‘ಮಹಾ’ ಮಳೆಗೆ ಮೃತಪಟ್ಟವರ ಸಂಖ್ಯೆ 129ಕ್ಕೆ ಏರಿಕೆ – ಪ್ರವಾಹಕ್ಕೆ ತತ್ತರಿಸಿದ ಮಾಹಾರಾಷ್ಟ್ರ
ಮಹಾರಾಷ್ಟ್ರ : ನೆರೆಯ ಮಾಹಾರಾಷ್ಟ್ರದಲ್ಲಿ ಬಾರೀ ಮಳೆಯಾಗ್ತಾಯಿದ್ದು, ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಮಹಾರಾಷ್ಟ್ರಕ್ಕೆ ಒಂದು ರೀತಿ ಮಳೆ ಹಾಗೂ ಕೊರೊನಾ ಶಾಪವಾಗಿದ್ದು, ಮಳೆಯ ಪ್ರಬಾವೂ ಇಲ್ಲಿಯೇ ಹೆಚ್ಚಾಗಿ ಬೀರಿದ್ರೆ , ಕೊರೊನಾ ಪರಿಣಾಮವನ್ನ ಹೆಚ್ಚಾಗಿ ಅನುಭವಿಸಿದ ರಾಜ್ಯವೂ ಇದೇ ಆಗಿದೆ.. ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.. ಆದ್ರೆ ವರುಣ ಮಾತ್ರ ಶಾಂತನಾಗುವ ಲಕ್ಷಣ ಕಾಣುತ್ತಿಲ್ಲ.. ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ರಸ್ತೆಗಳು ಕೆರೆಯಂತೆ ಮಾರ್ಪಾಡಾಗಿವೆ.. ಅಲ್ಲಲ್ಲೆ ಗೋಡೆ ಕುಸಿತ ಭೂಮಿ ಕುಸಿತದಿಂದಾಗಿ ಹಲವರ ಜೀವ ಹೋಗಿದೆ.. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ..
ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶುಕ್ರವಾರ ಮೃತಪಟ್ಟವರ ಸಂಖ್ಯೆ 100 -110ಕ್ಕೆ ಏರಿಕೆಯಾಗಿದೆ. ಇನ್ನೂ ಕರಾವಳಿಯ ರಾಯಗಡ ಜಿಲ್ಲೆಯಲ್ಲಿ ನಡೆದ ಭೂಕುಸಿತದ 50ಮಂದಿ ಸಾವನ್ನಪ್ಪಿದ್ದು, ಇನ್ನೂ 50 ಮಂದಿ ಮಣ್ಣಿನಡಿಯಲ್ಲಿ ಸಿಲಿಕಿದ್ದಾರೆ ಎನ್ನಲಾಗಿದೆ. ರಾಯಗಡ ಜಿಲ್ಲೆಯ ಮಹಾಡ್ ತಾಲ್ಲೂಕಿನ ತಲಾಯ್ ಗ್ರಾಮದಲ್ಲಿ ಗುರುವಾರ ರಾತ್ರಿ ಭೂಕುಸಿತ ಸಂಭವಿಸಿತ್ತು. 50-60 ಮೀಟರ್ ಎತ್ತರದ ಗುಡ್ಡವು ನಿರಂತರ ಮಳೆಯಿಂದಾಗಿ ಕುಸಿದಿತ್ತು. ರತ್ನಾಗಿರಿ ಜಿಲ್ಲೆಯಲ್ಲಿಯೂ ಭೂಕುಸಿತ ಉಂಟಾಗಿದ್ದು 10 ಮಂದಿ ಮಣ್ಣಿನಡಿ ಸಿಲುಕಿರಬಹುದು ಎಂದು ಹೇಳಲಾಗಿದೆ.
ಮಾಹಾ ಮಳೆಗೆ ಗೋವಾ–ಕರ್ನಾಟಕ ಗಡಿ ಪ್ರದೇಶದಲ್ಲಿ ಭೂಕುಸಿತ ..! ಸಂಚಾರ ಸ್ಥಗಿತ
ಕನಿಷ್ಠವೆಂದರೂ 129 ಜನ ಮಹಾಮಳೆಯಿಂದಾದ ಅನಾಹುತಕ್ಕೆ ಕಳೆದೆರೆಡು ದಿನಗಳಲ್ಲಿ ಪ್ರಾಣ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರೀ ಮಳೆಯ ಕಾರಣದಿಂದ ಮಹಾರಾಷ್ಟ್ರದ ಹಲವೆಡೆ ಪ್ರವಾಹ ಪರಿಸ್ಥಿತಿಯೂ ಉಂಟಾಗಿದ್ದು, ರಾಯಗಡ ಜಿಲ್ಲೆಯ ತಲೈ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಿಂದಲೇ 38 ಮಂದಿ ಒಂದೇ ಬಾರಿಗೆ ಮೃತಪಟ್ಟಿದ್ದಾರೆ. ನೀರಿನ ರಭಸಕ್ಕೆ ಅನೇಕ ರಸ್ತೆಗಳೂ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕರಾವಳಿ ಭಾಗದಲ್ಲಿ ತೀವ್ರ ಹಾನಿಯಾಗಿದ್ದು, ರಸ್ತೆಗಳು ಕೊಚ್ಚಿ ಹೋಗಿವೆ. ಹಲವರು ಮನೆಗಳನ್ನ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ರಾಯ್ಗಡ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಅವಘಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಂತೆಯೇ, ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಹೇಳಿದೆ.








