆಗೆ ಮರಣದರ ಶೇ.1.45 ಇತ್ತು, 2021ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅನಿರೀಕ್ಷಿತವಾಗಿ ಎರಡನೇ ಅಲೆ ಉತ್ತುಂಗಕ್ಕೆ ಏರಿಕೆಯಾಗಿದ್ದು, ಇದೀಗ ಮರಣ ದರ ಶೇ.1.34 ಇದೆ ಎಂದು ಸರ್ಕಾರ ಹೇಳಿದೆ.
ದೈನಂದಿನ ಹೊಸ ಪ್ರಕರಣಗಳು ಮತ್ತು ಮರಣಗಳು ವರದಿಯಾಗುತ್ತಿದ್ದು, ಜಿಲ್ಲೆಗಳು ಒಟ್ಟು ಪ್ರಕರಣಗಳು ಮತ್ತು ಮರಣಗಳ ಸಂಖ್ಯೆಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಿವೆ. ಇದು ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ರವಾನೆಯಾಗುತ್ತದೆ.
2020ರ ಮೇ ಗೂ ಮೊದಲೇ ವರದಿಯಾದ ಸಾವುಗಳು ಮತ್ತು ಗೊಂದಲ ತಪ್ಪಿಸಲು ಐಸಿಎಂಆರ್ ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳನ್ನು ಸೂಕ್ತ ರೀತಿಯಲ್ಲಿ ದಾಖಲಿಸಲು ಮಾರ್ಗಸೂಚಿ ಬಿಡುಗಡೆಮಾಡಿತ್ತು. ಎಲ್ಲಾ ಕೋವಿಡ್-19 ಮರಣಗಳನ್ನು ಸರಿಯಾಗಿ ದಾಖಲಿಸುವಂತೆ WHO ತನ್ನ ಐಸಿಡಿ-10 ಸಂಹಿತೆಯಡಿ ಮಾಡಿರುವ ಶಿಫಾರಸ್ಸಿನನ್ವಯ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಐಸಿಎಂಆರ್ ಹೊರಡಿಸಿರುವ ಮಾರ್ಗಸೂಚಿಯನ್ನು ಭಾರತ ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.