2ನೇ ಟಿ-20 ಪಂದ್ಯ- ಸರಣಿ ಗೆಲ್ಲುವತ್ತ ಟೀಮ್ ಇಂಡಿಯಾದ ಚಿತ್ತ..!
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ-ಪಂದ್ಯ ಇಂದು (ಜುಲೈ 27) ನಡೆಯಲಿದೆ.
ಈಗಾಗಲೇ ಟೀಮ್ ಇಂಡಿಯಾ ಮೊದಲ ಟಿ-ಟ್ವೆಂಟಿ ಪಂದ್ಯವನ್ನು ಗೆದ್ದುಕೊಂಡಿದೆ. ಹೀಗಾಗಿ ಸರಣಿ ಗೆಲ್ಲುವ ಚಿತ್ತ ಟೀಮ್ ಇಂಡಿಯಾ ಮೇಲಿದೆ. ಇನ್ನೊಂದೆಡೆ ತವರಿನಲ್ಲಿ ಮುಖಭಂಗವನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದೆ ಶ್ರೀಲಂಕಾ
ಕಳೆದ 14 ಪಂದ್ಯಗಳಲ್ಲಿ ಶ್ರೀಲಂಕಾ ತಂಡ ತೀರಾ ಕಳಪೆ ಮಟ್ಟದ ಪ್ರದರ್ಶನ ನೀಡಿದೆ. 13 ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿದೆ.
ಇನ್ನು ಟೀಮ್ ಇಂಡಿಯಾದಲ್ಲಿ ಹೊಸ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗೋದು ಕಷ್ಟ.
ಇನ್ನು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ. ಇನ್ನುಳಿದಂತೆ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಆದ್ರೂ ಹಾರ್ದಿಕ್ ಪಾಂಡ್ಯ ಬದಲು ಕೆ. ಗೌತಮ್‍ಗೆ ಅವಕಾಶ ಸಿಕ್ಕಿದ್ರೂ ಅಚ್ಚರಿಪಡಬೇಕಿಲ್ಲ.
ಇನ್ನೊಂದೆಡೆ ಶ್ರೀಲಂಕಾ ತಂಡ ಬ್ಯಾಟಿಂಗ್ ನಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ. ತಂಡದಲ್ಲಿ ಅನುಭವ ಮತ್ತು ಪರಿಸ್ಥಿತಿಗೆ ತಕ್ಕಂತೆ ಆಡುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕಿದೆ.
ಟೀಮ್ ಇಂಡಿಯಾದ ಸಂಭವನೀಯ 11ರ ಬಳಗ
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಸಂಜು ಸಾಮ್ಸನ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶಾನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಯುಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ.








