ಟಿಸಿಎಸ್ – 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧಾರ
ಭಾರತದ ಅತಿದೊಡ್ಡ ಐಟಿ ಸೇವಾ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಭವಿಷ್ಯದ ಹೂಡಿಕೆಗೆ ಮುಂದಾಗಿರುವ ಟಿಸಿಎಸ್ ಅಮೆರಿಕಾದ ಅರಿಝೋನಾ ರಾಜ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸಿದೆ.

ಯುಎಸ್ ರಾಜ್ಯವಾದ ಅರಿಝೋನಾದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಬಗ್ಗೆ ಮತ್ತು 2026 ರ ವೇಳೆಗೆ 300 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವ ಬಗ್ಗೆ ಐಟಿ ದೈತ್ಯ ತನ್ನ ಯೋಜನೆಗಳನ್ನು ಪ್ರಕಟಿಸಿದೆ
ಮುಂದಿನ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ತರಬೇತಿ ಮತ್ತು ಆನ್‌ಲೈನ್ ವಿಷಯವನ್ನು ಹೆಚ್ಚಿಸುವ ಮೂಲಕ ಟಿಸಿಎಸ್ ತನ್ನ ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಮತ್ತು ಅರಿಜೋನಾದ ಕಂಪ್ಯೂಟರ್ ಸೈನ್ಸ್ ಶಿಕ್ಷಣ ಕಾರ್ಯಕ್ರಮಗಳ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಟಿಸಿಎಸ್ ತಿಳಿಸಿದೆ.
ಅರಿಝೋನಾದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸುವ ಕುರಿತು, ಟಿಸಿಎಸ್‌ನ ಉತ್ತರ ಅಮೆರಿಕದ ಅಧ್ಯಕ್ಷ ಸೂರ್ಯ ಕಾಂತ್,ಅರಿಝೋನಾದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು, ಸ್ಥಳೀಯ ಪ್ರತಿಭೆಗಳನ್ನು ನೇಮಿಸಲು ಮತ್ತು ಇಲ್ಲಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡಲು ಸಂತೋಷವಾಗಿದೆ ಎಂದು ಹೇಳಿದ್ದಾರೆ
ಪ್ರಸ್ತುತ, ಟಿಸಿಎಸ್ ಅರಿಝೋನಾದಲ್ಲಿ 780 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೊಡಗಿಸಿಕೊಂಡಿದೆ.
ಮುಂಬೈ ಮೂಲದ ಐಟಿ ಸೇವೆಗಳ ದೈತ್ಯ ಯುಎಸ್ನಲ್ಲಿ ಕಳೆದ ಐದು ವರ್ಷಗಳಲ್ಲಿ 21,500 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದೆ ಮತ್ತು ಟಿಸಿಎಸ್ ರೆಗ್ಯುಲೇಟರಿ ಫೈಲಿಂಗ್ ಪ್ರಕಾರ 2022 ರ ವೇಳೆಗೆ ಹೆಚ್ಚುವರಿ 10,000 ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1414077810675703810?s=19
https://twitter.com/SaakshaTv/status/1414412325323513863?s=19
https://twitter.com/SaakshaTv/status/1414438195593420813?s=19
https://twitter.com/SaakshaTv/status/1414382278688575493?s=19
https://twitter.com/SaakshaTv/status/1414789775039533059?s=19
#TCS #HiringNews








