ಮಾಹಾ ಮಳೆಗೆ ಗೋವಾ–ಕರ್ನಾಟಕ ಗಡಿ ಪ್ರದೇಶದಲ್ಲಿ ಭೂಕುಸಿತ ..! ಸಂಚಾರ ಸ್ಥಗಿತ
ಭಾರಿ ಮಳೆಯಿಂದಾಗಿ ಗೋವಾ–ಕರ್ನಾಟಕ ಗಡಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಎರೆಡೂ ರಾಜ್ಯಗಳ ನಡುವೆ 2ನೇ ದಿನವೂ ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಇದೇ ಪ್ರದೇಶದಲ್ಲಿ ಒಂದು ಕಡೆ ರೈಲು ಹಳಿ ತಪ್ಪಿದೆ. ಹುಬ್ಬಳ್ಳಿ ವಿಭಾಗದ ದೂಧ್ ಸಾಗರ್ ಮತ್ತು ಸೊನಾಲಿಮ್, ಕಾರಂಜೋಲ್ ಮತ್ತು ದೂಧ್ ಸಾಗರ್ ಮಾರ್ಗದ ಗುಡ್ಡಗಾಡು ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಭೂ ಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ರತ್ನಾಗಿರಿ ಬಳಿಯ ವಶಿಷ್ಟಿ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ, ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಮಂಗಳೂರು ಜಂಕ್ಷನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ರೈಲಿನ ಮಾರ್ಗವನ್ನು ಬದಲಾಯಿಸಲಾಗಿತ್ತು. ಈ ರೈಲು ದೂಧ್‌ಸಾಗರ್–ಸೊನಾಲಿಮ್ ನಡುವೆ ಶುಕ್ರವಾರ ಮುಂಜಾನೆ ಹಳಿ ತಪ್ಪಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು.








