ಲಂಕಾ ಟಿ-20 ಸರಣಿ | ಟೀಂ ಇಂಡಿಯಾದಿಂದ ಮತ್ತೊಬ್ಬ ಆಟಗಾರ ಔಟ್..?
ಬೆಂಗಳೂರು : ಯಾಕೋ ಏನೋ ಶ್ರೀಲಂಕಾ ವಿರುದ್ಧದ ಟಿ 20 ಸರಣಿಯಲ್ಲಿ ಟೀಂ ಇಂಡಿಯಾದ ನಸೀಬೇ ಸರಿಯಿಲ್ಲ ಅನ್ಸುತ್ತೆ.
ಮೊದಲ ಟಿ 20 ಪಂದ್ಯ ಗೆದ್ದು ಭಾರಿ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಕೊರೊನಾ ವೈರಸ್ ಹೆಮ್ಮಾರಿಯಾಗಿ ವಕ್ಕರಿಸಿತು.
ಆಲ್ ರೌಂಡರ್ ಕೃನಾಲ್ ಪಾಂಡೆಗೆ ಸೋಂಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಏಂಟು ಮಂದಿ ಆಟಗಾರರನ್ನು ಐಸೋಲೇಷನ್ ಮಾಡಲಾಯಿತು.
ಇದರೊಂದಿಗೆ ಹೊಸ ಪಡೆಯೊಂದಿಗೆ ಅಖಾಡಕ್ಕಿಳಿದ ಭಾರತಕ್ಕೆ ಶ್ರೀಲಂಕಾ ಸೋಲುಣಿಸಿತು.
ಇಂದು ಅಂತಿಮ ಮತ್ತು ನಿರ್ಣಯಕ ಪಂದ್ಯ ನಡೆಯಲಿದ್ದು, ಟಿಂ ಇಂಡಿಯಾದಿಂದ ಮತ್ತೊಂದು ನಿರಾಶೆ ಸುದ್ದಿ ಹೊರ ಬಿದ್ದಿದೆ.
ಟೀಂ ಇಂಡಿಯಾದ ವೇಗದ ಬೌಲರ್ ನವದೀಪ್ ಸೈನಿ ಎರಡನೇ ಟಿ 20 ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದಾರೆ.
ನವದೀಪ್ ಸೈನಿ ಭುಜದ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.
ಈ ಬಗ್ಗೆ ಭಾರತ ತಂಡದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮಾಹಿತಿ ನೀಡಿದ್ದು, ನವದೀಪ್ ಸೈನಿಯ ಆರೋಗ್ಯದ ಬಗ್ಗೆ ನಿಗಾ ಇಡಲಾಗುತ್ತಿದೆ.
ನವದೀಪ್ ಸೈನಿ, ಮೂರನೇ ಪಂದ್ಯದಲ್ಲಿ ಆಡುವುದು ಕಷ್ಟ ಎನ್ನಲಾಗ್ತಿದೆ ಎಂದಿದ್ದಾರೆ.