ಟೋಕಿಯೋ ಒಲಿಂಪಿಕ್ಸ್ : ಭಾರತಕ್ಕೆ ರಣರೋಚಕ ಗೆಲುವು
ಟೋಕಿಯೋ : ಸೌತ್ ಆಫ್ರಿಕಾ ಮಹಿಳಾ ಹಾಕಿ ತಂಡದ ವಿರುದ್ಧ ಭಾರತದ ಮಹಿಳಾ ಹಾಕಿ ತಂಡ ರಣರೋಚಕ ಗೆಲುವು ಸಾಧಿಸಿದೆ.
ಇಂದು ನಡೆದ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನದೊಂದಿಗೆ ಸೌತ್ ಆಫ್ರಿಕಾ ವಿರುದ್ಧ 4-3 ಅಂತರಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಕ್ವಾರ್ಟರ್ ಫೈನಲ್ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ.
ಇನ್ನು ಗ್ರೂಪ್ ಎನಲ್ಲಿ ಭಾರತಕ್ಕೆ ಇದು ಎರಡನೇ ಗೆಲುವುದಾಗಿದ್ದು, ಮೊದಲಾರ್ಧದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು 2-2 ಗೋಲ್ ಗಳನ್ನು ಪಡೆದು ಆಟ ಮುಂದುವರೆಸಿದ್ದವು.
ಬಳಿಕ ಆಟ ರೋಚಕತೆಯಿಂದ ಕೂಡಿತ್ತು. ಬಳಿಕ ಉಭಯ ತಂಡಗಳು 3-3 ಗೋಲ್ ಗಳನ್ನು ಗಳಿಸಿದ್ದು, ಕೊನೆಯ ಕ್ಷಣದಲ್ಲಿ ಭಾರತದ ಪರವಾಗಿ ಕಟಾರಿಯಾ ಅವರು ಗೆಲುವಿನ ಗೋಲು ಬಾರಿಸಿದರು.
ಭಾರತದ ಪರ ವಂದನಾ ಕಟಾರಿಯಾ ಮೂರು ಗೋಲ್ ಗಳು ಮತ್ತು ನೇಹಾ ಒಂದು ಗೋಲ್ ಬಾರಿಸುವ ಮೂಲಕ ತಂಡದ ಗೆಲುವಿನ ರುವಾರಿಗಳಾದ್ರು. ಗ್ರೇಟ್ ಬ್ರಿಟನ್, ಐಲೆರ್ಂಡ್ ನಡುವಿನ ಪಂದ್ಯದ ಮೇಲೆ ಭಾರತ ಹಾಕಿ ತಂಡದ ಭವಿಷ್ಯ ನಿಂತಿದೆ.









