ಸಂಜೆ ಶಾಸಕಾಂಗ ಪಕ್ಷ ಸಭೆ – ಇಂದೇ ನೂತನ ಸಿಎಂ ಘೋಷಣೆಯಾಗುತ್ತಾ..?
ಸಿಎಂ ಬಿ ಎಸ್ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.. ಹತ್ತಾರು ನಾಯಕರ ಹೆಸರು ಸಿಎಂ ರೇಸ್ ನಲ್ಲಿದೆ.. ಇಂದು ಸಂಜೆ ಸಾಸಕಾಂಗ ಸಭೆಯ ನಂತರ ನೂತನ ಸಿಎಂ ಘೋಷಣೆಯಾಗುವ ನಿರೀಕ್ಷೆಯೂ ಇದೆ..
ಇಂದು ಸಂಜೆ ಯಡಿಯೂರಪ್ಪ ಹಾಗೂ ಅರುಣ್ ಸಿಂಗ್ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಿಗಧಿಯಾಗಿದೆ.. ಖಾಸಗಿ ಹೋಟೆಲ್ ನಲ್ಲಿ ಸಭೆ ನಿಗಧಿಯಾಗಿದ್ದು, ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳು ಸಾಧ್ಯತೆ ಇದೆ.. ಆದ್ರೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈ ಸಭೆಯಲ್ಲಿ ಭಾಗಿಯಾಗ್ತಾರಾ ಎನ್ನುವ ಗೊಂದಲಗಳು ಕೂಡ ಮೂಡಿಬಂದಿವೆ..
ಇನ್ನೂ ಸಚಿವ ಸಿಟಿ ರವಿ , ಪ್ರಹ್ಲಾದ್ ಜೋಶಿ , ಬೆಲ್ಲದ್, ನಿರಾಣಿ ಸೇರಿದಂತೆ ಅನೇಕರ ಹೆಸರುಗಳು ಸಿಎಂ ರೇಸ್ ನಲ್ಲಿದ್ದು, ಹೈ ಕಮಾಂಡ್ ಯಾರಿಗೆ ಮಣೆ ಹಾಕುತ್ತೆ.. ಯಾರಾಗ್ತಾರೆ ಕರುನಾಡಿನ ಮುಂದಿನ ಸಿಎಂ ಅನ್ನುವ ಕುತೂಹಲ ಮೂಡಿದೆ..