ಪತಿ ಜೊತೆ ಜಗಳವಾಗಿದ್ದಕ್ಕೆ ಮೂವರು ಮಕ್ಕಳನ್ನ ಕೊಂದ ತಾಯಿ
ಉತ್ತರಪ್ರದೇಶ : ಗಂಡನ ಜೊತೆ ಜಗಳವಾಡಿದಕ್ಕೆ ಪಾಪಿ ತಾಯಿಯೊಬ್ಬಳು ತನ್ನ ನಾಲ್ವರು ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕೊಳಕ್ಕೆ ತಳ್ಳಿದ್ದಾಳೆ.. ಕೋಲಕ್ಕೆ ಬಿದ್ದ ಮೂವರ ಪೈಕಿ ಒಬ್ಬ ಮಗಳು ಮಾತ್ರ ಬದುಕುಳಿದಿದ್ದು , ಮೂವರು ಮೃತಪಟ್ಟಿದ್ದಾರೆ.. ಈ ದಾರುಣ ಘಟನೆ ಬಿಹಾರದಲ್ಲಿ ನಡೆದಿದೆ. ಗಿಲಬ್ಸಾ (8), ನುಸಬಾ ಖತೂನ್(3) ಮತ್ತು ಸಹೆಬಾ ಖತೂನ್ (2) ಮೃತರಾಗಿದ್ದಾರೆ. 5 ವರ್ಷದ ಅಫ್ರಿನಾ ಖತೂನ್ ಳನ್ನ ಸ್ಥಳೀಯರು ಕಾಪಾಡಿದ್ದಾರೆ. ನೂರ್ಜಹಾನ್ ನಿಸಾನ್ ಮತ್ತು ಅಸ್ಲಾಮ್ ಅಲಂ ದಂಪತಿ ನಡುವೆ ನಡೆದ ಜಗಳವಾಗಿದ್ದಕ್ಕೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ತಾಯಿ ಕೊಳಕ್ಕೆ ನೂಕಿದ್ದಾಳೆ.
ನೂರ್ಜಹಾನ್ ನಿಸಾನ್ ತನ್ನ ನಾಲ್ಕು ಜನ ಹೆಣ್ಣು ಮಕ್ಕಳೊಂದಿಗೆ ಬಿಹಾರ ಗೋಪಾಲಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿರುತ್ತಾಳೆ. ಪತಿ ಅಸ್ಲಾಂ ಅಲಂ ಅಬ್ರಾಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ದೂರವಾಣಿ ಕರೆಯಲ್ಲಿ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಇದಾದ ನಂತರ ನಿಸಾನ್ ಉತ್ತರಪ್ರದೇಶದ ಖುಷಿ ನಗರಕ್ಕೆ ಹೊರಟಿದ್ದಾರೆ. ಇದಕ್ಕೂ ಮುನ್ನ ಮನೆಯ ಹತ್ತಿರದಲ್ಲಿದ್ದ ಕೊಳದಲ್ಲಿ ತನ್ನ ನಾಲ್ಕೂ ಹೆಣ್ಣು ಮಕ್ಕಳನ್ನು ನೂಕಿದ್ದಾಳೆ. ಇದನ್ನ ಗಮನಿಸಿದ ಸ್ಥಳೀಯರು ತಕ್ಷಣ ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಒಂದು ಮಗುವಿನ ಜೀವ ಉಳಿದಿದ್ದು, ಮೂವರು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ನಿಸಾನ್ ನನ್ನು ಬಂಧಿಸಿದ್ದಾರೆ.








