ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹವಷ್ಟೆ : ಬೊಮ್ಮಾಯಿ Basavaraj bommayi
ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹವಷ್ಟೆ, ಯಾವುದೂ ಅಧಿಕೃತವಲ್ಲ ಎಂದು ಹೇಳಿದ್ದಾರೆ.
ನಾಯಕತ್ವ ವಿಚಾರವಾಗಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದೆಲ್ಲಾ ಕೇವಲ ಊಹಾಪೋಹವಷ್ಟೇ, ಯಾವುದೂ ಅಧಿಕೃತವಲ್ಲ.
ನಾಯಕತ್ವದ ಬದಲಾವಣೆ ಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ. ಸಿಎಂ ಹುದ್ದೆ ನನ್ನ ಹೆಸರು ಕೇಳಿ ಬರುತ್ತಿರೋದು ಕೂಡ ಊಹಾಪೋಹವಾಗಿದೆ ಎಂದು ಸಿಎಂ ರೇಸ್ ನಲ್ಲಿ ತಮ್ಮ ಹೆಸರು ಬಂದ ವಿಚಾರವಾಗಿ ಸ್ಪಷ್ಟನೆ ನೀಡಿದರು.
ಇನ್ನು ಪಕ್ಷದ ಹೈಕಮಾಂಡ್ ಹೇಳಿದನ್ನು ಪಾಲಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ನಮ್ಮ ಆದ್ಯತೆ ಪ್ರವಾಹದ ಕಡೆಯಾಗಿದೆ ಎಂದು ತಿಳಿಸಿದ್ದಾರೆ.









